ನವದೆಹಲಿ: ಕಳೆದ ವರ್ಷ ಮೇ ತಿಂಗಳಲ್ಲಿ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಅವರು ಸಚಿನ್ ಮೀನಾ ಅವರೊಂದಿಗೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ಸೋಮವಾರ ವರದಿ ಮಾಡಿದೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸೀಮಾ ಹೈದರ್ ಅವರು ತಮ್ಮ ಪತಿ ಸಚಿನ್ಅವರೊಂದಿಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಪಾಕಿಸ್ತಾನಿ ಪ್ರಜೆ ಗುಲಾಮ್ ಹೈದರ್ ಅವರನ್ನು ವಿವಾಹವಾಗಿದ್ದರು. ಗುಲಾಮ್ 2019 ರಲ್ಲಿ ಕೆಲಸಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳುವವರೆಗೂ ಅವರು ಕರಾಚಿಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಸೀಮಾ ಹೈದರ್ ತನ್ನ ಹಿಂದಿನ ಮದುವೆಯಿಂದ ನಾಲ್ಕು ಮಕ್ಕಳನ್ನು ಹೊಂದಿದ್ದಾರೆ – ಹಿರಿಯವನಿಗೆ ಎಂಟು ವರ್ಷ ಆಗಿದೆ. ಸೀಮಾ ಹೈದರ್ 2019 ರಲ್ಲಿ ಆನ್ಲೈನ್ ಶೂಟಿಂಗ್ ಗೇಮ್ ಪಬ್ಜಿಯಲ್ಲಿ ಸಚಿನ್ ಅವರನ್ನು ಮೊದಲ ಬಾರಿಗೆ ಭೇಟಿಯಾದರು. ಸೀಮಾ ಸಚಿನ್ ನನ್ನು ಪ್ರೀತಿಸುತ್ತಿದ್ದಳು ಅದಕ್ಕಾಗಿ ಆಕೆ ಕಳೆದ ವರ್ಷ ಮೇ ತಿಂಗಳಲ್ಲಿ ಭಾರತಕ್ಕೆ ಬಂದಿದ್ದಾಳೇ ಎನ್ನಲಾಗಿದೆ.