ನೀವು ಪ್ಯಾನ್ ಕಾರ್ಡ್ ಹೊಂದಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಏಪ್ರಿಲ್ 1 ರಿಂದ ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿಗೆ ಬರಲಿವೆ. ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ನಲ್ಲಿರುವ ವಿವರಗಳು ಒಂದಕ್ಕೊಂದು ತಾಳೆಯಾಗದಿದ್ದರೆ (Mismatch), ನಿಮ್ಮ ಪ್ಯಾನ್ ಕಾರ್ಡ್ ತಕ್ಷಣವೇ ರದ್ದಾಗುವ ಸಾಧ್ಯತೆಯಿದೆ.
ಹೆಸರು ಹೊಂದಾಣಿಕೆ ಕಡ್ಡಾಯ
ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಸರಿಯಾಗಿ ಮ್ಯಾಚ್ ಆಗಿರಬೇಕು. ಒಂದು ವೇಳೆ ಹೆಸರಿನ ಸ್ಪೆಲ್ಲಿಂಗ್‌ನಲ್ಲಿ ವ್ಯತ್ಯಾಸವಿದ್ದರೆ ಅಥವಾ ಆಧಾರ್‌ನಲ್ಲಿರುವಂತೆ ಪ್ಯಾನ್ ಕಾರ್ಡ್‌ನಲ್ಲಿ ಹೆಸರಿಲ್ಲದಿದ್ದರೆ, ಏಪ್ರಿಲ್ 1ರ ನಂತರ ನಿಮ್ಮ ಕಾರ್ಡ್ ಅಮಾನ್ಯವಾಗಬಹುದು. ಆದ್ದರಿಂದ, ಕೂಡಲೇ ನಿಮ್ಮ ಸ್ಮಾರ್ಟ್‌ಫೋನ್ ಮೂಲಕವೇ ಮನೆಯಲ್ಲಿ ಕುಳಿತು ಈ ಬದಲಾವಣೆಗಳನ್ನು ಮಾಡಿಕೊಳ್ಳಬಹುದು.
ಅಗತ್ಯವಿರುವ ದಾಖಲೆಗಳು:
ಪ್ಯಾನ್ ಕಾರ್ಡ್ ಅಪ್‌ಡೇಟ್ ಮಾಡಲು ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:
ಗುರುತಿನ ಚೀಟಿ: ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್.
ವಿಳಾಸದ ಪುರಾವೆ: ಆಧಾರ್ ಕಾರ್ಡ್, ವಿದ್ಯುತ್ ಬಿಲ್, ನೀರಿನ ಬಿಲ್, ಬ್ಯಾಂಕ್ ಖಾತೆ ಸ್ಟೇಟ್‌ಮೆಂಟ್ ಅಥವಾ ಪೋಸ್ಟ್ ಆಫೀಸ್ ಪಾಸ್‌ಬುಕ್.
ಜನ್ಮ ದಿನಾಂಕದ ಪುರಾವೆ: ಆಧಾರ್ ಕಾರ್ಡ್, ಮುನ್ಸಿಪಲ್ ಕಾರ್ಪೊರೇಶನ್ ನೀಡಿದ ಜನನ ಪ್ರಮಾಣಪತ್ರ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಅಥವಾ ಪಾಸ್‌ಪೋರ್ಟ್.
ಪ್ಯಾನ್ ಕಾರ್ಡ್ ಅಪ್‌ಡೇಟ್ ಮಾಡುವುದು ಹೇಗೆ? (ಹಂತ-ಹಂತದ ಮಾಹಿತಿ):
ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು Protean (NSDL) ಅಥವಾ UTIITSL ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಅಪ್ಲಿಕೇಶನ್ ಆಯ್ಕೆ ಮಾಡಿ: ‘Online PAN Application’ ವಿಭಾಗದಲ್ಲಿ ‘Changes or Correction in Existing PAN Data’ ಎಂಬ ಆಯ್ಕೆಯನ್ನು ಆರಿಸಿ.
ವಿವರಗಳನ್ನು ಭರ್ತಿ ಮಾಡಿ: ನಿಮ್ಮ ಕೆಟಗರಿ (Individual), ಹೆಸರು, ಜನ್ಮ ದಿನಾಂಕ, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಟೋಕನ್ ನಂಬರ್: ಫಾರ್ಮ್ ಸಬ್ಮಿಟ್ ಮಾಡಿದ ನಂತರ ನಿಮಗೆ ಒಂದು ‘ಟೋಕನ್ ನಂಬರ್’ ಬರುತ್ತದೆ, ಅದನ್ನು ಬರೆದಿಟ್ಟುಕೊಳ್ಳಿ.
ಇ-ಕೆವೈಸಿ (e-KYC) ಆಯ್ಕೆ: ಸುಲಭವಾಗಿ ಪ್ರಕ್ರಿಯೆ ಮುಗಿಸಲು ಆಧಾರ್ ಮೂಲಕ ಓಟಿಪಿ (OTP) ಆಧಾರಿತ ಇ-ಕೆವೈಸಿ ವಿಧಾನವನ್ನು ಆರಿಸಿಕೊಳ್ಳಿ.
ತಿದ್ದುಪಡಿ ಮಾಡಿ: ನೀವು ಬದಲಾಯಿಸಬೇಕಾದ ಮಾಹಿತಿಯ ಬಾಕ್ಸ್‌ಗಳನ್ನು ಟಿಕ್ ಮಾಡಿ (ಉದಾಹರಣೆಗೆ: ಹೆಸರು ಅಥವಾ ಫೋಟೋ).
ದಾಖಲೆಗಳ ಅಪ್‌ಲೋಡ್: ನಿಮ್ಮ ಆಧಾರ್ ಮತ್ತು ಇತರ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಶುಲ್ಕ ಪಾವತಿ: ಪ್ಯಾನ್ ತಿದ್ದುಪಡಿಗಾಗಿ ಸುಮಾರು 110 ರೂ. (ಜೊತೆಗೆ GST) ಆನ್‌ಲೈನ್ ಮೂಲಕ ಪಾವತಿಸಬೇಕಾಗುತ್ತದೆ.
ಇ-ಸೈನ್ (e-Sign): ಪಾವತಿ ಮುಗಿದ ನಂತರ ಆಧಾರ್ ಓಟಿಪಿ ಬಳಸಿ ನಿಮ್ಮ ಅರ್ಜಿಯನ್ನು ಇ-ಸೈನ್ ಮಾಡಿ ಪ್ರಕ್ರಿಯೆ ಪೂರ್ಣಗೊಳಿಸಿ.








