Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Ram Navami 2025 : ಶ್ರೀರಾಮ ನವಮಿಯ ಶುಭ ಮುಹೂರ್ತ, ಮಹತ್ವ, ಪೂಜೆ ವಿಧಾನದ ಸಂಪೂರ್ಣ ಮಾಹಿತಿ

26/03/2026 7:35 AM

BREAKING : ಬಾಂಗ್ಲಾದೇಶದಲ್ಲಿ ಘೋರ ದುರಂತ : ಪದ್ಮಾ ನದಿಗೆ ಬಸ್ ಉರುಳಿ 23 ಪ್ರಯಾಣಿಕರು ಸಾವು

26/03/2026 7:30 AM

‘ಟ್ರಂಪ್ ಆಟವಾಡುತ್ತಿಲ್ಲ, ಮಾತು ಕೇಳದಿದ್ದರೆ ನರಕ ದರ್ಶನ ಖಚಿತ’: ಇರಾನ್‌ಗೆ ಅಮೆರಿಕದ ಅಂತಿಮ ಎಚ್ಚರಿಕೆ!

26/03/2026 7:28 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶ್ರೀಲಂಕಾ ಬಳಿ ಇರಾನಿನ ಹಡಗಿನ ಮೇಲೆ ಜಲಾಂತರ್ಗಾಮಿ ದಾಳಿ: 100ಕ್ಕೂ ಹೆಚ್ಚು ಜನರು ನಾಪತ್ತೆ
WORLD

ಶ್ರೀಲಂಕಾ ಬಳಿ ಇರಾನಿನ ಹಡಗಿನ ಮೇಲೆ ಜಲಾಂತರ್ಗಾಮಿ ದಾಳಿ: 100ಕ್ಕೂ ಹೆಚ್ಚು ಜನರು ನಾಪತ್ತೆ

By kannadanewsnow0904/03/2026 3:35 PM

ಢಾಕಾ: ಶ್ರೀಲಂಕಾ ಕರಾವಳಿಯಲ್ಲಿ ಇರಾನಿನ ಹಡಗಿನ ಮೇಲೆ ಜಲಾಂತರ್ಗಾಮಿ ದಾಳಿ ನಡೆದಿದ್ದು, ಕನಿಷ್ಠ 101 ಜನರು ಕಾಣೆಯಾಗಿದ್ದಾರೆ. 78 ಜನರು ಗಾಯಗೊಂಡಿದ್ದಾರೆ ಎಂದು ಶ್ರೀಲಂಕಾ ನೌಕಾಪಡೆ ಮತ್ತು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಹಿಂದೂ ಮಹಾಸಾಗರದ ಶ್ರೀಲಂಕಾ ಕರಾವಳಿ ತೀರದಲ್ಲಿ ಭೀಕರ ಜಲಗಂಡಾಂತರ ಸಂಭವಿಸಿದೆ. ಇರಾನ್ ದೇಶಕ್ಕೆ ಸೇರಿದ ಹಡಗಿನ ಮೇಲೆ ಜಲಾಂತರ್ಗಾಮಿ (Submarine) ದಾಳಿ ನಡೆದಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ಕನಿಷ್ಠ 101 ಜನರು ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಶ್ರೀಲಂಕಾ ನೌಕಾಪಡೆ ಮತ್ತು ರಕ್ಷಣಾ ಸಚಿವಾಲಯದ ಮೂಲಗಳು ಈ ಭೀಕರ ದಾಳಿಯನ್ನು ಖಚಿತಪಡಿಸಿವೆ. ಇರಾನಿನ ಹಡಗನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದ್ದು, ಹಡಗಿನಲ್ಲಿದ್ದ ಸುಮಾರು 78 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

ರಕ್ಷಣಾ ಕಾರ್ಯಾಚರಣೆ ಚುರುಕು:

ದಾಳಿ ನಡೆದ ತಕ್ಷಣ ಕಾರ್ಯಪ್ರವೃತ್ತವಾಗಿರುವ ಶ್ರೀಲಂಕಾ ನೌಕಾಪಡೆಯು ಸಮರ ನೌಕೆಗಳನ್ನು ಮತ್ತು ಹೆಲಿಕಾಪ್ಟರ್‌ಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿದೆ. ನಾಪತ್ತೆಯಾದ 101 ಜನರಿಗಾಗಿ ಸಮುದ್ರದಲ್ಲಿ ವ್ಯಾಪಕ ಶೋಧ ಕಾರ್ಯ ನಡೆಯುತ್ತಿದೆ. ಸಮುದ್ರದ ಅಲೆಗಳ ಅಬ್ಬರ ಕಾರ್ಯಾಚರಣೆಗೆ ತುಸು ಅಡ್ಡಿಪಡಿಸುತ್ತಿದ್ದರೂ, ರಕ್ಷಣಾ ಪಡೆಗಳು ಹಗಲಿರುಳು ಶ್ರಮಿಸುತ್ತಿವೆ.

ದಾಳಿಯ ಹಿಂದೆ ಯಾರ ಕೈವಾಡ?

ಈ ದಾಳಿಯನ್ನು ಯಾರು ನಡೆಸಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ. ಯಾವುದೇ ದೇಶ ಅಥವಾ ಸಂಘಟನೆ ಈವರೆಗೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಇತ್ತೀಚಿನ ಜಾಗತಿಕ ರಾಜಕೀಯ ವಿದ್ಯಮಾನಗಳು ಮತ್ತು ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಭದ್ರತಾ ಆತಂಕಗಳ ಹಿನ್ನೆಲೆಯಲ್ಲಿ ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ.

ತನಿಖೆಗೆ ಆದೇಶ:

ಘಟನೆಗೆ ಸಂಬಂಧಿಸಿದಂತೆ ಶ್ರೀಲಂಕಾ ಸರ್ಕಾರವು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ದಾಳಿ ನಡೆದ ಸಮಯದಲ್ಲಿ ಹಡಗು ಯಾವ ದಿಕ್ಕಿನಿಂದ ಎಲ್ಲಿಗೆ ತೆರಳುತ್ತಿತ್ತು ಮತ್ತು ದಾಳಿಯ ಸ್ವರೂಪ ಎಂತಹದ್ದು ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಇರಾನ್ ಸರ್ಕಾರವು ಕೂಡ ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದು, ತನ್ನ ಪ್ರಜೆಗಳ ಸುರಕ್ಷತೆಗಾಗಿ ಶ್ರೀಲಂಕಾ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ.

SHOCKING : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ : ಪಾಠ ಮಾಡುವಾಗಲೇ ಕುಸಿದು ಬಿದ್ದು ಶಿಕ್ಷಕ ಸಾವು!

BREAKING : ಪವಿತ್ರಾಗೌಡಗೆ ಜೈಲೂಟವೇ ಗತಿ : ಕೈದಿ ಕೇಳಿದ ಕೂಡಲೇ ಮನೆ ಊಟ ಒದಗಿಸಲು ಅವಕಾಶ ಇಲ್ಲ ಎಂದ ಹೈಕೋರ್ಟ್

Share. Facebook Twitter LinkedIn WhatsApp Email

Related Posts

BREAKING : ಬಾಂಗ್ಲಾದೇಶದಲ್ಲಿ ಘೋರ ದುರಂತ : ಪದ್ಮಾ ನದಿಗೆ ಬಸ್ ಉರುಳಿ 23 ಪ್ರಯಾಣಿಕರು ಸಾವು

26/03/2026 7:30 AM1 Min Read

BREAKING : ಅಮೆರಿಕದ ಟೆಕ್ಸಾಸ್ ತೈಲ ಸಂಸ್ಕರಣಾಗಾರದಲ್ಲಿ ಭಾರಿ ಸ್ಫೋಟ : ಮುಗಿಲೆತ್ತರಕ್ಕೆ ಚಿಮ್ಮಿದ ಬೆಂಕಿ | WATCH VIDEO

24/03/2026 9:25 AM1 Min Read

ಕೊಲಂಬಿಯಾದಲ್ಲಿ ಸೇನಾ ವಿಮಾನ ಪತನಗೊಂಡು 64 ಸೈನಿಕರು ಸಾವು : ಆಘಾತಕಾರಿ ವಿಡಿಯೋ ವೈರಲ್ | WATCH VIDEO

24/03/2026 7:28 AM1 Min Read
Recent News

Ram Navami 2025 : ಶ್ರೀರಾಮ ನವಮಿಯ ಶುಭ ಮುಹೂರ್ತ, ಮಹತ್ವ, ಪೂಜೆ ವಿಧಾನದ ಸಂಪೂರ್ಣ ಮಾಹಿತಿ

26/03/2026 7:35 AM

BREAKING : ಬಾಂಗ್ಲಾದೇಶದಲ್ಲಿ ಘೋರ ದುರಂತ : ಪದ್ಮಾ ನದಿಗೆ ಬಸ್ ಉರುಳಿ 23 ಪ್ರಯಾಣಿಕರು ಸಾವು

26/03/2026 7:30 AM

‘ಟ್ರಂಪ್ ಆಟವಾಡುತ್ತಿಲ್ಲ, ಮಾತು ಕೇಳದಿದ್ದರೆ ನರಕ ದರ್ಶನ ಖಚಿತ’: ಇರಾನ್‌ಗೆ ಅಮೆರಿಕದ ಅಂತಿಮ ಎಚ್ಚರಿಕೆ!

26/03/2026 7:28 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಪಹಣಿ ತಿದ್ದುಪಡಿಗಾಗಿ ತಹಶೀಲ್ದಾರರ ಅಧಿಕಾರ ಅವಧಿ ವಿಸ್ತರಿಸಿ ಸರ್ಕಾರ ಆದೇಶ

26/03/2026 7:25 AM
State News
KARNATAKA

Ram Navami 2025 : ಶ್ರೀರಾಮ ನವಮಿಯ ಶುಭ ಮುಹೂರ್ತ, ಮಹತ್ವ, ಪೂಜೆ ವಿಧಾನದ ಸಂಪೂರ್ಣ ಮಾಹಿತಿ

By kannadanewsnow5726/03/2026 7:35 AM KARNATAKA 2 Mins Read

ಶಾಸ್ತ್ರಗಳ ಪ್ರಕಾರ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ರಾಮನವಮಿಯನ್ನು ಆಚರಿಸಲಾಗುತ್ತದೆ. ಇದೇ ಪವಿತ್ರ ದಿನದಂದು ಮರ್ಯಾದಾ ಪುರುಷೋತ್ತಮ ಭಗವಾನ್…

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಪಹಣಿ ತಿದ್ದುಪಡಿಗಾಗಿ ತಹಶೀಲ್ದಾರರ ಅಧಿಕಾರ ಅವಧಿ ವಿಸ್ತರಿಸಿ ಸರ್ಕಾರ ಆದೇಶ

26/03/2026 7:25 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಪೌತಿ ಖಾತೆ’ ಬದಲಾವಣೆಗೆ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

26/03/2026 7:17 AM

ರಾಜ್ಯದಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವೀಧರರಿಗೆ 3 ವರ್ಷಗಳ `ಸರ್ಕಾರಿ ಸೇವೆ’ ಕಡ್ಡಾಯ: ಸರ್ಕಾರದ ಅಧಿಕೃತ ಆದೇಶ

26/03/2026 7:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.