ದಾವಣಗೆರೆ: ರಂಜಾನ್ ಉಪವಾಸದಿಂದ ಹಸಿವಾಗಿದ್ದಂತ ಆ ಮಕ್ಕಳು, ಉಪವಾಸ ವ್ರತ ಅಂತ್ಯವಾಗಿದ್ದೇ ತಡ ನಾ ಮುಂದು, ತಾ ಮುಂದು ಅಂತ ಪಾನಿಪೂರಿ ಸೇವಿಸಿದ್ದರು. ಆದ್ರೇ ಹೀಗೆ ಸೇವಿಸಿದಂತ ಪಾನಿಪೂರಿಗೆ ಆ ಬಾಲಕನ ಪ್ರಾಣಕ್ಕೆ ಕುತ್ತುಂಟು ಮಾಡಿದೆ. ದಾವಣಗೆರೆಯಲ್ಲಿ ಪಾನಿಪೂರಿ ಸೇವಿಸಿದಂತ ಬಾಲಕನೋರ್ವ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಾರ್ಚ್.15ರಂದು ದಾವಣೆಗೆರೆಯ ಮಲೆಬೆನ್ನೂರಿನಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಉಪವಾಸವಿದ್ದಂತ 19 ಮಕ್ಕಳು ಉಪವಾಸ ವ್ರತ ಮುಗಿದ ಬಳಿಕ ಪಾನಿಪೂರಿ ಸೇವಿಸಿದ್ದಾರೆ. ಪಾನಿಪೂರಿ ತಿಂದ ನಂತ್ರ ಹೊಟ್ಟೆ ನೋವು, ವಾಂತಿ ಬೇಧಿ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಮಾರ್ಚ್.15ರಿಂದ ಇಂದಿನವರೆಗೆ ಚಿಕಿತ್ಸೆ ಪಡೆದಂತ ಕೆಲ ಮಕ್ಕಳು ಗುಣಮುಖರಾಗಿದ್ದಾರೆ. ಆದ್ರೇ ತೀವ್ರವಾಗಿ ಅಸ್ವಸ್ಥಗೊಂಡಿದ್ದಂತ ಹಜರತ್ ಬಿಲಾಲ್ ಪುತ್ರ ಇರ್ಫಾನ್(6) ಎಂಬಾತ ಮಾತ್ರ, ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಮಲೆ ಬೆನ್ನೂರಿನ ಜಾಮಿಯಾ ಮಸೀದಿಯ ಪಕ್ಕದಲ್ಲಿ ಮಾರಾಟ ಮಾಡುತ್ತಿದ್ದಂತ ಪಾನಿಪೂರಿ ಸೇವಿಸಿ ಈ ದುರಂತ ಸಂಭವಿಸಿದೆ. ಈ ಸಂಬಂಧ ಹರಿಹರ ತಾಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಾವಾಸ್ಯೆ ತಿಥಿಯಂದು ಈ ದೀಪವನ್ನು ಹಚ್ಚಿದರೆ ಸಾಕು. ಪೂರ್ವಿಕರ ಶಾಪ, ಪಿತೃ ದೋಷ ನಿವಾರಣೆ
‘ಚುನಾವಣಾ ಬಾಂಡ್’ ಅಂಕಿಅಂಶ ಬಹಿರಂಗ: ಯಾವ ಪಕ್ಷ? ಎಷ್ಟು ‘ದೇಣಿ’ಗೆ ಸ್ವೀಕಾರ? ಇಲ್ಲಿದೆ ಮಾಹಿತಿ | Electoral bonds