ಬೆಂಗಳೂರು: ರಾಜ್ಯದ ಜನತೆಯ ಹಿತ ಕಾಪಾಡುವುದೇ ನಮ್ಮ ಮೊದಲ ಆದ್ಯತೆ ಎಂಬುದಾಗಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್ ಮಾಡಿರುವಂತ ಅವರು, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರಕ್ಕಾಗಿ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದೇವೆ. ಕಳೆದ 5 ತಿಂಗಳಿನಿಂದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಬರ ಪರಿಹಾರಕ್ಕಾಗಿ ಮನವಿ ಸಲ್ಲಿಸಿ ಕಾದು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದು ನಮಗೆ ಅನಿವಾರ್ಯವಾಗಿತ್ತು ಎಂದಿದ್ದಾರೆ.
ಜವಾಬ್ದಾರಿಯುತ ಒಕ್ಕೂಟ ಸರ್ಕಾರವಾಗಿ ಕೇಂದ್ರವು ನಮ್ಮ ಮನವಿ, ರಾಜ್ಯದ ಬರ ಪರಿಸ್ಥಿತಿ, ಕೇಂದ್ರದ ಬರ ಅಧ್ಯಯನ ತಂಡದ ವರದಿ ಎಲ್ಲವನ್ನು ಪರಿಶೀಲಿಸಿ ಬರ ಪರಿಹಾರ ಬಿಡುಗಡೆ ಮಾಡಿದ್ದರೆ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ನಾವು ಮಳೆ ಕಡಿಮೆಯಾಗಿ ರಾಜ್ಯದಲ್ಲಿ ಬರ ಪರಿಸ್ಥಿತಿ ಉಂಟಾದಾಗ ಕಳೆದ 5 ತಿಂಗಳ ಹಿಂದೆಯೇ ಅಂದಾಜು 18,000 ಕೋಟಿ ಬರ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದೆವು. ಆದರೆ ಕೇಂದ್ರ ನಮ್ಮ ಮನವಿಗೆ ಇದೂವರೆಗೂ ಸ್ಪಂದಿಸಲಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ 26 ಬಿಜೆಪಿಯ ಸಂಸದರು ಮತ್ತು ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಬಿಜೆಪಿ ಸಚಿವರು ಈ ಬಗ್ಗೆ ಚಕಾರವೆತ್ತಲಿಲ್ಲ. ಕೇಂದ್ರದ ಬಿಜೆಪಿ ಸರ್ಕಾರವು ಕನ್ನಡಿಗರಿಗೆ, ಕರುನಾಡಿಗೆ ಮಾಡುತ್ತಿರುವ ಮೋಸವನ್ನು ತಡೆಯಲು ಕೋರ್ಟ್ ಮೊರೆ ಹೋಗುವುದು ನಮಗಿರುವ ಕೊನೆಯ ಮಾರ್ಗವಾಗಿತ್ತು ಎಂದಿದ್ದಾರೆ.
ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಯುತ ಸಿದ್ದರಾಮಯ್ಯನವರ ಈ ದಿಟ್ಟ ನಿರ್ಧಾರವನ್ನು ರಾಜ್ಯದ ಸಮಸ್ತ ಕನ್ನಡಿಗರು ಒಕ್ಕೊರಲಿನಿಂದ ಬೆಂಬಲಿಸಲಿದ್ದಾರೆ. ರಾಜ್ಯದ ಜನತೆಯ ಹಿತ ಕಾಪಾಡುವುದೇ ನಮ್ಮ ಮೊದಲ ಆದ್ಯತೆ ಎಂದು ಹೇಳಿದ್ದಾರೆ.
ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರಕ್ಕಾಗಿ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದೇವೆ. ಕಳೆದ 5 ತಿಂಗಳಿನಿಂದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಬರ ಪರಿಹಾರಕ್ಕಾಗಿ ಮನವಿ ಸಲ್ಲಿಸಿ ಕಾದು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದು ನಮಗೆ ಅನಿವಾರ್ಯವಾಗಿತ್ತು.
ಜವಾಬ್ದಾರಿಯುತ ಒಕ್ಕೂಟ ಸರ್ಕಾರವಾಗಿ ಕೇಂದ್ರವು ನಮ್ಮ ಮನವಿ, ರಾಜ್ಯದ ಬರ… https://t.co/z1NKukBDjQ
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) March 24, 2024
ಮರಳಿ ಗೂಡಿಗೆ ‘ಜನಾರ್ದನ ರೆಡ್ಡಿ’: ನಾಳೆ ಅಧಿಕೃತವಾಗಿ ‘ಬಿಜೆಪಿ ಸೇರ್ಪಡೆ’
ಲೋಕಸಭಾ ಚುನಾವಣೆ: ಈವರೆಗೆ ರಾಜ್ಯದಲ್ಲಿ ‘ಎಷ್ಟು ಹಣ, ಮದ್ಯ, ವಸ್ತು ಸೀಜ್’ ಗೊತ್ತಾ? ಇಲ್ಲಿದೆ ಡೀಟೆಲ್ಸ್