ನವದೆಹಲಿ: ಪಹಲ್ಗಾಮ್ ನಲ್ಲಿ ನಡೆದಂತ ಉಗ್ರರ ದಾಳಿಯಲ್ಲಿ 26 ಪ್ರವಾಸಿಗರು ಮೃತರಾಗಿದ್ದಾರೆ. ಅವರ ಕುಟುಂಬಸ್ಥರಿಗೆ ಆರ್ಥಿಕ ಚೇತನ ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಷೇರು ವಿನಿಯಮ ಕೇಂದ್ರವು ಬೆಂಬಲಕ್ಕೆ ನಿಂತಿದೆ. ಮೃತ ಕುಟುಂಬಸ್ಥರಿಗೆ ತಲಾ 4 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಕ್ರೂರ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳನ್ನು ಬೆಂಬಲಿಸಲು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್ಎಸ್ಇ) ಒಟ್ಟು 1 ಕೋಟಿ ರೂ.ಗಳನ್ನು (ಅಂದರೆ ಪ್ರತಿ ಕುಟುಂಬಕ್ಕೆ ಸುಮಾರು 4 ಲಕ್ಷ ರೂ.) ನೀಡುವುದಾಗಿ ವಾಗ್ದಾನ ಮಾಡಿದೆ.
#PahalgamTerrorAttack | National Stock Exchange of India (NSE) has pledged Rs 1 crore in total (i.e. approximately Rs 4 lakhs per family) to support the families of the deceased who lost their lives in the cruel act of violence pic.twitter.com/DVq9CkfbXQ
— ANI (@ANI) April 25, 2025
ಅಂದಹಾಗೇ ಈಗಾಗಲೇ ಜಮ್ಮು-ಕಾಶ್ಮೀರ ಸರ್ಕಾರವು ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತರಾದಂತ ಕುಟುಂಬಸ್ಥರಿಗೆ ತಲಾ 10 ಲಕ್ಷ ನೀಡುವುದಾಗಿ ಘೋಷಿಸಿತ್ತು. ಇತ್ತ ಕರ್ನಾಟಕ ಸರ್ಕಾರವು ಮೃತ ಇಬ್ಬರು ಕನ್ನಡಿಗರಿಗೆ ತಲಾ 10 ಲಕ್ಷ ಪರಿಹಾರವನ್ನು ಘೋಷಿಸಿತ್ತು.
ಫಿಸಿಯೋಥೆರಪಿ ಕೋರ್ಸ್‌ಗಳಿಗೆ ಈಗ ನೀಟ್ ಕಡ್ಡಾಯ: ಸಚಿವ ಡಾ.ಶರಣ ಪ್ರಕಾಶ ಪಾಟೀಲ್