ಬೆಂಗಳೂರು : ರಾಜ್ಯ ಸರ್ಕಾರವು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ 2013-14 0 2018-19ನೇ ಸಾಲಿನವರೆಗೆ ವಿವಿಧ ಯೋಜನೆಗಳಡಿ ನೀಡಲಾಗಿರುವ ಸಾಲಗಳಿಗೆ ಒಟಿಎಸ್ ಅಡಿ ಬಡ್ಡಿ ಮನ್ನಾ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಸಚಿವ ಎಚ್.ಕೆ.ಪಾಟೀಲ್ ಮಾಹಿತಿ ನೀಡಿದ್ದು, ನಿಗಮದ ವಿವಿಧ ಯೋಜನೆಗಳ ಅಡಿ 5 ವರ್ಷದಲ್ಲಿ 981 ಕೋಟಿ ರು. ಸಾಲವನ್ನು ಫಲಾನುಭವಿಗಳಿಗೆ ನೀಡಲಾಗಿತ್ತು. ಈ ಪೈಕಿ 714 ಕೋಟಿ ರು. ವಸೂಲಾತಿ ಬಾಕಿ ಇದೆ. ಇವರಿಗೆ ಒಂದು ಬಾರಿ ಪರಿಹಾರ ಯೋಜನೆ (ಒಟಿ ಎಸ್) ಬಡ್ಡಿ ಇಲ್ಲದೆ ವಸೂಲಾತಿಗೆ ಅವಕಾಶ ನೀಡಲಾಗಿದೆ ಎಂದರು.
ರಾಜ್ಯದಲ್ಲಿ ಒತ್ತುವರಿಗೆ ಗುರಿಯಾಗಿರುವ 326 ದೇವಾಲಯಗಳ ಜಾಗದ ಒತ್ತುವರಿ ತೆರವುಗೊಳಿಸಿ ಆಸ್ತಿಗಳ ದಾಖಲೆಗಳನ್ನು ಡಿಜಟಲೀ ಕರಣ ಗೊಳಿಸಲು 15 ಕೋಟಿ ರು. ವೆಚ್ಚದ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಅಲ್ಲದೆ ಸಾರಥಿ ಯೋಜನೆಯಡಿ ಜಿಬಿಎ ವ್ಯಾಪ್ತಿಯಲ್ಲಿ ಆಟೋ ಖರೀದಿಗೆ 19.18 ಕೋಟಿ ರು. ವೆಚ್ಚದಲ್ಲಿ ಇ-ವೆಂಡಿಂಗ್ ವಾಹನ ಖರೀದಿಗೆ ಒಪ್ಪಿಗೆ ನೀಡಲಾಗಿದ್ದು, ಸಹಾಯಧನ ಒದಗಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಕಲಬುರಗಿ, ಯಾದಗಿರಿ, ಬೀದರ್, ಕೊಪ್ಪಳ, ಬಳ್ಳಾರಿ, ರಾಯಚೂರಲ್ಲಿ 100 ಕೋಟಿ ರು. ವೆಚ್ಚದಲ್ಲಿ ಅರಣೀಕರಣ ಪ್ರಕ್ರಿಯೆ ಚಾಲನೆಗೆ ತೀರ್ಮಾನಿಸಲಾಗಿದೆ.
ಸುಳ್ಳು ಸುದ್ದಿ ಹರಡುವುದಕ್ಕೆ ಬ್ರೇಕ್, ಡಿಜಿಟಲ್ ಕಂಟೆಂಟ್ ಮೇಲೆ ಕಡಿವಾಣ. ಎಐ ತಂತ್ರಜ್ಙಾನದ ಮೂಲಕ ಕಡಿವಾಣ. ಸುಳ್ಳು ಸುದ್ದಿ ಹರಡಿದರೆ ತಕ್ಷಣ ಅಲರ್ಟ್ ಆಗುತ್ತದೆ. ಅದು ಸರ್ಕಾರದ ಗಮನಕ್ಕೆ ಬರುತ್ತದೆ. ಸಂಪೂರ್ಣ ಸೋಶಿಯಲ್ ಮಿಡಿಯಾ ಮೇಲೆ ಕಣ್ಣಿಡಲು ಸರ್ಕಾರ ನಿರ್ಧರಿಸಿದೆ.








