*ವಸಂತ ಬಿ ಈಶ್ವರಗೆರೆ
ಬೆಂಗಳೂರು: ಬಹುತೇಕ ಮಕ್ಕಳಿಗೆ ಬಾಂಬೆ ಮಿಠಾಯಿ ಅಂದ್ರೆ ತುಂಬಾನೇ ಪ್ರೀತಿ. ದಾರಿಯಲ್ಲಿ ಕಂಡ್ರೆ ಸಾಕು ಪೋಷಕರನ್ನು ಕಾಡಿ ಬೇಡಿ ಕೊಡಿಸಿಕೊಂಡು ತಿನ್ನೋ ಮಕ್ಕಳೇ ಜಾಸ್ತಿ. ಆದರೇ ಪೋಷಕರೇ ನೀವು ನಿಮ್ಮ ಮಕ್ಕಳಿಗೆ ಬಾಂಬೆ ಮಿಠಾಯಿ ಕೊಡಿಸ್ತಾ ಇದ್ದೀರಿ ಅಂದ್ರೇ, ಈಗ ಎಚ್ಚರಿಕೆ ವಹಿಸಬೇಕಿದೆ. ಅದು ಯಾಕೆ ಅನ್ನೋ ಶಾಕಿಂಗ್ ನ್ಯೂಸ್ ಮುಂದೆ ಓದಿ.
ಗಂಟೆ ಅಲ್ಲಾಡಿಸಿಕೊಂಡು, ಬೀದಿ ಬೀದಿಯಲ್ಲಿ ಸುತ್ತುತ್ತಾ ಮಾರಾಟ ಮಾಡುವಂತ ಬಾಂಬೆ ಮಿಠಾಯಿ ಅರ್ಥಾತ್ ಕ್ಯಾಂಡಿಗೆ ಮಾರು ಹೋಗದ ಮಕ್ಕಳಿಲ್ಲ. ಅದರ ರುಚಿಗೆ ಜೋತು ಬಿದ್ದ ಅನೇಕ ಮಕ್ಕಳು ಗಂಟೆ ಶಬ್ದ ಕೇಳಿದರೇ ಸಾಕು ಪೋಷಕರಿಂದ ಹಣ ಪಡೆದು ಖರೀದಿಸಿ, ಬಾಯಿ ಚಪ್ಪರಿಸಿಕೊಂಡು ತಿಂದು ಬಿಡುತ್ತಾರೆ. ಈ ಮೂಲಕ ಕ್ಯಾಂಡಿಯ ಸ್ವಾದವನ್ನು ಸವಿಯುತ್ತಾರೆ.
ತಮಿಳುನಾಡು, ಪುದುಚೇರಿಯಲ್ಲಿ ಕ್ಯಾಂಡಿ ಬ್ಯಾನ್
ಆದರೇ ಮಕ್ಕಳ ಫೇವರಿಟ್ ಬಾಂಬೆ ಮಿಠಾಯಿಯನ್ನು ತಮಿಳುನಾಡು ಹಾಗೂ ಪುದುಚೇರಿ ರಾಜ್ಯಗಳಲ್ಲಿ ಸರ್ಕಾರವು ನಿಷೇಧಿಸಿದೆ. ಇದಕ್ಕೆ ಕಾರಣ ಅದರ ಬಣ್ಣದಲ್ಲಿ ಮಾರಣಾಂತಿಕ ಕ್ಯಾನ್ಸರ್ ಅಂಶ ಪತ್ತೆಯಾಗಿರೋದಾಗಿದೆ. ಈ ಕಾರಣಕ್ಕೆ ಈ ಎರಡು ರಾಜ್ಯಗಳಲ್ಲಿ ಬಾಂಬೆ ಮಿಠಾಯಿ ಮಾರಾಟವನ್ನು ನಿಷೇಧಿಸಲಾಗಿದೆ.
ಪರೀಕ್ಷೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ರೋಡ್ ಮೈನ್ ಬಿ ಪತ್ತೆ
ಅಂದಹಾಗೇ ತಮಿಳುನಾಡು ಸರ್ಕಾರದಿಂದ ಪ್ರಯೋಗಾಲಯದ ಮೂಲಕ ಪರೀಕ್ಷೆಗೆ ಒಳಪಡಿಸಿದಾಗ, ಬಾಂಬೆ ಮಿಠಾಯಿಯಲ್ಲಿ ಮಾರಣಾಂತಿಕ ಕ್ಯಾನ್ಸರ್ ಗೆ ಕಾರಣವಾಗಿರೋ ರೋಡ್ ಮೈನ್ ಬಿ ಎಂಬುದು ಪತ್ತೆಯಾಗಿದೆ. ಇದು ಕ್ಯಾನ್ಸರ್ ಗೆ ದೂಡಲಿದೆ ಎಂಬುದಾಗಿ ಹೇಳಲಾಗುತ್ತಿದೆ.
ಶೀಘ್ರವೇ ಕರ್ನಾಟಕದಲ್ಲೂ ಬಾಂಬೆ ಮಿಠಾಯಿ ನಿಷೇಧ
ತಮಿಳುನಾಡು, ಪುದುಚೇರಿಯಲ್ಲಿ ಬಾಂಬೆ ಮಿಠಾಯಿ ಮಾರಾಟ ನಿಷೇಧಿಸಿದಂತೆ, ಕರ್ನಾಟಕದಲ್ಲೂ ರಾಜ್ಯ ಸರ್ಕಾರವು ಮಕ್ಕಳ ಫೇವರಿಟ್ ಕ್ಯಾಂಡಿಯನ್ನು ನಿಷೇಧಿಸೋ ಚಿಂತನೆಯನ್ನು ನಡೆಸಿದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಅದರಲ್ಲಿ ಕ್ಯಾನ್ಸರ್ ಗೆ ಕಾರಣವಾಗುವಂತ ರೋಡ್ ಮೈನ್ ಬಿ ಎಂಬ ಅಂಶವಿರೋದಾಗಿದೆ.
ಪೋಷಕರೇ ಮಕ್ಕಳಿಗೆ ಬಾಂಬೆ ಮಿಠಾಯಿ ಕೊಡಿಸಬೇಡಿ, ಕ್ಯಾನ್ಸರ್ ಗೆ ಕಾರಣವಾಗಬಹುದು
ಸೋ ಬಾಂಬೆ ಮಿಠಾಯಿಯನ್ನು ಮಕ್ಕಳು ಎಷ್ಟೇ ಇಷ್ಟ ಪಟ್ಟು ತಿನ್ನುತ್ತಾರೆ ಅಂದರೂ, ಪೋಷಕರಾದಂತ ನೀವು ಇನ್ಮುಂದೆ ಕೊಡಿಸಬೇಡಿ. ಕೊಡಿಸಿ ನಿಮ್ಮ ಮಕ್ಕಳ ದೇಹದೊಳಗೆ ಮಾರಕ ಕ್ಯಾನ್ಸರ್ ಗೆ ಕಾರಣವಾಗುವಂತ ರೋಡ್ ಮೈನ್ ಬಿ ಸೇರುವಂತೆ ಮಾಡಬೇಡಿ.
ಹೀಗಾಗಿ ಮಕ್ಕಳ ಪೋಷಕರಾದಂತ ನೀವು ಕ್ಯಾಂಡಿಯ ಬಗ್ಗೆ ಎಚ್ಚರಿಕೆ ವಹಿಸೋ ತುರ್ತು ಈಗ ಒದಗಿ ಬಂದಿದೆ. ಮಕ್ಕಳ ಆರೋಗ್ಯದ ಬಗ್ಗೆ ಹತ್ತು ಹಲವು ದೃಷ್ಠಿಕೋನಗಳಿಂದ ಕಾಳಜಿ ವಹಿಸೋ ನೀವು, ಈಗ ಬಾಂಬೆ ಮಿಠಾಯಿ ವಿಚಾರದಲ್ಲೂ ಎಚ್ಚರಿಕೆಯ ಹೆಜ್ಜೆ ಇಡೋ ತುರ್ತು ಸಂದರ್ಭ ಎದುರಾಗಿದೆ. ಯಾವುದೇ ಕಾರಣಕ್ಕೂ ಬಾಂಬೆ ಮಿಠಾಯಿ ಕೊಡಿಸದೇ, ಮಕ್ಕಳು ತಿನ್ನದಂತೆ ಎಚ್ಚರಿಕೆ ವಹಿಸೋದು ಮರೆಯಬೇಡಿ.