ನವದೆಹಲಿ : ಮಕ್ಕಳ ವೈಯಕ್ತಿಕ ಡೇಟಾವನ್ನ ಸಂಸ್ಕರಿಸುವ ಮೊದಲು ಪೋಷಕರ ಒಪ್ಪಿಗೆಯನ್ನ ಪಡೆಯಬೇಕು ಎಂದು ಹೇಳುವ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ನಿಯಮಗಳ ಬಹುನಿರೀಕ್ಷಿತ ಕರಡನ್ನು ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದೆ.
ಹೌದು, ಇಂದು ಬಿಡುಗಡೆಯಾದ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ನಿಯಮಗಳ ಕರಡು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಈಗ ಸಾಮಾಜಿಕ ಮಾಧ್ಯಮ ಖಾತೆಗಳನ್ನು ರಚಿಸಲು ಪೋಷಕರ ಒಪ್ಪಿಗೆ ಅಗತ್ಯವಿದೆ ಎಂದು ಹೇಳುತ್ತದೆ.
ಡಿಪಿಡಿಪಿ ನಿಯಮಗಳ ಬಹುನಿರೀಕ್ಷಿತ ಕರಡು “ಮಕ್ಕಳ ವೈಯಕ್ತಿಕ ಡೇಟಾವನ್ನು ಸಂಸ್ಕರಿಸುವ ಮೊದಲು ಡೇಟಾ ಸಂಗ್ರಹಿಸುವ ಘಟಕದಿಂದ ಪೋಷಕರ ಪರಿಶೀಲಿಸಬಹುದಾದ ಒಪ್ಪಿಗೆಯನ್ನು ಪಡೆಯಬೇಕು” ಎಂದು ಹೇಳುತ್ತದೆ.
ಆದಾಗ್ಯೂ, ಉಲ್ಲಂಘನೆಗಾಗಿ ಯಾವುದೇ ದಂಡನಾತ್ಮಕ ಕ್ರಮವನ್ನು ಕರಡು ಉಲ್ಲೇಖಿಸಿಲ್ಲ ಎಂದು ವರದಿಯಾಗಿದೆ.
“ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ, 2023 (2023 ರ 22) ರ ಸೆಕ್ಷನ್ 40 ರ ಉಪ-ವಿಭಾಗಗಳು (1) ಮತ್ತು (2) ರ ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಚಲಾಯಿಸಲು ಕೇಂದ್ರ ಸರ್ಕಾರ ಮಾಡಲು ಉದ್ದೇಶಿಸಿರುವ ನಿಯಮಗಳ ಕರಡನ್ನು ಕಾಯ್ದೆ ಜಾರಿಗೆ ಬಂದ ದಿನಾಂಕದಂದು ಅಥವಾ ನಂತರ ಈ ಮೂಲಕ ಪರಿಣಾಮ ಬೀರುವ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಂದ್ಹಾಗೆ, ಈ ಕರಡು ನಿಯಮಗಳನ್ನ ಫೆಬ್ರವರಿ 18ರ ನಂತರ ಅಂತಿಮ ನಿಯಮಕ್ಕಾಗಿ ಗಣನೆಗೆ ತೆಗೆದುಕೊಳ್ಳಲಾಗುವುದು.
ಬೈಡನ್ ಪತ್ನಿಗೆ ‘ಪ್ರಧಾನಿ ಮೋದಿ’ ದುಬಾರಿ ಗಿಫ್ಟ್ ; 20,000 ಡಾಲರ್ ವಜ್ರ ಉಡುಗೊರೆ
ಬೈಡನ್ ಪತ್ನಿಗೆ ‘ಪ್ರಧಾನಿ ಮೋದಿ’ ದುಬಾರಿ ಗಿಫ್ಟ್ ; 20,000 ಡಾಲರ್ ವಜ್ರ ಉಡುಗೊರೆ
BREAKING : ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ ; ‘ಜಿಲ್ಲಾಧಿಕಾರಿ ಕಚೇರಿ’ ಮೇಲೆ ದಾಳಿ