ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದಂತ ಆರು ಉಗ್ರರು ಚೈನ್ನೈ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿ, ಅಲ್ಲಿಂದ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಿರುವಂತ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಪಹಲ್ಗಾಮ್ ಉಗ್ರರನ್ನು ಬಂಧಿಸೋ ನಿಟ್ಟಿನಲ್ಲಿ ಶ್ರೀಲಂಕಾ ವಿಮಾನ ನಿಲ್ದಾಣವನ್ನು ಲಾಕ್ ಡೌನ್ ಮಾಡಲಾಗಿದೆ.
ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಕೊಂದಿದ್ದಂತ ಆರು ಉಗ್ರರು ಚೈನ್ನೈನಲ್ಲಿ ಪತ್ತೆಯಾಗಿದ್ದರು. ಅಲ್ಲಿಂದ ಶ್ರೀಲಂಕಾಗೆ ವಿಮಾನದಲ್ಲಿ ತೆರಳುತ್ತಿರುವಂತ ಖಚಿತ ಮಾಹಿತಿ ಭಾರತಕ್ಕೆ ಸಿಕ್ಕಿತ್ತು.
ಈ ಮಾಹಿತಿಯನ್ನು ಶ್ರೀಲಂಕಾ ಸರ್ಕಾರಕ್ಕೆ ಭಾರತ ಸರ್ಕಾರ ನೀಡಿದೆ. ಈ ಹಿನ್ನಲೆಯಲ್ಲಿ ಪಹಲ್ಗಾಮ್ ಉಗ್ರರನ್ನು ಬಂಧಿಸೋ ನಿಟ್ಟಿನಲ್ಲಿ ಶ್ರೀಲಂಕಾ ವಿಮಾನ ನಿಲ್ದಾಣವನ್ನು ಲಾಕ್ ಡೌನ್ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
‘SSLC ಪರೀಕ್ಷೆ’ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆಗೆ ಸಾಗರ 2ನೇ ಸ್ಥಾನ: ‘BEO’ ಅಭಿನಂದಿಸಿದ ‘ಸರ್ಕಾರಿ ನೌಕರರ ಸಂಘ’
BREAKING : ಬೆಂಗಳೂರಲ್ಲಿ ಮತ್ತೊಂದು ಸೂಸೈಡ್ : ಸಾಲ ತೀರಿಸಲಾಗದೆ ಕಾರು ಚಾಲಕ ಆತ್ಮಹತ್ಯೆ!