ಯುಗಾದಿ ದಿನ ಹೆಚ್ಚಿನ ಮನೆಗಳಲ್ಲಿ ಪಚಡಿ ಮಾಡುತ್ತಾರೆ. ಇನ್ನು ಕೆಲವರ ಮನೆಯಲ್ಲಿ ಕೇವಲ ಬೇವು ಬೆಲ್ಲ ಸವಿಯುತ್ತಾರೆ. ಈ ಬಾರಿ ಯುಗಾದಿಗೆ ನಿಮ್ಮ ಮನೆಯಲ್ಲಿಯೂ ಪಚಡಿ ಮಾಡಿ ಸವಿಯಿರಿ.
ಬೇಕಾಗುವ ಸಾಮಗ್ರಿ :
ಮಾವಿನ ಕಾಯಿ ತುಂಡು 1 ಕಪ್, ಕಹಿ ಬೇವಿನ ಹೂ 1 ಕಪ್, ತುರಿದ ಬೆಲ್ಲ 1 ಕಪ್, ಚಿಕ್ಕದಾಗಿ ಕತ್ತರಿಸಿದ ತೆಂಗಿನಕಾಯಿ 1 ಚಮಚ, ಹುಣಸೆ ಹಣ್ಣಿನ ರಸ 4 ಚಮಚ, ಕೆಂಪು ಮೆಣಸಿನ ಪುಡಿ ಸ್ವಲ್ಪ, ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
ಮೊದಲಿಗೆ ಒಂದು ಪಾತ್ರೆಯಲ್ಲಿ ಕತ್ತರಿಸಿದ ಮಾವಿನಕಾಯಿಗೆ ಹುಣಸೆಹಣ್ಣಿನ ರಸ ಸೇರಿಸಿ ಬೇಯಿಸಬೇಕು.
ಮಾವಿನಕಾಯಿ ತುಂಡು ಮೃದುವಾಗುವವರೆಗೆ ಬೇಯಿಸಬೇಕು.
ನಂತರ ಅದಕ್ಕೆ ಬೆಲ್ಲವನ್ನು ಸೇರಿಸಿ, ಬೆಲ್ಲ ಕರಗಿದ ನಂತರ ಉರಿಯಿಂದ ಇಳಿಸಿ.
ಈಗ ಬಾಣಲೆಯನ್ನು ಬಿಸಿಮಾಡಿ ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆಯನ್ನು ಹಾಕಬೇಕು.
ನಂತರ ಕಹಿ ಬೇವಿನ ಹೂ ಮತ್ತು ಚಿಕ್ಕದಾಗಿ ಕತ್ತರಿಸಿದ ತೆಂಗಿನಕಾಯಿ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
ಅದಕ್ಕೆ ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಬೇಕು.
ಈಗ ಈ ಮಿಶ್ರಣವನ್ನು ಬೇಯಿಸಿದ ಮಾವಿನಕಾಯಿ ಜೊತೆ ಮಿಶ್ರ ಮಾಡಿದರೆ ಯುಗಾದಿ ಪಚಡಿ ರೆಡಿ.