ಮಂಡ್ಯ : ರಾಜ್ಯ ಸರ್ಕಾರದಿಂದ ಮಂಡ್ಯಕ್ಕೆ ಕೃತಕ ಬರ ನಿರ್ವಹಣೆಯಾಗಿದೆ ಎಂದು ಮಾಜಿ ಸಚಿವ ಸಿಎಸ್ ಪುಟ್ಟರಾಜು ಆಕ್ರೋಶ ವ್ಯಕ್ತ ಪಡೆಸಿದ್ದಾರೆ.
ಪಾಂಡವಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಸಿಎಸ್ “ರಾಜ್ಯದಲ್ಲೆ ಬರದ ಪರಿಸ್ಥಿತಿ ಇದ್ದು, ಸರ್ಕಾರ ಮಂಡ್ಯಕ್ಕೆ ಕೃತಕ ಬರವನ್ನ ನಿರ್ವಹಣೆ ಮಾಡಿದೆ. KRS ನಲ್ಲಿ 60ಅಡಿ ಇದ್ದ ಸಂದರ್ಭದಲ್ಲೂ ಬೆಳೆಗಳಿಗೆ ನಾಲೆಗಳ ಮೂಲಕ ನೀರು ಕೊಟಿದ್ವಿ. ನೀರಾವರಿ ಇಲಾಖೆ ಅಧಿಕಾರಿಗಳು ಇಡೀ ವ್ಯವಸ್ಥೆಯನ್ನು ಹಾಳುಮಾಡಿದ್ದಾರೆ. ಇದಕ್ಕೆಲ್ಲ ರಾಜ್ಯ ಸರ್ಕಾರವೇ ನೇರ ಹೊಣೆ” ಎಂದು ಕಿಡಿಕಾರಿದ್ರು.
ಇನ್ನು ಒಂದು ವಾರದಲ್ಲಿ ಕಟ್ಟು ನೀರನ್ನ ಬಿಟ್ಟು ಬೆಳೆ ಉಳಿಸಬೇಕು. ಇಲ್ಲದಿದ್ದರೆ ರೈತರಿಂದ ಜಿಲ್ಲಾಧ್ಯಂತ ಉಗ್ರ ಹೋರಾಟ ಮಾಡುತ್ತೇವೆ. ಸರ್ಕಾರ ತಕ್ಷಣವೇ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಇನ್ನು ಇದೇ ವೇಳೆ ಡಿಕೆಶಿ ಜೊತೆಗಿನ ತಮ್ಮ ಫೋಟೊ ವೈರಲ್ ವಿಚಾರಕ್ಕೆ ಪ್ರತಿಯಿಸಿದ್ದು, “ಈ ಫೋಟೊ ವೈರಲ್ ಮಾಡಿ ಸಣ್ಣ ತನದ ರಾಜಕಾರಣ ಅರ್ಥವಾಗುತ್ತದೆ. ನಾನು ಡಿಕೆ ಶಿವಕುಮಾರ್ ಕುಮಾರಸ್ವಾಮಿ ಅವರ ಕ್ಯಾಬಿನೆಟ್’ನಲ್ಲಿ ಕೆಲಸ ಮಾಡಿದ್ದೇವೆ. ಕಳೆದ ನಿಖಿಲ್ ಚುನಾವಣೆಯಲ್ಲೂ ಜೊತೆಗೆ ಇದ್ದು ಚುನಾವಣೆ ಮಾಡಿದ್ವಿ. ವಿಶ್ವಾಸದಲ್ಲಿ ಅವರು ಕೆಪಿಸಿಸಿ ಅಧ್ಯಕ್ಷರಾದ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದೆ. ಅದನ್ನೆ ಇವಾಗ ವೈರಲ್ ಮಾಡ್ತಿದ್ದಾರೆ. ಕಾಂಗ್ರೆಸ್’ಗೆ ಪಾಪಾ ಈ ಸ್ಥಿತಿ ಬರಬಾರದಿತ್ತು. ನಾನು ಡಿಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿ ಎರಡೂ ವರ್ಷ ಆಗಿದೆ. ಯಾವುದಾದರೂ ಮದುವೆಯಲ್ಲಿ ಎದರುಬದರು ಭೇಟಿ ಬಿಟ್ರೆ ಇನ್ನೇಲ್ಲು ಇಲ್ಲ. ಇದನ್ನ ಅಪಪ್ರಚಾರ ಮಾಡ್ತಿದ್ದಾರೆ ಅಷ್ಟೆ” ಎಂದರು.
ಇನ್ನು ಲೋಕಸಭೆ ಚುನಾವಣೆ ಬಗ್ಗೆ ಬಹುತೇಕ ನೂರಕ್ಕೆ ನೂರು ಭಾಗ ಜಿಲ್ಲೆಯ ಜನ ತೀರ್ಮಾನ ತೆಗೆದುಕೊಂಡಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಚಂಡ ಬಹುಮತದಿಂದ ಗೆಲ್ಲುವ ವಾತಾವರಣ ಇದೆ. ಶ್ರೀರಾಮನ ಆಶೀರ್ವಾದದಿಂದ ಪ್ರಧಾನಿ ಮೋದಿ,ಹಾಗೂ ದೇವೇಗೌಡ್ರುನ ಬೆಂಬಲಿಸಲು ತೀರ್ಮಾನ ಮಾಡಿದ್ದಾರೆ. 28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ತಾರೆ” ಎಂದು ಪುಟ್ಟರಾಜು ಹೇಳಿದರು.
‘ಸಮುದ್ರದ ಕೆಳಗಿರುವ ಸುರಂಗವು 320 ವೇಗ ಹೊಂದಿರುತ್ತೆ’ : ಹೈಸ್ಪೀಡ್ ರೈಲಿನ ಕುರಿತು ರೈಲ್ವೆ ಸಚಿವರಿಂದ ಮಹತ್ವದ ಮಾಹಿತಿ
‘ಬಿಜೆಪಿ’ ಟಿಕೆಟ್ ಸಿಗದಿದ್ರು ಮಂಡ್ಯದಲ್ಲೆ ‘ಸುಮಲತಾ’ ಸ್ಪರ್ಧೆ : ಆಪ್ತ ಶಶಿಕುಮಾರ್ ಶಾಕಿಂಗ್ ಹೇಳಿಕೆ
BREAKING : ಹಲ್ದ್ವಾನಿ ಹಿಂಸಾಚಾರದ ಮಾಸ್ಟರ್ ಮೈಂಡ್ ‘ಅಬ್ದುಲ್ ಮಲಿಕ್’ ಬಂಧನ