ಆಯೋಧ್ಯೆ : ದೇಶದ ಐತಿಹಾಸಿಕ ಹೆಗ್ಗುರುತುಗಳಲ್ಲಿ ಒಂದಾದ ಭವ್ಯ ರಾಮಮಂದಿರದ ಕನಸು ಇಂದು ಸಾಕಾರಗೊಂಡಿದೆ. ಪ್ರಧಾನಿ ಮೋದಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ್ದು, ಭಾರತ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ.
ರಾಮನ ಪ್ರಾಣ ಪ್ರತಿಷ್ಠಾಪನೆಯ ನಂತ್ರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘”ನಮ್ಮ ರಾಮ ಬಂದಿದ್ದಾನೆ, ಇಂದಿನಿಂದ ಹೊಸ ಯುಗ ಆರಂಭವಾಗುತ್ತದೆ. ಶತಮಾನಗಳ ಕಾಯುವಿಕೆ, ತಾಳ್ಮೆ ಮತ್ತು ತ್ಯಾಗದ ನಂತರ ರಾಮ ಇಂದು ಬಂದಿದ್ದಾನೆ” ಎಂದು ಪ್ರಧಾನಿ ಮೋದಿ ಹೇಳಿದರು. ಇನ್ನು ನಮ್ಮ ರಾಮ್ ಲಲ್ಲಾ ಇನ್ನು ಮುಂದೆ ಟೆಂಟ್ನಲ್ಲಿ ವಾಸಿಸುವುದಿಲ್ಲ” ಎಂದು ಹೇಳಿದರು.
ಅಂದ್ಹಾಗೆ, ಮಹತ್ವದ ಧಾರ್ಮಿಕ ವಿಧಾನವಾದ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯೊಂದಿಗೆ ಅಧಿಕೃತವಾಗಿ ರಾಮಮಂದಿರ ಉದ್ಘಾಟನೆಯಾಗಿದೆ. ಮಧ್ಯಾಹ್ನ 12:29:03ಕ್ಕೆ ಆರಂಭವಾದ ಶುಭ ಅಭಿಜಿತ್ ಮುಹೂರ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಧಾರ್ಮಿಕ ವಿದ್ವಾಂಸರ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ. ಪ್ರಧಾನಿ ಮೋದಿ ಅವರು ಶ್ರೀ ರಾಮ ಜನ್ಮಭೂಮಿಯಲ್ಲಿನ ರಾಮ ಲಲ್ಲಾ ವಿಗ್ರಹವನ್ನು ಅನಾವರಣಗೊಳಿಸಿದರು. ಈ ಮೂಲಕ ಬಾಲ ರಾಮ 500 ವರ್ಷಗಳ ಬಳಿಕ ತನ್ನ ಮೂಲ ಜಾಗವನ್ನು ಸೇರಿದಂತಾಗಿದೆ.
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಬರೀ 45 ದಿನಗಳಲ್ಲಿ ಬಂದ ಹಣವೆಷ್ಟು ಗೊತ್ತೇ…? ಇಲ್ಲಿದೆ ಮಾಹಿತಿ…
ಅಯೋಧ್ಯೆ ರಾಮಮಂದಿರದ ಆವರಣದಲ್ಲಿ ‘ಹೂಮಳೆ’ ಸುರಿಸಿದ ವಾಯುಪಡೆಯ ಹೆಲಿಕಾಪ್ಟರ್‌ಗಳು | Ram Mandir | Watch Video