ರಾಮನಗರ: ರಾಜ್ಯಸಭಾ ಚುನಾವಣೆಯ ವೇಳೆಯಲ್ಲಿ ರಾಜ್ಯದ ಶಕ್ತಿ ಸೌಧ ವಿಧಾನಸೌಧದಲ್ಲೇ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿತ್ತು. ಇದು ಎಫ್ಎಸ್ಎಲ್ ವರದಿಯಲ್ಲೂ ದೃಢಪಟ್ಟಿತ್ತು. ಈ ಬಳಿಕ ರಾಜ್ಯದಲ್ಲಿ ಮತ್ತೆ ಪಾಕಿಸ್ತಾನ್ ಕೀ ಜೈ ಘೋಷಣೆ ಮೊಳಗಿದೆ.
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಸದ ಡಿ.ಕೆ ಸುರೇಶ್ ಮತಯಾಚನೆಯ ವೇಳೆಯಲ್ಲೇ ಪಾಕಿಸ್ತಾನ್ ಕೀ ಜೈ ಘೋಷಣೆ ಕೂಗಿಲೋದಾಗಿ ಕೇಳಿ ಬಂದಿದೆ.
ಈ ವೀಡಿಯೋವನ್ನು ಇಟ್ಕೊಂಡು ಬಿಜೆಪಿ-ಜೆಡಿಎಸ್ ಪಕ್ಷದ ಮೈತ್ರಿ ನಾಯಕರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿರೋದಾಗಿ ಹೇಳಲಾಗುತ್ತಿದೆ.
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರಲ್ಲಿ ಮತಯಾಚನೆ ವೇಳೆಯಲ್ಲಿ ಪಾಕಿಸ್ತಾನ್ ಕೀ ಜೈ ಎಂಬುದಾಗಿ ಘೋಷಣೆ ಕೂಗಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
ಆದ್ರೇ ಕಾಂಗ್ರೆಸ್ ಪಕ್ಷದವರು ಮಾತ್ರ ಅದು ಪಾಕಿಸ್ತಾನ್ ಕೀ ಜೈ ಅಲ್ಲ. ಬಾಲಕೃಷ್ಣ ಕೀ ಜೈ ಎಂದಿದ್ದಾರೆ ಅಂತ ಸ್ಪಷ್ಟ ಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.
ಚುನಾವಣಾ ಪ್ರಚಾರದ ವೇಳೆ ಸಾವನ್ನಪ್ಪಿದ ಕಾರ್ಯಕರ್ತನ ಕುಟುಂಬಕ್ಕೆ ಬಿಜೆಪಿಯಿಂದ ’10 ಲಕ್ಷ ಪರಿಹಾರ’ ಘೋಷಣೆ
BREAKING : ಮಾಜಿ ಸಿಎಂ HD ಕುಮಾರಸ್ವಾಮಿಗೆ ಬಿಗ್ ರಿಲೀಫ್ : ರಾಜ್ಯ ಮಹಿಳಾ ಆಯೋಗದ ನೋಟಿಸ್ ಗೆ ಹೈಕೋರ್ಟ್ ತಡೆ