ನವದೆಹಲಿ: ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ದಾಳಿ ನಡೆಸಿದ ಒಂದು ದಿನದ ನಂತರ ಗುರುವಾರ ರಾತ್ರಿ ವಾಯುನೆಲೆ ಸೇರಿದಂತೆ ಜಮ್ಮುವಿನ ಅನೇಕ ಸ್ಥಳಗಳನ್ನು ರಾಕೆಟ್ಗಳಿಂದ ಗುರಿಯಾಗಿಸಿ ದಾಳಿ ನಡೆಸಲಾಯಿತು. ಈ ಮೂಲಕ ಭಾರತದ ಮೇಲೆ ಪಾಕಿಸ್ತಾನ ಡ್ರೋನ್ ದಾಳಿ ನಡೆಸಿದೆ.
Pakistan has targeted Jammu with loitering munitions; Indian Air Defence guns are firing back pic.twitter.com/jWFanwt8hC
— ANI (@ANI) May 8, 2025
ಜಮ್ಮು ವಾಯು ನೆಲೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಭಾರತದ ಮೇಲೆ ಡ್ರೋನ್ ದಾಳಿ ನಡೆಸಿದೆ. ಈ ಹಿನ್ನಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಸಂಪೂರ್ಣ ವಿದ್ಯುತ್ ಸ್ಥಗಿತ ಮಾಡಲಾಗಿದೆ. ಅಲ್ಲದೇ ಭಾರತೀಯ ಸೇನೆಯಿಂದ ಪ್ರತಿ ದಾಳಿ ನಡೆಸಲಾಗುತ್ತಿದೆ.
#WATCH | J&K | A complete blackout has been enforced in Kishtwar of Jammu Division, and sirens are being heard throughout the district. pic.twitter.com/1tBwxjoxR7
— ANI (@ANI) May 8, 2025