ಹಾವೇರಿ: ಭಯೋತ್ಪಾದಕ ದಾಳಿಯ ನಂತರ ಹಾನಗಲ್ ನ 27 ಪ್ರವಾಸಿಗರು ಜಮ್ಮುವಿನಲ್ಲಿ ಸಿಲುಕಿದ್ದಾರೆ. ಅವರೆಲ್ಲರೂ ಜಮ್ಮುವಿನ ವೈಷ್ಣೋದೇವಿ ದೇವಸ್ಥಾನದಲ್ಲಿ ಕ್ಯಾಂಪ್ ಮಾಡುತ್ತಿದ್ದಾರೆ ಎಂದು ಪ್ರವಾಸಿಗರ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.
ಈ ತಂಡವು ಏಪ್ರಿಲ್ ೧೭ ರಂದು ಜೆ &ಕೆ ಪ್ರವಾಸಕ್ಕೆ ತೆರಳಿತು. ಅವರು ಏಪ್ರಿಲ್ 22 ರಂದು ಅಮೃತಸರದಿಂದ ಜಮ್ಮುವಿಗೆ ಬಸ್ ನಲ್ಲಿ ಪ್ರಯಾಣಿಸಿದರು ಮತ್ತು ಬುಧವಾರ ಪಹಲ್ಗಾಮ್ ಗೆ ಭೇಟಿ ನೀಡಲು ನಿರ್ಧರಿಸಿದ್ದರು.