ನವದೆಹಲಿ: ಪಾಕಿಸ್ತಾನದಿಂದ ಡ್ರೋನ್, ಕ್ಷಿಪಣಿ ಮೂಲಕ ಜಮ್ಮುವಿನ ವಾಯುನೆಲೆ, ರಾಜಸ್ಥಾನದ ಜೈಸಲ್ಮೇರ್ ಮೇಲೆ ದಾಳಿಯನ್ನು ನಡೆಸಲಾಯಿತು. ಈ ದಾಳಿಯನ್ನು ಭಾರತ ಸಂಪೂರ್ಣವಾಗಿ ವಿಫಲಗೊಳಿಸಿದೆ.
ಜಮ್ಮು, ರಾಜಸ್ಥಾನದ ವಾಯು ನೆಲೆಯ ಮೇಲೆ ಪಾಕಿಸ್ತಾನ ನಡೆಸಿದಂತ ದಾಳಿಯನ್ನು ತಡೆಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಭಾರತದ ವಾಯು ನೆಲೆಯ ಮೇಲೆ ಪಾಕಿಸ್ತಾನ ದಾಳಿಯನ್ನು ನಡೆಸುತ್ತಿದ್ದಂತೇ, ಜಮ್ಮು, ರಾಜಸ್ಥಾನದ ಜೈಸಲ್ಮೇರ್ ನಲ್ಲಿ ಬ್ಲಾಕ್ ಔಟ್ ಮಾಡಲಾಯಿತು.
ಈ ಬಳಿಕ ಭಾರತೀಯ ವಾಯು ಪಡೆಯ ಎಸ್-400 ರಕ್ಷಣಾ ವ್ಯವಸ್ಥೆಯನ್ನು ಸಕ್ರೀಯಗೊಳಿಸಿದಂತ ಸೇನೆಯು, ಪಾಕಿಸ್ತಾನದ ಡ್ರೋನ್, ಕ್ಷಿಪಣಿ, ಫೈಟರ್ ಜೆಟ್ ಗಳನ್ನು ಹೊಡೆದು ಉರುಳಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಪಾಕಿಸ್ತಾನದಿಂದ ಭಾರತದ ಮೇಲೆ ವಾಯು ನೆಲೆಯನ್ನು ಗುರಿಯಾಗಿಸಿಕೊಂಡು ನಡೆಸಿದಂತ ಆಕ್ರಮಣವನ್ನು ಅಷ್ಟೇ ತ್ವರಿತವಾಗಿ ಭಾರತೀಯ ಸೇನೆ ವಿಫಲಗೊಳಿಸಿದ್ದು, ಎಲ್ಲಾ ವಾಯುನೆಲೆಗಳು ಸುರಕ್ಷಿತವಾಗಿರುವುದಾಗಿ ತಿಳಿದು ಬಂದಿದೆ.
BREAKING : ಪಾಕಿಸ್ತಾನದ 12 ಕಡೆ ಡ್ರೋನ್ ದಾಳಿಯಲ್ಲಿ ಹಲವರು ಸಾವು : ತುರ್ತು ಸಭೆ ಕರೆದ ಪ್ರಧಾನಿ ಶೆಹಬಾಜ್ ಶರೀಫ್.!