ನವದೆಹಲಿ:ದುರಂತ ಘಟನೆಯಲ್ಲಿ, ಸ್ಪೇನ್ಗೆ ತೆರಳುತ್ತಿದ್ದ 80 ವಲಸಿಗರನ್ನು ಹೊತ್ತ ದೋಣಿ ಮೊರಾಕೊ ಬಳಿ ಮಗುಚಿದ ಪರಿಣಾಮ 40 ಕ್ಕೂ ಹೆಚ್ಚು ಪಾಕಿಸ್ತಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ಗುರುವಾರ (ಜನವರಿ 16) ಹೇಳಿಕೆಯಲ್ಲಿ ತಿಳಿಸಿದೆ.
ಜನವರಿ 2 ರಂದು 66 ಪಾಕಿಸ್ತಾನಿಗಳು ಸೇರಿದಂತೆ 86 ವಲಸಿಗರೊಂದಿಗೆ ಮೌರಿಟಾನಿಯಾದಿಂದ ಹೊರಟ ದೋಣಿಯಿಂದ 36 ಜನರನ್ನು ರಕ್ಷಿಸುವಲ್ಲಿ ಮೊರೊಕನ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಮೃತಪಟ್ಟವರಲ್ಲಿ 44 ಮಂದಿ ಪಾಕಿಸ್ತಾನದವರು ಎಂದು ವಾಕಿಂಗ್ ಬಾರ್ಡರ್ಸ್ ಸಿಇಒ ಹೆಲೆನಾ ಮಾಲೆನೊ ಹೇಳಿದ್ದಾರೆ.
“ಕ್ಯಾನರಿ ದ್ವೀಪಗಳಿಗೆ ತೆರಳುತ್ತಿದ್ದ ದೋಣಿಯಲ್ಲಿ ಐವತ್ತು ಜನರು ಸಾವನ್ನಪ್ಪಿದ್ದಾರೆ, ಬಲಿಯಾದವರಲ್ಲಿ ನಲವತ್ತನಾಲ್ಕು ಮಂದಿ ಪಾಕಿಸ್ತಾನಿಗಳು. ಅವರನ್ನು ರಕ್ಷಿಸಲು ಯಾರೂ ಬರದೆ ಅವರು ಕ್ರಾಸಿಂಗ್ನಲ್ಲಿ 13 ದಿನಗಳ ಕಳೆದರು” ಎಂದು ಅವರು ಎಕ್ಸ್ನಲ್ಲಿ ಬರೆದಿದ್ದಾರೆ