Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
BREAKING NEWS

BREAKING : ಮಂಡ್ಯದಲ್ಲಿ ಘೋರ ದುರಂತ : ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ದುರ್ಮರಣ!

15/02/2026 11:26 AM

ವಾಹನ ಮಾಲೀಕರೇ ಗಮನಿಸಿ : `Fake FASTag’ ವಾರ್ಷಿಕ ಪಾಸ್ ಹಗರಣದ ಬಗ್ಗೆ `NHAI’ ಎಚ್ಚರಿಕೆ !

15/02/2026 11:19 AM

Watch video: ಬುರ್ಖಾ ಧರಿಸಿ ಕನ್ವರ್ ಯಾತ್ರೆ ಕೈಗೊಂಡ ಮುಸ್ಲಿಂ ಮಹಿಳೆ | Kanwar Yatra

15/02/2026 11:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ BBMPಯಿಂದ ಭರ್ಜರಿ ಕಾರ್ಯಾಚರಣೆ: 3800ಕ್ಕೂ ಹೆಚ್ಚು ಅನಧಿಕೃತ ಫ್ಲೆಕ್ಸ್ ತೆರವು
KARNATAKA

ಬೆಂಗಳೂರಲ್ಲಿ BBMPಯಿಂದ ಭರ್ಜರಿ ಕಾರ್ಯಾಚರಣೆ: 3800ಕ್ಕೂ ಹೆಚ್ಚು ಅನಧಿಕೃತ ಫ್ಲೆಕ್ಸ್ ತೆರವು

By kannadanewsnow0915/06/2024 7:15 PM

ಬೆಂಗಳೂರು: ನಗರದಲ್ಲಿ ಬಿಬಿಎಂಪಿಯಿಂದ ಅನಧಿಕೃತ ಫ್ಲೆಕ್ಸ್ ಗಳ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಲಾಗಿದೆ. ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್/ಬ್ಯಾನರ್ ಅಳವಡಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಅದರಂತೆ ಇದುವರೆಗೆ ಪೊಲೀಸ್ ಠಾಣೆಯಲ್ಲಿ 76 ದೂರುಗಳನ್ನು‌ ನೀಡಿದ್ದು, 48 ಎಫ್‌ಐಆರ್ ದಾಖಲಿಸಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಜಾಹೀರಾತುಗಳು ಇರದಂತೆ ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ ಶಿವಕುಮಾರ್ ರವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದು, ಅದರಂತೆ ಮುಖ್ಯ ಆಯುಕ್ತರು ಸೂಚನೆ ನೀಡಿರುತ್ತಾರೆ. ಅದರಂತೆ ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ರವರು ಎಲ್ಲಾ 8 ವಲಯಗಳ ಅಧಿಕಾರಿಗಳ ಜೊತೆ ಪ್ರತಿನಿತ್ಯ ಪರಿಶೀಲನಾ ಸಭೆ ನಡೆಸುತ್ತಿದ್ದು, ಯಾವುದೇ ಅನಧಿಕೃತ ಜಾಹೀರಾತುಗಳು ಇರದಂತೆ ಸೂಚನೆ ನೀಡುವ ಜೊತೆಗೆ ಅನಧಿಕೃತವಾಗಿ ಫ್ಲೆಕ್ಸ್/ಬ್ಯಾನರ್ಸ್ ಹಾಕುವವರ ಮೇಲೆ ಎಫ್.ಐ.ಆರ್ ದಾಖಲಿಸಲು ಸೂಚನೆ ನೀಡಿದ್ದಾರೆ.

ನಗರದಾದ್ಯಂತ ದಿನಾಂಕ: 01-06-2024 ರಿಂದ ನಿನ್ನೆಯವರೆಗೆ 3843 ಫ್ಲೆಕ್ಸ್, ಬ್ಯಾನರ್, ಎಲ್.ಇ.ಡಿ ಹಾಗೂ ಹೋರ್ಡಿಂಗ್ಸ್ ಗಳನ್ನು ತೆರವುಗೊಳಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ 76 ದೂರುಗಳನ್ನು ದಾಖಲಿಸಿದ್ದು, ಅದರಲ್ಲಿ 48 ಎಫ್.ಐ.ಆರ್ ಗಳನ್ನು ದಾಖಲಿಸಲಾಗಿದೆ. 75,000 ರೂ. ದಂಡ ವಿಧಿಸಲಾಗಿದೆ.

ಅನಧಿಕೃತ ಜಾಹೀರಾತು ಅಳವಡಿಸದಿರಲು ಕೋರಿದೆ:

ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ “ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೊರಾಂಗಣ ಜಾಹೀರಾತು ಫಲಕ ಮತ್ತು ಸಾರ್ವಜನಿಕ ಸಂದೇಶದ ಉಪ ವಿಧಿಗಳು-2018″ರಲ್ಲಿ ಯಾವುದೇ ವಸತಿ ಪ್ರದೇಶಗಳಲ್ಲಿ, ಖಾಸಗಿ ಸ್ವತ್ತುಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಿ ವಾಣಿಜ್ಯ ಜಾಹೀರಾತುಗಳನ್ನು, ಎಲ್.ಇ.ಡಿ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ಹಾಗೂ ಸಾರ್ವಜನಿಕ ಮತ್ತು ವೈಯಕ್ತಿಕ ಜಾಹೀರಾತುಗಳು, ಶುಭಾಶಯಗಳು, ಸಭೆ ಸಮಾರಂಭಗಳು ಕುರಿತ ಜಾಹೀರಾತು / ಪ್ರಕಟಣೆಗಳ ಪ್ಲೆಕ್ಸ್, ಬ್ಯಾನರ್, ಬಂಟಿAಗ್ಸ್, ಭಿತ್ತಿಪತ್ರ, ಬಾವುಟಗಳು ಇತ್ಯಾದಿ ಅಳವಡಿಸುವುದನ್ನು ನಿಷೇದಿಸಲಾಗಿದೆ. ಆದ್ದರಿಂದ ಯಾರೊಬ್ಬರೂ ಕೂಡಾ ಅನಧಿಕೃತವಾಗಿ ಜಾಹೀರಾತು ಅಳವಡಿಸದಿರಲು ಕೋರಿದೆ.

ಅನಧಿಕೃತ ಜಾಹೀರಾತುಗಳಿಂದ ನಗರದ ಸೌಂದರ್ಯ ಹಾಳು:

ನಗರದ ರಸ್ತೆ ಬದಿ, ಪಾದಚಾರಿ ಮಾರ್ಗ, ಮೇಲುಸೇತುವೆ ಸೇರಿದಂತೆ ಇನ್ನಿತರೆ ಕಡೆ ಅನಧಿಕೃತವಾಗಿ ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಅಳವಡಿಸುವುದರಿಂದ ನಾಗರೀಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುವುದರ ಜೊತೆಗೆ ನಗರದ ಸೌಂದರ್ಯ ಹಾಳಾಗುತ್ತಿದೆ. ಅಲ್ಲದೆ ಪರಿಸರಕ್ಕೆ ಮಾರಕವಾಗಿರುತ್ತದೆ.

ದೂರವಾಣಿ 1533ಗೆ ಕರೆ ಮಾಡಿ ಅಥವಾ ವಾಟ್ಸಪ್ ಸಂಖ್ಯೆ 9480683939 ಗೆ ಛಾಯಾಚಿತ್ರದ ಸಮೇತ ದೂರು ನೀಡಿ:

ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳ ಕುರಿತು ನಾಗರೀಕರು ಪಾಲಿಕೆ ಸಹಾಯವಾಣಿ ಸಂಖ್ಯೆಯಾದ 1533 ಅಥವಾ ಜಾಹೀರಾತು ವಿಭಾಗದ ವ್ಯಾಟ್ಸಪ್ ಸಂಖ್ಯೆ 9480683939 ಗೆ ಛಾಯಾಚಿತ್ರ ಅಥವಾ ವೀಡಿಯೋ ಮಾಡಿ ವಿಳಾಸ ಸಹಿತ ಕಳುಹಿಸಿದಲ್ಲಿ ಪಾಲಿಕೆ ವತಿಯಿಂದ ಕೂಡಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು.

ಪೆಟ್ರೋಲ್, ಡೀಸೆಲ್ ದರ ಏರಿಸುವ ಮೂಲಕ ಜನಸಾಮಾನ್ಯರಿಗೆ ಬರೆ ಎಳೆದ ಸರ್ಕಾರ: ಎಎಪಿ ಜಗದೀಶ್ ಆಕ್ರೋಶ

ಉದ್ಯೋಗ ವಾರ್ತೆ: ‘ಪ್ರವಾಸಿ ಮಾರ್ಗದರ್ಶಿ ಹುದ್ದೆ’ಗಳಿಗಾಗಿ ಅರ್ಜಿ ಆಹ್ವಾನ

Share. Facebook Twitter LinkedIn WhatsApp Email

Related Posts

BREAKING NEWS

BREAKING : ಮಂಡ್ಯದಲ್ಲಿ ಘೋರ ದುರಂತ : ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ದುರ್ಮರಣ!

15/02/2026 11:26 AM1 Min Read

ವಾಹನ ಮಾಲೀಕರೇ ಗಮನಿಸಿ : `Fake FASTag’ ವಾರ್ಷಿಕ ಪಾಸ್ ಹಗರಣದ ಬಗ್ಗೆ `NHAI’ ಎಚ್ಚರಿಕೆ !

15/02/2026 11:19 AM2 Mins Read

ದಕ್ಷಿಣಕನ್ನಡ : ತಾಯಿಯ ಮೇಲಿನ ಹಲ್ಲೆಗೆ ಪ್ರತಿಕಾರ : ತಂದೆಯ ಕೊಲೆ ಕೇಸ್ ನಲ್ಲಿ ಪುತ್ರ ಸೇರಿದಂತೆ ಮೂವರು ಅರೆಸ್ಟ್!

15/02/2026 11:11 AM1 Min Read
Recent News
BREAKING NEWS

BREAKING : ಮಂಡ್ಯದಲ್ಲಿ ಘೋರ ದುರಂತ : ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ದುರ್ಮರಣ!

15/02/2026 11:26 AM

ವಾಹನ ಮಾಲೀಕರೇ ಗಮನಿಸಿ : `Fake FASTag’ ವಾರ್ಷಿಕ ಪಾಸ್ ಹಗರಣದ ಬಗ್ಗೆ `NHAI’ ಎಚ್ಚರಿಕೆ !

15/02/2026 11:19 AM

Watch video: ಬುರ್ಖಾ ಧರಿಸಿ ಕನ್ವರ್ ಯಾತ್ರೆ ಕೈಗೊಂಡ ಮುಸ್ಲಿಂ ಮಹಿಳೆ | Kanwar Yatra

15/02/2026 11:14 AM

ದಕ್ಷಿಣಕನ್ನಡ : ತಾಯಿಯ ಮೇಲಿನ ಹಲ್ಲೆಗೆ ಪ್ರತಿಕಾರ : ತಂದೆಯ ಕೊಲೆ ಕೇಸ್ ನಲ್ಲಿ ಪುತ್ರ ಸೇರಿದಂತೆ ಮೂವರು ಅರೆಸ್ಟ್!

15/02/2026 11:11 AM
State News
BREAKING NEWS KARNATAKA

BREAKING : ಮಂಡ್ಯದಲ್ಲಿ ಘೋರ ದುರಂತ : ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ದುರ್ಮರಣ!

By kannadanewsnow0515/02/2026 11:26 AM KARNATAKA 1 Min Read

ಮಂಡ್ಯ : ಮಂಡ್ಯದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘೋರ ಘಟನೆ,…

ವಾಹನ ಮಾಲೀಕರೇ ಗಮನಿಸಿ : `Fake FASTag’ ವಾರ್ಷಿಕ ಪಾಸ್ ಹಗರಣದ ಬಗ್ಗೆ `NHAI’ ಎಚ್ಚರಿಕೆ !

15/02/2026 11:19 AM

ದಕ್ಷಿಣಕನ್ನಡ : ತಾಯಿಯ ಮೇಲಿನ ಹಲ್ಲೆಗೆ ಪ್ರತಿಕಾರ : ತಂದೆಯ ಕೊಲೆ ಕೇಸ್ ನಲ್ಲಿ ಪುತ್ರ ಸೇರಿದಂತೆ ಮೂವರು ಅರೆಸ್ಟ್!

15/02/2026 11:11 AM

Private Jobs : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ವಾರದಲ್ಲಿ 5 ದಿನ ಕೆಲಸ, 13 ಲಕ್ಷ ಸಂಬಳ, ಈಗಲೇ ಅರ್ಜಿ ಸಲ್ಲಿಸಿ !

15/02/2026 11:06 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.