ನವದೆಹಲಿ: ನಿಮ್ಮ ಪ್ಯಾನ್ (PAN) ಕಾರ್ಡ್ನಲ್ಲಿ ಹೆಸರು ತಪ್ಪಾಗಿದೆಯೇ? ಅಥವಾ ಹುಟ್ಟಿದ ದಿನಾಂಕ ಮತ್ತು ವಿಳಾಸದಲ್ಲಿ ದೋಷಗಳಿವೆಯೇ? ಚಿಂತಿಸಬೇಡಿ, ಈಗ ನೀವು ಕಚೇರಿಗಳಿಗೆ ಅಲೆಯದೆಯೇ ಆನ್ಲೈನ್ ಮೂಲಕ ಸುಲಭವಾಗಿ ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು.
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: ಮೊದಲು NSDL (Protean) ಅಥವಾ UTIITSL ವೆಬ್ಸೈಟ್ಗೆ ಹೋಗಿ.ಅಪ್ಲಿಕೇಶನ್ ಟೈಪ್ ಆಯ್ಕೆ ಮಾಡಿ.’Application Type’ ನಲ್ಲಿ ‘Changes or Correction in existing PAN data’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
ಮಾಹಿತಿ ಭರ್ತಿ ಮಾಡಿ: ನಿಮ್ಮ ಹೆಸರು, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಫಾರ್ಮ್ ಸಲ್ಲಿಸಿ. ಆಗ ನಿಮಗೊಂದು ‘ಟೋಕನ್ ನಂಬರ್’ ದೊರೆಯುತ್ತದೆ.
ದಾಖಲೆಗಳ ಸಲ್ಲಿಕೆ: ಆಧಾರ್ ಕಾರ್ಡ್ ಅಥವಾ ಇತರ ಗುರುತಿನ ಚೀಟಿಗಳನ್ನು ಬಳಸಿ ‘e-KYC’ ಮೂಲಕ ದಾಖಲೆಗಳನ್ನು ಡಿಜಿಟಲ್ ಆಗಿ ಸಲ್ಲಿಸಿ.
ಶುಲ್ಕ ಪಾವತಿ: ತಿದ್ದುಪಡಿಗಾಗಿ ನಿಗದಿಪಡಿಸಿದ ಶುಲ್ಕವನ್ನು (ಸುಮಾರು 100 ರಿಂದ 110 ರೂ.) ಆನ್ಲೈನ್ ಮೂಲಕ ಪಾವತಿಸಿ.
ಪರಿಶೀಲನೆ: ಎಲ್ಲವೂ ಸರಿಯಾಗಿದ್ದರೆ ಡಿಜಿಟಲ್ ಸಹಿ (e-Sign) ಮಾಡಿ ಅರ್ಜಿಯನ್ನು ಪೂರ್ಣಗೊಳಿಸಿ.
ಗಮನಿಸಬೇಕಾದ ಅಂಶಗಳು:
ನಿಮ್ಮ ಆಧಾರ್ ಕಾರ್ಡ್ನಲ್ಲಿರುವ ಮಾಹಿತಿ ಮತ್ತು ಪ್ಯಾನ್ ಕಾರ್ಡ್ನಲ್ಲಿ ಸರಿಪಡಿಸಲು ಬಯಸುವ ಮಾಹಿತಿ ಒಂದೇ ಆಗಿರಬೇಕು.
ಅರ್ಜಿ ಸಲ್ಲಿಸಿದ 15 ರಿಂದ 30 ದಿನಗಳ ಒಳಗಾಗಿ ನಿಮ್ಮ ಮನೆ ವಿಳಾಸಕ್ಕೆ ಹೊಸ ಪ್ಯಾನ್ ಕಾರ್ಡ್ ತಲುಪುತ್ತದೆ.
ಡಿಜಿಟಲ್ ಇ-ಪ್ಯಾನ್ (e-PAN) ಅನ್ನು ನೀವು ಕೆಲವೇ ದಿನಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.








