ನವದೆಹಲಿ: ಭಾರತೀಯ ಸೇನೆಯಿಂದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮುಂದುವರೆಸಲಾಗಿದೆ. ಇಂದು ಪಾಕಿಸ್ತಾನದ ವಿವಿಧೆಡೆ ಡ್ರೋನ್ ದಾಳಿ ನಡೆಸಲಾಗಿದ್ದು, ಪಾಕಿಸ್ತಾನದ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ ಧ್ವಂಸಗೊಳಿಸಲಾಗಿದೆ.
ಪಾಕಿಸ್ತಾನದ ಹಲವು ನಗರಗಳ ಮೇಲೆ ಡ್ರೋನ್ ದಾಳಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಹಾಗೂ ವಿದೇಶಿ ಕ್ರಿಕೆಟಿಗರು ರಾವಲ್ಪಿಂಡಿ ತೊರೆಯುವಂತೆ ಪಿಸಿಬಿ ಸೂಚನೆ ನೀಡಿದೆ.
ಪಾಕಿಸ್ತಾನದ ಲಾಹೋರ್, ರಾವಲ್ಪಿಂಡಿ ಸೇರಿದಂತೆ ಪಾಕಿಸ್ತಾನದ 12 ನಗರಗಳ ಮೇಲೆ ಡ್ರೋನ್ ದಾಳಿಯಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪಿಸಿಎಲ್ ಟೂರ್ನಿ ಆಡುತ್ತಿರುವ ಪಾಕಿಸ್ತಾನ ಹಾಗೂ ವಿದೇಶಿ ಕ್ರಿಕೆಟಿಗರು ರಾವಲ್ಪಿಂಡಿ ತೊರೆಯುವಂತೆ ಪಿಸಿಬಿ ಸೂಚನೆ ನೀಡಿದೆ.
ರಾವಲ್ಪಿಂಡಿ ಸ್ಟೇಡಿಯಂ ಮೇಲೆ ಭಾರತ ನಡೆಸಿದಂತ ಡ್ರೋನ್ ದಾಳಿಯಲ್ಲಿ ಸಂಪೂರ್ಣ ಧ್ವಂಸಗೊಂಡಿರೋದಾಗಿ ಹೇಳಲಾಗುತ್ತಿದೆ.