ಇಸ್ಲಾಮಾ ಬಾದ್ :ನೈಋತ್ಯ ಪಾಕಿಸ್ತಾನದ ಸಣ್ಣ ಖಾಸಗಿ ಕಲ್ಲಿದ್ದಲು ಗಣಿಗೆ ಶುಕ್ರವಾರ (ಅಕ್ಟೋಬರ್ 11) ಬೆಳಿಗ್ಗೆ ಶಸ್ತ್ರಸಜ್ಜಿತ ವ್ಯಕ್ತಿಗಳು ನುಗ್ಗಿದ ನಂತರ ಕನಿಷ್ಠ 20 ಗಣಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ಏಳು ಮಂದಿ ಗಾಯಗೊಂಡಿದ್ದಾರೆ
ಬಲೂಚಿಸ್ತಾನ ಪ್ರಾಂತ್ಯದಲ್ಲಿ ನಡೆದ ದಾಳಿಯು ಮುಖ್ಯವಾಗಿ ಪ್ರಾಂತ್ಯದ ಪಶ್ತೂನ್ ಮಾತನಾಡುವ ಪ್ರದೇಶಗಳ ಜನರನ್ನು ಗುರಿಯಾಗಿಸಿಕೊಂಡಿದೆ.
ಇಲ್ಲಿಯವರೆಗೆ ಯಾವುದೇ ಗುಂಪು ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲ. ಆದರೆ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ ಅಥವಾ ಟಿಟಿಪಿ ಎಂದು ಕರೆಯಲ್ಪಡುವ ಪಾಕಿಸ್ತಾನಿ ತಾಲಿಬಾನ್ ಮೇಲೆ ಆರೋಪ ಬೀಳುವ ಸಾಧ್ಯತೆಯಿದೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ.
ದಾಳಿಕೋರರು ರಾಕೆಟ್ ಗಳನ್ನು ಹಾರಿಸಿದ್ದಾರೆ ಮತ್ತು ಗಣಿಯ ಮೇಲೆ ಗ್ರೆನೇಡ್ ಗಳನ್ನು ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.
ಕ್ವೆಟ್ಟಾ ನಗರದ ಪೂರ್ವಕ್ಕಿರುವ ಪಟ್ಟಣದ ಪೊಲೀಸ್ ಸ್ಟೇಷನ್ ಹೌಸ್ ಅಧಿಕಾರಿ ಹುಮಾಯೂನ್ ಖಾನ್ ಹೇಳಿಕೆಯಲ್ಲಿ, “ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ಡುಕಿ ಪ್ರದೇಶದ ಜುನೈದ್ ಕೋಲ್ ಕಂಪನಿಯ ಗಣಿಗಳ ಮೇಲೆ ಮುಂಜಾನೆ ಭಾರಿ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸಿದೆ” ಎಂದು ಹೇಳಿದರು.
“ಜಿಲ್ಲಾ ಆಸ್ಪತ್ರೆಯಲ್ಲಿ ಈವರೆಗೆ 20 ಶವಗಳನ್ನು ಸ್ವೀಕರಿಸಲಾಗಿದೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ” ಎಂದು ದುಕಿಯ ವೈದ್ಯ ಜೋಹರ್ ಖಾನ್ ಶಾದಿಜೈ ಹೇಳಿದ್ದಾರೆ.
ಇದಕ್ಕೂ ಮುನ್ನ ಸೋಮವಾರ (ಅಕ್ಟೋಬರ್ 7) ಉಗ್ರಗಾಮಿ ಗುಂಪು ಬಲೂಚ್ ಲಿಬರೇಶನ್ ಆರ್ಮಿ ಚೀನಾದ ಪ್ರಜೆಗಳ ಮೇಲೆ ದಾಳಿ ನಡೆಸಿದೆ ಎಂದು ಹೇಳಿದೆ.