ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅಧ್ಯಕ್ಷರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕರಿಸಲಾಯಿತು. ಈ ವೇಳೆ ಜನರು ಮೂರನೇ ಬಾರಿಗೆ ಎನ್‌ಡಿಎಗೆ ಮತ ಹಾಕಿದ್ದಾರೆ ಪ್ರಧಾನಿ ಮೋದಿ ಹೇಳಿದರು.

ಸಾರ್ವಜನಿಕರ ತೀರ್ಪನ್ನು ಒಪ್ಪಿಕೊಳ್ಳಲು ಪ್ರತಿಪಕ್ಷಗಳಿಗೆ ಸಾಧ್ಯವಾಗುತ್ತಿಲ್ಲ. ನಮ್ಮ ಯಶಸ್ಸನ್ನು ಅರಗಿಸಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು. ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಚುನಾವಣಾ ಫಲಿತಾಂಶಕ್ಕೆ ಸಾಕ್ಷಿ ಎಂದರು. ಇನ್ನು ಇದೇ ವೇಳೆ ಸಂವಿಧಾನ ನನಗೆ ಅತ್ಯಂತ ಪವಿತ್ರವಾದುದು ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಹಿಂದೆ ಅತಂತ್ರ ಸರ್ಕಾರ ನಡೆಸಿದೆ ಎಂದು ವ್ಯಂಗ್ಯವಾಡಿದ ಪ್ರಧಾನಿ ಮೋದಿ, ಜನ ಸೋಲಿಸಿದರೂ ಪಕ್ಷದಲ್ಲಿ ಇನ್ನೂ ಬದಲಾವಣೆ ಆಗಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ ಎಂದು ಬಹಿರಂಗಪಡಿಸಿದರು. ಆದ್ರೆ, ಇದೆಲ್ಲ ಕೇವಲ ಸ್ಯಾಂಪಲ್ ಆಗಿದ್ದು, ವಾಸ್ತವಿಕ ಬೆಳವಣಿಗೆ ಭವಿಷ್ಯದಲ್ಲಿ ಗೋಚರಿಸಲಿದೆ. ಮೋದಿ ಮಾತನಾಡುವಾಗ ವಿರೋಧ ಪಕ್ಷದ ನಾಯಕರು ಟೀಕಿಸಿದರು. ಅವರ ಮಾತಿಗೆ ಅಡ್ಡಿಪಡಿಸಿದರು. ಬಳಿಕ ಸಭೆಯಿಂದ ಹೊರ ನಡೆದರು. ಇದನ್ನೂ ಪ್ರಧಾನಿ ಟೀಕಿಸಿದ್ದು, ಚರ್ಚೆಯಲ್ಲಿ ಭಾಗವಹಿಸುವ ಧೈರ್ಯವಿಲ್ಲದೇ ಓಡಿಹೋದರು ಎಂದರು.

 

BREAKING: ಬಾರ್ಬಡೋಸ್ ನಿಂದ ಹೊರಟ ಟೀಂ ಇಂಡಿಯಾ ಆಟಗಾರರು: ನಾಳೆ ಮುಂಜಾನೆ ದೆಹಲಿಗೆ ರೀಚ್ | Indian cricket team

‘ಮುಡಾ’ ಅಕ್ರಮ ಆರೋಪ : ನಾನು ಯಾಕಪ್ಪ ರಾಜೀನಾಮೆ ಕೊಡಬೇಕು? ನನ್ನ ಪಾತ್ರವೇನಿದೆ? ಸಿಎಂ ಸಿದ್ದರಾಮಯ್ಯ

BREAKING: ಬಾರ್ಬಡೋಸ್ ನಿಂದ ಹೊರಟ ಟೀಂ ಇಂಡಿಯಾ ಆಟಗಾರರು: ನಾಳೆ ಮುಂಜಾನೆ ದೆಹಲಿಗೆ ರೀಚ್ | Indian cricket team

Share.
Exit mobile version