ದಾವಣಗೆರೆ: ಜಿಲ್ಲೆಯಲ್ಲಿ ಬೀಗರ ಊಟ ಸೇವಿಸಿದಂತ 96ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವಂತ ಘಟನೆ ನಡೆದಿರೋದಾಗಿ ತಿಳಿದು ಬಂದಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಶಿಂಗ್ರಿಹಳ್ಳಿಯಲ್ಲಿ ನಿನ್ನೆ ಮದುವೆ ಸಮಾರಂಭದ ಬಳಿಕ ಬೀಗರ ಊಟ ಕಾರ್ಯಕ್ರಮವಿತ್ತು. ಆ ಕಾರ್ಯಕ್ರಮಕ್ಕೆ ತೆರಳಿದ್ದಂತ ಜನರು ಊಟ ಮಾಡಿಕೊಂಡು ಬಂದ ಬಳಿಕ ವಾಂತಿ, ಬೇಧಿ ಕಾಣಿಸಿಕೊಂಡಿದೆ. ತಡರಾತ್ರಿ ಆರೋಗ್ಯದಲ್ಲಿ ಏರುಪೇರಾದ ಕಾರಣ, ಅವರನ್ನು ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಅಸ್ವಸ್ಥಗೊಂಡವರಲ್ಲಿ 22 ಮಕ್ಕಳು ಸೇರಿದ್ದಾರೆ. ಅವರೆಲ್ಲರಿಗೂ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಈ ವಿಷಯ ತಿಳಿದು ಹರಪನಹಳ್ಳಿ ಶಾಸಕಿ ಎಂ.ಪಿ ಲತಾ ಮಲ್ಲಿಕಾರ್ಜನ್, ಡಿಹೆಚ್ಓ ಡಾ.ಶಂಕರನಾಯ್ಕ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಸಿಎಂ ಸಿದ್ದರಾಮಯ್ಯ ಅವರದ್ದು ಕೇವಲ ಸುಳ್ಳು ಮಾತು, ಎರಡು ನಾಲಿಗೆಯ ಮುಖ್ಯಮಂತ್ರಿ- ಆರ್.ಅಶೋಕ್ ಕಿಡಿ
ಕಾಂಗ್ರೆಸ್ ರಾಜಕುಮಾರ ನಮ್ಮ ಮಹಾರಾಜರನ್ನ ಅವಮಾನಿಸ್ತಾರೆ, ನವಾಬರ ದೌರ್ಜನ್ಯ ಮರೆತು ಬಿಡ್ತಾರೆ : ಪ್ರಧಾನಿ ಮೋದಿ