ಬುಲಂಡ್ಶಹರ್ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉತ್ತರ ಪ್ರದೇಶದ ಬುಲಂಡ್ಶಹರ್’ನಲ್ಲಿ 19,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನ ಉದ್ಘಾಟಿಸಿದರು. ಬುಲಂಡ್ಶಹರ್’ನಲ್ಲಿ 19,100 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳನ್ನ ಪ್ರಧಾನಿ ಮೋದಿ ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು.
ಈ ಸಮಯದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಈಗ ‘ರಾಷ್ಟ್ರೀಯ ಖ್ಯಾತಿಗೆ’ ಹೊಸ ಎತ್ತರವನ್ನ ನೀಡುವ ಸಮಯ ಬಂದಿದೆ ಎಂದು ಹೇಳಿದರು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಸರ್ಕಾರವು ದೇಶದಲ್ಲಿ ನಾಲ್ಕು ಸಮಗ್ರ ಕೈಗಾರಿಕಾ ಟೌನ್ ಶಿಪ್’ಗಳನ್ನ ಅಭಿವೃದ್ಧಿಪಡಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಇವುಗಳಲ್ಲಿ ಒಂದನ್ನು ಗ್ರೇಟರ್ ನೋಯ್ಡಾದಲ್ಲಿ ನಿರ್ಮಿಸಲಾಗಿದೆ ಮತ್ತು ಅದನ್ನು ಇಂದು ಉದ್ಘಾಟಿಸಲಾಗುವುದು. ಇದು ವಿಶೇಷವಾಗಿ ರಾಜ್ಯದ ಪಶ್ಚಿಮ ಪ್ರದೇಶದ ವ್ಯವಹಾರಗಳಿಗೆ ಪ್ರಯೋಜನವನ್ನು ನೀಡುತ್ತದೆ.
ಅಂದ್ಹಾಗೆ, ಪ್ರಧಾನಿ ಮೋದಿಯವರನ್ನು ಸ್ಥಳೀಯ ನಾಯಕರು ರಾಮನ ಪ್ರತಿಮೆಯನ್ನ ಉಡುಗೊರೆಯಾಗಿ ನೀಡುವ ಮೂಲಕ ವೇದಿಕೆಯಲ್ಲಿ ಸ್ವಾಗತಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರನ್ನ ಸ್ವಾಗತಿಸಿದರು. ಬುಲಂದ್ಶಹರ್ಗೆ ಅಭಿವೃದ್ಧಿ ಯೋಜನೆಗಳ ದೊಡ್ಡ ಉಡುಗೊರೆಯನ್ನ ಪ್ರಧಾನಿ ನೀಡಿದ್ದಾರೆ. ರೈಲು, ರಸ್ತೆ, ಅನಿಲ, ತೈಲ ಮತ್ತು ನಗರಾಭಿವೃದ್ಧಿ ಮತ್ತು ವಸತಿಯಂತಹ ಪ್ರಮುಖ ಯೋಜನೆಗಳು ಸೇರಿದಂತೆ 19,100 ಕೋಟಿ ರೂ.ಗಳ ಯೋಜನೆಗಳನ್ನ ಪ್ರಧಾನಿ ಮೋದಿ ಉದ್ಘಾಟಿಸಿದರು.
BREAKING : ಉತ್ತರ ಪ್ರದೇಶದ ಬುಲಂಡ್ಶಹರ್’ನಲ್ಲಿ 19,100 ಕೋಟಿ ರೂ.ಗಳ ಯೋಜನೆಗಳಿಗೆ ‘ಪ್ರಧಾನಿ ಮೋದಿ’ ಚಾಲನೆ
ಹೋಗಲ್ಲ ಹೋಗಲ್ಲ ಅಂತಾನೇ ಬಿಜೆಪಿಗೆ ಹೋಗಿದ್ದಾರೆ. ಇದು ‘ಜಗದೀಶ್ ಶೆಟ್ಟರ್’ ಆತ್ಮಸಾಕ್ಷಿಗೆ ಬಿಟ್ಟ ವಿಚಾರ- ಡಿಕೆಶಿ