ನವದೆಹಲಿ: ಪಾಕಿಸ್ತಾನಕ್ಕೆ ನಾವು ಸ್ಪಷ್ಟ ಸಂದೇಶ ನೀಡಿದ್ದೇವೆ. ಸಿಂಧೂ ನದಿ ನೀರು ಬಿಡುವ ವಿಚಾರ ಸಸ್ಪೆಂಡ್ ನಲ್ಲಿ ಇಟ್ಟಿದ್ದೇವೆ. ಭಾರತ-ಅಮೇರಿಕಾ ಆಪರೇಷನ್ ಸಿಂಧೂರ್ ಬಗ್ಗೆ ಚರ್ಚಿಸಿವೆ. ವ್ಯಾಪಾರ ಒಪ್ಪಂದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಪಿಒಕೆ ಕುರಿತು ಮಾತ್ರ ಚರ್ಚೆ ಮಾಡಲಾಗಿದೆ. ಕಾಶ್ಮೀರದ ವಿಚಾರದಲ್ಲಿ ಬೇರೆ ದೇಶಗಳು ತಲೆಹಾಕುವಂತಿಲ್ಲ ಎಂಬುದಾಗಿ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಲ್ ತಿಳಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಜಮ್ಮು-ಕಾಶ್ಮೀರದ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಪಾಕಿಸ್ತಾನ ಕದನವಿರಾಮ ಉಲ್ಲಂಘಿಸಿದರೇ ಭಾರತದಿಂದ ತಕ್ಕ ಉತ್ತರ ನೀಡಲಾಗುತ್ತದೆ ಎಂದರು.
#WATCH | Delhi: On US President Donald Trump and trade, MEA Spokesperson Randhir Jaiswal says, "From the time Operation Sindoor commenced on 7th May till the understanding on cessation of firing and military action on 10th May, there were conversations between Indian and US… pic.twitter.com/iBAoLpg8n5
— ANI (@ANI) May 13, 2025
ಪ್ರಸ್ತುತ ವಿಷಯ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಚರ್ಚೆ ಇದೆ. ಪಾಕಿಸ್ತಾನ ಡಿಜಿಎಂಒ ಮೇ.10ರಂದು ಎರಡು ಬಾರಿ ಕರೆ ಮಾಡಿದ್ರು. ಮೇ.10ರಂದು ಮಧ್ಯಾಹ್ನ 3.55ಕ್ಕೆ ಎರಡನೇ ಬಾರಿ ಕರೆ ಮಾಡಿದ್ದರು. ಪಾಕಿಸ್ತಾನಕ್ಕೆ ನಾವು ಸ್ಪಷ್ಟ ಸಂದೇಶವನ್ನು ನೀಡಿದ್ದೇವೆ ಎಂದರು.
ಪಾಕಿಸ್ತಾನದ ಕೆಲಸವೇ ಭಯೋತ್ಪಾನೆಯನ್ನು ಉತ್ಪಾದನೆ ಮಾಡುವುದು. ಪಾಕಿಸ್ತಾನ ಪಿಒಕೆ ತೊರೆದರೇ, ಎಲ್ಲಾ ಸಮಸ್ಯೆ ಪರಿಹರಿಸಲಾಗುವುದು ಎಂದರು.
#WATCH | Delhi: On the latest statement made by the Pakistan Foreign Office, MEA Spokesperson Randhir Jaiswal says, "We have seen the statement made by the Pakistani side. That a nation which has nurtured terrorism on an industrial scale should think that it can escape the… pic.twitter.com/PlvvFQ4sCn
— ANI (@ANI) May 13, 2025