93 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ವರ್ಷದ ಆಸ್ಕರ್​​ ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಿಕೆ – Kannada News Now


Film Other Film

93 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ವರ್ಷದ ಆಸ್ಕರ್​​ ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಿಕೆ

ನ್ಯೂಸ್ ಡೆಸ್ಕ್ : ಕೊರೊನಾ ವೈರೆಸ್​ ಹಿನ್ನೆಲೆಯಲ್ಲಿ ಈ ವರ್ಷದ ಆಸ್ಕರ್​​ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡಲಾಗಿದೆ. ಈ ರೀತಿ ನಾಲ್ಕು ತಿಂಗಳುಗಳ ಕಾಲ ಆಸ್ಕರ್​​ ಕಾರ್ಯಕ್ರಮವನ್ನು ಮುಂದೂಡಿರುವುದು 93 ವರ್ಷಗಳಲ್ಲಿ ಇದೇ ಮೊದಲ ಬಾರಿ ಎಂದು ತಿಳಿದು ಬಂದಿದೆ.

ಆಸ್ಕರ್​​ ಆಯೋಜಕರು ಈ ಕಾರ್ಯಕ್ರಮವನ್ನು ಇದೇ ವರ್ಷದ ಮೇ ಮತ್ತು ಜೂನ್​ ತಿಂಗಳಲ್ಲಿ ನಡೆಸುವಂತೆ ಕೇಳಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಆದ್ರೆ ಈ ಕಾರ್ಯಕ್ರಮವು ಮುಂದಿನ ವರ್ಷ ಫೆಬ್ರವರಿ 28ಕ್ಕೆ ಮುಂದೂಡಲಾಗಿದೆ.ಈ ಕಾರ್ಯಕ್ರಮ ಪ್ರತಿ ವರ್ಷ ಬೇಸಿಗೆ ನಂತರ ನಡೆಯುತ್ತಿದ್ದು, ಸಿನಿಮಾ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ನವೆಂಬರ್​ ಮತ್ತು ಡಿಸೆಂಬರ್​ನಲ್ಲಿ ನಾಮಿನೇಷನ್​ಗೆ ಕಳುಹಿಸುತ್ತಿದ್ದರು.

ಈ ವರ್ಷ ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲಾ ಸಿನಿಮಾ ಶೂಟಿಂಗ್ ಗಳು ಸ್ಥಬ್ಧವಾದ ಹಿನ್ನೆಲೆಯಲ್ಲಿ ಆಸ್ಕರ್​ ಆಯೋಜಕರು ಈಗಿರುವ ಸಿನಿಮಾಗಳು ರಿಲೀಸ್​ ಆದ ಮೇಲೆ, ಅಂದ್ರೆ ಕೆಲವು ತಿಂಗಳ ನಂತರ ಆಸ್ಕರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಮಾತುಕತೆ ನಡೆಸಿದ್ದಾರೆ.ತಿಳಿಸಿದ್ದಾರೆ ಎನ್ನಲಾಗಿದೆ.