ಯಾದಗಿರಿ: ಜಿಲ್ಲೆಯ ಸುರಪುರ ಪಟ್ಟಣದ ರಂಗಂಪೇಟೆ ನಿವಾಸಿಗಳಾದ ಪ್ರಭಾಕರ್ ಹಾಗೂ ಮಹೇಶ್ವರಿ ದಂಪತಿ ಸೇರಿ ಇಬ್ಬರು ಮಕ್ಕಳು ಬೇಸಿಗೆಯಲ್ಲಿ ಜಮ್ಮು-ಕಾಶ್ಮೀರಕ್ಕೆ ಪ್ರವಾಸ ಬೆಳೆಸಿದ್ದರು. ಪಹಲ್ಗಾಮ್ ನಲ್ಲಿ ಏಕಾಏಕಿ ನಾಗರೀಕರ ಮೇಲೆ ಗುಂಡಿನ ದಾಳಿ ನಡೆದ ಸ್ಥಳದಿಂದ ಕೇವಲ 100 ಮೀಟರ ದೂರದಲ್ಲಿದ್ದ ನಾಲ್ವರು ಕನ್ನಡಿಗರು ಸೇಫ್ ಆಗಿದ್ದಾರೆ.
ಬೆಂಗಳೂರಿನಲ್ಲಿ ಸಾಫ್ಟ್ವೇರ್ ಉದ್ಯಮಿಯಾಗಿ ಕೆಲಸ ಮಾಡುತ್ತಿರುವ ಪ್ರಭಾಕರ್ ಕುಟುಂಬ ಸಮೇತರಾಗಿ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದರು. ಪೆಹಲ್ಗಾಮ್ ಪ್ರದೇಶದಲ್ಲಿ ಗುಂಡಿನ ಸದ್ದು ಕೇಳುತ್ತಿದ್ದಂತೆ ಭಯ ಬೀತರಾಗಿ ಸ್ಥಳದಿಂದ ಕಾಲ್ ಕಿತ್ತೆವೂ ಚಾಲಕನ ಕ್ಷಣಾರ್ಧದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾದೇವು ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ವರದಿ: ಪರಶುರಾಮ, ಸುರಪುರ
BREAKING : ಪಹಲ್ಗಾಮ್ ಉಗ್ರ ದಾಳಿ : ಮೃತಪಟ್ಟ ಕುಟುಂಬಸ್ಥರನ್ನು ಭೇಟಿಯಾದ ಕೇಂದ್ರ ಸಚಿವ ಅಮಿತ್ ಶಾ | WATCH VIDEO
BREAKING: ಇಂದು ಭರತ್ ಭೂಷಣ್, ಮಂಜುನಾಥ್ ಮೃತದೇಹ ಬೆಂಗಳೂರಿಗೆ ಆಗಮನ: ಸಿಎಂ ಸಿದ್ಧರಾಮಯ್ಯ ಮಾಹಿತಿ