ಫೋಟೋ: ಧೂಮಪಾನ ಆರೋಗ್ಯಕ್ಕೆ ಹಾನಿಕ, ಶಾಸನ ಬದ್ದ ಎಚ್ಚರಿಕೆ
ನವದೆಹಲಿ: ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) 2024 ರ ಫೈನಲ್ ಪಂದ್ಯದ ವೇಳೆ ಇಸ್ಲಾಮಾಬಾದ್ ಯುನೈಟೆಡ್ ಸ್ಟಾರ್ ಇಮಾದ್ ವಾಸಿಮ್ ಡ್ರೆಸ್ಸಿಂಗ್ ರೂಮ್ನಲ್ಲಿ ಧೂಮಪಾನ ಮಾಡುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ. ಮುಲ್ತಾನ್ ಸುಲ್ತಾನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಪರ ಮ್ಯಾಚ್ ವಿನ್ನಿಂಗ್ ಸ್ಪೆಲ್ ಎಸೆದ ಇಮಾದ್, ನಂತರ ಪಂದ್ಯ ನಡೆಯುತ್ತಿರುವಾಗ ಡ್ರೆಸ್ಸಿಂಗ್ ರೂಮ್ನಲ್ಲಿ ಸಿಗರೇಟ್ ಸೇದುತ್ತಿರುವುದು ಕಂಡುಬಂದಿದೆ.
ಮುಲ್ತಾನ್ ಸುಲ್ತಾನ್ಸ್ ಡ್ರೆಸ್ಸಿಂಗ್ ರೂಮ್ನಲ್ಲಿ ಸಿಗರೇಟ್ ಸೇದುತ್ತಿರುವ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆಟಗಾರನಿಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ
PAKISTAN "SMOKING" LEAGUE 🚬🔥🔥#HBLPSL9 #HBLPSLFinal pic.twitter.com/pwpaj4bLh8
— Farid Khan (@_FaridKhan) March 18, 2024