ಬಲೂಚಿಸ್ತಾನ : ಬಲೂಚಿಸ್ತಾನದ ಹಬ್ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ದುರಂತ ಘಟನೆಯಲ್ಲಿ ಯಾತ್ರಾರ್ಥಿಗಳನ್ನ ಕರೆದೊಯ್ಯುತ್ತಿದ್ದ ಟ್ರಕ್ ಕಂದಕಕ್ಕೆ ಬಿದ್ದು 17 ಜನರು ಸಾವನ್ನಪ್ಪಿದ್ದಾರೆ ಮತ್ತು 35ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬುಧವಾರ ರಾತ್ರಿ 11 ಗಂಟೆಯ ವೇಳೆಗೆ ಅಪಘಾತದ ಬಗ್ಗೆ ಮಾಹಿತಿ ಬಂದಿದ್ದು, ಎರಡು ಗಂಟೆಗಳಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಾದ್ ಈಧಿ ಸುದ್ದಿಗಾರರಿಗೆ ಮಾಹಿತಿ ನೀಡಿದರು. ವರದಿ ಪ್ರಕಾರ, ಯಾತ್ರಾರ್ಥಿಗಳು ಬಲೂಚಿಸ್ತಾನದ ಖುಜ್ದಾರ್ ಜಿಲ್ಲೆಯ ದೂರದ ಮುಸ್ಲಿಂ ಸೂಫಿ ದರ್ಗಾ ಶಾ ನೂರಾನಿಗೆ ಗೌರವ ಸಲ್ಲಿಸಲು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡ ಟ್ರಕ್ ಚಾಲಕ ಕರೀಂ ಬಕ್ಷ್’ನನ್ನ ವಶಕ್ಕೆ ಪಡೆಯಲಾಗಿದೆ. ಉಪ ವಿಭಾಗೀಯ ಪೊಲೀಸ್ ಅಧಿಕಾರಿ (SDPO) ಸಕ್ರೋ ವಾಜಿದ್ ಅಲಿ ಅವರ ಪ್ರಕಾರ, ಡ್ರೈವ್ ಸಮಯದಲ್ಲಿ ತಿರುವಿನಿಂದಾಗಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
‘ಮಹಾಲಕ್ಷ್ಮಿ’ ಯೋಜನೆಗೆ ಕರ್ನಾಟಕದ ‘ಗ್ಯಾರಂಟಿ’ ಯೋಜನೆಗಳೇ ಉದಾಹರಣೆ : ರಣದೀಪ್ ಸಿಂಗ್ ಸುರ್ಜೆವಾಲ ಹೇಳಿಕೆ
‘UPSC IES/ISSE 2024’ ಅಧಿಸೂಚನೆ ಬಿಡುಗಡೆ ; ಪರೀಕ್ಷೆ ಯಾವಾಗ.? ಇಲ್ಲಿದೆ ಮಾಹಿತಿ