ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಈ ತಿಂಗಳು ಮತ್ತೆ ಅಮೆರಿಕಕ್ಕೆ ತೆರಳಲಿದ್ದು, ಎರಡು ತಿಂಗಳಲ್ಲಿ ವಾಷಿಂಗ್ಟನ್ ಗೆ ಎರಡನೇ ಭೇಟಿಯಾಗಲಿದ್ದಾರೆ
ಭಯೋತ್ಪಾದನೆ ನಿಗ್ರಹದಲ್ಲಿ ಪಾಕಿಸ್ತಾನವನ್ನು “ಅಸಾಧಾರಣ ಪಾಲುದಾರ” ಎಂದು ಈ ಹಿಂದೆ ಕರೆದಿದ್ದ ಯುನೈಟೆಡ್ ಸ್ಟೇಟ್ಸ್ ಸೆಂಟ್ರಲ್ ಕಮಾಂಡ್ ಕಮಾಂಡರ್ (ಸೆಂಟ್ಕಾಮ್) ಜನರಲ್ ಮೈಕೆಲ್ ಕುರಿಲ್ಲಾ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮುನೀರ್ ಭಾಗವಹಿಸಲಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಯುಎಸ್ ಮಿಲಿಟರಿ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿದ್ದ ನಾಲ್ಕು ಸ್ಟಾರ್ ಸೇನಾ ಜನರಲ್ ಕುರಿಲ್ಲಾ ಈ ತಿಂಗಳ ಕೊನೆಯಲ್ಲಿ ನಿವೃತ್ತರಾಗಲಿದ್ದಾರೆ