ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೇರಿದಂತೆ Influenza panel Test ಗಳ ದರವನ್ನು ನಿಗದಿ ಪಡಿಸಿ ಸರ್ಕಾರ ಆದೇಶಿಸಿದೆ. ಈ ದರವನ್ನು ಮೀರದಂತೆ ನಿಯಮ ಪಾಲಿಸುವಂತೆ ಖಡಕ್ ಸೂಚನೆ ನೀಡಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಭಾರತ ಸರ್ಕಾರದ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ನವದೆಹಲಿ, ಇವರು, ಕೋವಿಡ್-19 ಪಾಸಿಟಿವ್ ಪ್ರಕರಣಗಳ ಪರೀಕ್ಷೆಗೆ ಸಂಬಂಧಿಸಿದಂತೆ ಹೊರಡಿಸಿರುವ ಮಾರ್ಗಸೂಚಿಗಳಲ್ಲಿ, ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳು / ಪ್ರಯೋಗ ಶಾಲೆಗಳು ಕೋವಿಡ್-19 ಪರೀಕ್ಷೆಯನ್ನು ಕಡ್ಡಾಯವಾಗಿ ಎಲ್ಲಾ SARI ಸಂಬಂಧಿಸಿದ ಪ್ರಕರಣಗಳಿಗೆ ಮಾತ್ರ ನಡೆಸುವುದು ಮತ್ತು ILI ಪ್ರಕರಣದ ಶೇ. 5 ರಷ್ಟನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲು ಸೂಚಿಸಿರುತ್ತಾರೆ.
ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು, ಇವರಿಂದ ಸ್ವೀಕೃತವಾದ ಏಕಕಡತದಲ್ಲಿ, ಕೆಲವು ಖಾಸಗಿ ವೈದ್ಯಕೀಯ ಸಂಸ್ಥೆಗಳು, ಖಾಸಗಿ ಪ್ರಯೋಗ ಶಾಲೆಗಳು, ಸಾಮಾನ್ಯ ಜ್ವರಕ್ಕೂ ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೆ ಪಡೆದು SRF ID ಯನ್ನೂ ಸಹ ಸೃಜಿಸದೇ INFLUENZA PANEL ಕಿಟ್ ಬಳಸಿ ಅವಶ್ಯವಿಲ್ಲದ ಪರೀಕ್ಷೆಗಳನ್ನು ರೂ.8,000/- ರಿಂದ ರೂ.10,000/- ಹಣ ಪಡೆದು ಪರೀಕ್ಷೆ ನಡೆಸಿ, ವರದಿಯನ್ನು ರೋಗಿಗಳಿಗೆ ನೀಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಜ್ವರ ಅಥವಾ ಯಾವುದೇ ರೀತಿಯ ವೈರಲ್ ಸೋಂಕುಗಳಿರುವ ರೋಗಿಗಳಿಗೆ, ಕೆಲವು ಖಾಸಗಿ ಆಸ್ಪತ್ರೆಗಳು ರೋಗ ನಿರ್ಣಯಕ್ಕಾಗಿ INFLUENZA PANEL ಪರೀಕ್ಷೆಯನ್ನು ದಿನನಿತ್ಯದ ಪರೀಕ್ಷೆಯಾಗಿ ಮಾಡುತ್ತಾರೆ. ಆದ್ದರಿಂದ, ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ, ಬೆಂಗಳೂರು, ಇವರ ಅಧ್ಯಕ್ಷತೆಯಲ್ಲಿ ದಿನಾಂಕ:13-6-2025 ರಂದು ರಾಜ್ಯದ ಖಾಸಗಿ ವೈದ್ಯಕೀಯ ಸಂಸ್ಥೆಗಳು / ಆಸ್ಪತ್ರೆಗಳಿಗೆ ಹಾಗೂ ಖಾಸಗಿ ಪ್ರಯೋಗ ಶಾಲೆಗಳಲ್ಲಿ ನಡೆಸುವ ಕೋವಿಡ್ ಸೇರಿ ಯಾವುದೇ ರೀತಿಯ ವೈರಲ್ ಸೋಂಕುಗಳಿರುವ ರೋಗಗಳನ್ನು ಪತ್ತೆ ಹಚ್ಚಲು ನಡೆಸಲಾಗುವ INFLUENZA PANEL TEST ದರವನ್ನು ರೂ.1,700/- (ಒಂದು ಸಾವಿರದ ಏಳು ನೂರು ರೂಪಾಯಿಗಳು ಮಾತ್ರ) ಕ್ಕೆ ಮಿತಿಗೊಳಿಸಲು ನಿರ್ಣಯಿಸಲಾಗಿರುತ್ತದೆ.
ಅದರಂತೆ, ರೋಗಿಗಳು ಅತಿಯಾದ ಶುಲ್ಕಕ್ಕೆ ಒಳಗಾಗದಂತೆ ಮತ್ತು ರಾಜ್ಯದಾದ್ಯಂತ ಕೈಗೆಟುಕುವ ದರದಲ್ಲಿ INFLUENZA PANEL ವೈರಸ್ ಪರೀಕ್ಷೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಶುಲ್ಕವನ್ನು ಪ್ರಮಾಣೀಕರಿಸುವುದು ಮತ್ತು ಇನ್ನು ಮುಂದೆ ಎಲ್ಲಾ SARI ಮತ್ತು ILI ಪ್ರಕರಣಗಳನ್ನು IHIP Portal ನಲ್ಲಿ ಕಡ್ಡಾಯವಾಗಿ ದಾಖಲಿಸುವುದು ಅಗತ್ಯವಾಗಿದೆ ಎಂದು ತಿಳಿಸಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಪ್ರಸ್ತಾವನೆಯಲ್ಲಿ ತಿಳಿಸಿರುವ ಅಂಶಗಳ ಹಿನ್ನಲೆಯಲ್ಲಿ, ರಾಜ್ಯದ ಖಾಸಗಿ ವೈದ್ಯಕೀಯ ಸಂಸ್ಥೆಗಳು | ಆಸ್ಪತ್ರೆಗಳಿಗೆ ಹಾಗೂ ಖಾಸಗಿ ಪ್ರಯೋಗ ಶಾಲೆಗಳಲ್ಲಿ ನಡೆಸುವ ಕೋವಿಡ್ ಸೇರಿ ಯಾವುದೇ ರೀತಿಯ ವೈರಲ್ ಸೋಂಕುಗಳಿರುವ ರೋಗಗಳನ್ನು ಪತ್ತೆ ಹಚ್ಚಲು ನಡೆಸಲಾಗುವ INFLUENZA PANEL TEST ದರವನ್ನು ರೂ.1,700/- (ಒಂದು ಸಾವಿರದ ಏಳು ನೂರು ರೂಪಾಯಿಗಳು ಮಾತ್ರ ಕ್ಕೆ ಮಿತಿಗೊಳಿಸಿ ಆದೇಶಿಸಿದೆ.
ರಾಜ್ಯದ ಖಾಸಗಿ ವೈದ್ಯಕೀಯ ಸಂಸ್ಥೆಗಳು / ಆಸ್ಪತ್ರೆಗಳು, ಖಾಸಗಿ ಪ್ರಯೋಗಶಾಲೆಗಳು / ಡಯಾಗೋಸ್ಟಿಕ್ ಲ್ಯಾಬೊರೇಟರಿಗಳು ಈ ಮೇಲೆ ತಿಳಿಸಿದ INFLUENZA PANEL TEST ದರವನ್ನು ನಿಗದಿಪಡಿಸಿ ಹೊರಡಿಸಿರುವ ಆದೇಶವನ್ನು ಪಾಲಿಸುವುದು ಹಾಗೂ ಎಲ್ಲಾ SARI ಮತ್ತು ILI ಪ್ರಕರಣಗಳನ್ನು IHIP Portal ನಲ್ಲಿ ಖಡ್ಡಾಯವಾಗಿ ದಾಖಲಿಸುವುದು.
ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ ಅಧಿನಿಯಮ, 2007ರ ಸೆಕ್ಷನ್ 15(1) ಮತ್ತು (2) ರಂತೆ ಕ್ರಮ ಜರುಗಿಸಲಾಗುವುದು ಎಂಬುದಾಗಿ ಎಚ್ಚರಿಕೆ ನೀಡಿದೆ.
`ಪ್ಯಾರಸಿಟಮಾಲ್’ ಬಳಸಿ ಬಟ್ಟೆಗಳ ಕಲೆಗಳನ್ನು ತೆಗೆಯಬಹುದು : ವಿಡಿಯೋ ವೈರಲ್ | WATCH VIDEO
WATCH VIDEO: ಭೀಮನ ಅಮಾವಾಸ್ಯೆಯ ಪ್ರಯುಕ್ತ ಸಿಂಗದೂರು ಚೌಡೇಶ್ವರಿ ದೇವಿಗೆ ವಿಶೇಷ ಅಲಂಕಾರ: ಹರಿದು ಬಂದ ಭಕ್ತಸಾಗರ