ಮಂಡ್ಯ: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಗೆ ಪಂಚತಾರ ವ್ಯವಸ್ಥೆ ಇದೆ. ಈಗ ದರ್ಶನ್ ವಿಚಾರದಲ್ಲಿ ಅದು ಪ್ರಚಾರಕ್ಕೆ ಬಂದಿದೆ ಎಂಬುದಾಗಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಜೈಲಿನ ವ್ಯವಸ್ಥೆ ಹೊಸದಾಗಿ ಆಗಿಲ್ಲ, ಹಿಂದಿನಿಂದಲೂ ನಡೆಯುತ್ತಾ ಇದೆ. ಹಿಂದೆ ಡಿಜಿ ಮತ್ತು ಡಿಸಿಪಿ ನಡುವೆ ದೊಡ್ಡ ಗಲಾಟೆ ಆಗಿತ್ತು. ತನಿಖೆ ನಡೆಯಬೇಕು ಎಂದು ಗಲಾಟೆ ಆಗಿತ್ತು. ಪರಪ್ಪನ ಅಗ್ರಹಾರದಲ್ಲಿರುವ ಖೈದಿಗಳಿಗೆ ಪಂಚತಾರ ವ್ಯವಸ್ಥೆ ಇದೆ. ಈಗ ದರ್ಶನ್ ವಿಚಾರದಲ್ಲಿ ಅದು ಪ್ರಚಾರಕ್ಕೆ ಬಂದಿದೆ. ಸರ್ಕಾರ ಆ ಖೈದಿಗಳನ್ನು ಬೇರೆ ಕಡೆಗೆ ವರ್ಗಾಯಿಸಬೇಕು ಎಂದು ತೀರ್ಮಾನ ಮಾಡ್ತಾ ಇದ್ಯಂತೆ. ಈ ಸರ್ಕಾರದ ಜನರಿಗೆ ನಂಬಿಕೆ ಬರಲು ಸಾಧ್ಯ ಇಲ್ಲ. ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎಂಬುದಾಗಿ ಕಿಡಿಕಾರಿದರು.
ರಾಜ್ಯದಲ್ಲಿ ಆಡಳಿತ ಎನ್ನುವ ನಡವಳಿಕೆ ಇಲ್ಲ. ಭ್ರಷ್ಟಾಚಾರದ ಬಗ್ಗೆ ಬೀದಿ ಬೀದಿಯಲ್ಲಿ ಮಾತಾಡಿಕೊಂಡು ಇರುವ ಕೆಲಸ ಮಾಡ್ತಾ ಇದ್ದಾರೆ. ಸರ್ಕಾರದಲ್ಲಿ ಮಂತ್ರಿಗಳಿಗೆ ಕೆಲಸವಿಲ್ಲ. ಸಿಎಂಗೆ ಅವರ ಹಗರಣ ಬಗ್ಗೆ ಮಾತಾಡಲು ಸಮಯ ಸಾಕಾಗುತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ದುಡ್ಡು ಇದ್ರೆ ಏನು ಬೇಕಾದರೂ ಕೊಂಡುಕೊಳ್ಳಬಹುದು ಎಂದು ಗುಡುಗಿದರು.
ರೇಣುಕಾಸ್ವಾಮಿ ಕುಟುಂಬಸ್ಥರು ಅವರ ನೋವು ಹೇಳಿಕೊಳ್ಳುತ್ತಾರೆ. ಪರಮೇಶ್ವರ್ ಅವರು ಪ್ರತಿ ದಿನ ಒಂದೊಂದು ಕಥೆ ಹೇಳ್ತಾರೆ. ಪಾರದರ್ಶಕವಾದ ಸರ್ಕಾರ ಮಾಡ್ತಾ ಇದೀನಿ. ನಮ್ಮದು ಹೈಟೆಕ್ ಸರ್ಕಾರ ಅಂತಾರೆ. ಪರಪ್ಪನ ಅಗ್ರಹಾರದಲ್ಲಿ ಕೊಡ್ತಾ ಇರುವುದೇ ಹೈಟೆಕ್. ಅವರು ಮಾಡಿರುವ ತಪ್ಪುಗಳನ್ನು ಮುಚ್ಚಿಕೊಳ್ಳಲು ಡೈವರ್ಟ್ ಮಾಡ್ತಾ ಇದ್ದಾರೆ. ಅಧಿಕಾರಿಗಳಿಂದ ನ್ಯಾಯ ದೊರಕಲ್ಲ. ನ್ಯಾಯಾಲಯದಿಂದ ನ್ಯಾಯ ದೊರಬೇಕು. ಇದಕ್ಕೆ ಸರ್ಕಾರವೇ ಹೊಣೆ ಆಗಬೇಕು. ಆದರೆ ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎಂದು ಕಿಡಿಕಾರಿದರು.
‘ನಟ ದರ್ಶನ್’ಗೆ ಜೈಲಲ್ಲೇ ರಾಜಾಥಿತ್ಯ: ಫೋಟೋ ತೆಗೆಯಲು ‘ಮೊಬೈಲ್’ ಎಲ್ಲಿಂದ ಬಂತು?-ಆರ್.ಅಶೋಕ್ ಪ್ರಶ್ನೆ
Job Alert : ಭಾರತೀಯ ರೈಲ್ವೆ ಇಲಾಖೆಯಲ್ಲಿ 14,298 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | RRB Recruitment 2024