ನವದೆಹಲಿ: ಪಾಕಿಸ್ತಾನದ 8 ಸೇನಾ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಭಾರತದ ಕ್ಷಿಪಣಿಗಳನ್ನು ಪಾಕಿಸ್ತಾನ ಸೇನೆ ಧ್ವಂಸ ಮಾಡಿಲ್ಲ. ಪಾಕಿಸ್ತಾನದ ಡ್ರೋನ್ ಗಳನ್ನು ಭಾರತ ಹೊಡೆದುಹಾಕಿದೆ. ಭಾರತದ ಎಸ್-400 ಮತ್ತು ಬ್ರಹ್ಮೋಸ್ ಗೆ ಹಾನಿಯಾಗಿಲ್ಲ ಎಂಬುದಾಗಿ ಕೇಂದ್ರ ವಿದೇಶಾಂಗ ಇಲಾಖೆ ಸ್ಪಷ್ಟ ಪಡಿಸಿದೆ.
ಭಾರತದ ಎಸ್-400 ಮತ್ತು ಬ್ರಹ್ಮೋಸ್ ಗೆ ಹಾನಿಯಾಗಿಲ್ಲ: ಕೇಂದ್ರ ವಿದೇಶಾಂಗ ಇಲಾಖೆ
ನವದೆಹಲಿ: ಭಾರತದ ಎಸ್-400 ಮತ್ತು ಬ್ರಹ್ಮೋಸ್ ಕ್ಷಿಪಣಿಗಳು ಸುರಕ್ಷಿತವಾಗಿದ್ದಾವೆ. ಪಾಕಿಸ್ತಾನ ಅವುಗಳನ್ನು ಧ್ವಂಸಗೊಳಿಸಿಲ್ಲ. ಅದೆಲ್ಲವೂ ಸುಳ್ಳು ಎಂಬುದಾಗಿ ಕೇಂದ್ರ ವಿದೇಶಾಂಗ ಇಲಾಖೆ ತಿಳಿಸಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಭಾರತದ ಕ್ಷಿಪಣಿಗಳನ್ನು ಪಾಕಿಸ್ತಾನ ಸೇನೆ ಧ್ವಂಸಮಾಡಿಲ್ಲ. ಪಾಕಿಸ್ತಾನದ ಡ್ರೋನ್ ಗಳನ್ನು ಭಾರತ ಹೊಡೆದುಹಾಕಿದೆ. ಭಾರತದ ಎಸ್-400 ಮತ್ತು ಬ್ರಹ್ಮೋಸ್ ಗೆ ಹಾನಿಯಾಗಿಲ್ಲ ಎಂದಿದೆ.
ಭಾರತದ ದಾಳಿಯಿಂದ ಪಾಕಿಸ್ತಾನದ ವಾಯು ನೆಲೆಯು ಸಾಕಷ್ಟು ಹಾನಿಯಾಗಿದೆ. ನಾವು ಪಾಕಿಸ್ತಾನದಲ್ಲಿ ಮಸೀದಿಗಳಿಗೆ ಹಾನಿ ಮಾಡಿಲ್ಲ. ನಮ್ಮ ಗುರಿ ಏನಿದ್ದರೂ ಭಯೋತ್ಪಾದಕ ತಾಣಗಳ ಮೇಲೆ ಎಂಬುದಾಗಿ ಕರ್ನಲ್ ಸೋಫಿಯಾ ಖುರೇಷಿ ಸ್ಪಷ್ಟ ಪಡಿಸಿದ್ದಾರೆ.
ಪಾಕಿಸ್ತಾನದ 8 ಸೇನಾ ನೆಲೆಗಳನ್ನು ಭಾರತ ಧ್ವಂಸಗೊಳಿಸಿದೆ: ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್
ನವದೆಹಲಿ: ನಿನ್ನೆ ನಡೆದಂತ ಪಾಕಿಸ್ತಾನದ ಡ್ರೋನ್ ದಾಳಿಯನ್ನು ತಡೆಯಲಾಗಿದೆ. ಪಾಕಿಸ್ತಾನದ 8 ಸೇನಾ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿ ಧ್ವಂಸಗೊಳಿಸಿದೆ ಎಂಬುದಾಗಿ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಪಾಕಿಸ್ತಾನ ನಡೆಸಿದಂತ ದಾಳಿಯಲ್ಲಿ ಭಾರತದ ಯಾವುದೇ ಸೇನಾ ನೆಲೆ ಹಾನಿಯಾಗಿಲ್ಲ. ನಾವು ಪಾಕಿಸ್ತಾನದ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿದ್ದೇವೆ. ಪಕಿಸ್ತಾನ ಸೇನೆಗೆ ಭಾರತ ತಕ್ಕ ಶಾಸ್ತಿ ಮಾಡಿದೆ ಎಂಬುದಾಗಿ ತಿಳಿಸಿದ್ದಾರೆ.
ಅತ್ಯುನ್ನತವಾಗಿ ಹೇಳುವುದಾದರೆ, ನಮ್ಮ ಕಾರ್ಯಾಚರಣೆಗಳು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿರುವ ಭಯೋತ್ಪಾದಕ ಶಿಬಿರಗಳು ಮತ್ತು ಸೌಲಭ್ಯಗಳನ್ನು ಮಾತ್ರ ಗುರಿಯಾಗಿಸಿಕೊಂಡಿವೆ. ಭಾರತೀಯ ಸಶಸ್ತ್ರ ಪಡೆಗಳು ಯಾವುದೇ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂಬುದಾಗಿ ತಿಳಿಸಿದರು.