Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಈ ದಾಳಿಗಳು ತಕ್ಷಣ ನಿಲ್ಲಬೇಕು!’: ಅಮೆರಿಕ ರಾಯಭಾರಿಗೆ ಭಾರತದ ‘ಸಮನ್ಸ್ : ಪಶ್ಚಿಮ ಏಷ್ಯಾ ಹಡಗು ದಾಳಿ ವಿರುದ್ಧ ತೀವ್ರ ಆಕ್ರೋಶ!

‘ವಾಣಿಜ್ಯ ಹಡಗುಗಳ ಮೇಲಿನ ನಿರಂತರ ದಾಳಿಗಳು ತೀವ್ರ ಕಳವಳಕಾರಿ’: ಒಮಾನ್ ಕರಾವಳಿ ಬಿಕ್ಕಟ್ಟಿನ ಬಗ್ಗೆ ಭಾರತ ಖಡಕ್ ಎಚ್ಚರಿಕೆ!

GOOD NEWS: ರಾಜ್ಯದ ವಿದ್ಯಾರ್ಥಿಗಳಿಗೆ ಬಂಪರ್ ಗಿಫ್ಟ್: ಇನ್ನೆರಡು ದಿನದಲ್ಲಿ ‘ಉಚಿತ ಬಸ್ ಪಾಸ್’ ವಿತರಣೆ ಪ್ರಕ್ರಿಯೆ ಆರಂಭ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಸಿಎಂ ಬದಲಾವಣೆ ವಿಷಯ’ ಮರೆಮಾಚಲು ‘RSS’ ವಿಷಯ ಪ್ರಸ್ತಾಪ: ಪ್ರತಿಪಕ್ಷ ನಾಯಕ ಆರ್‌.ಅಶೋಕ್
KARNATAKA

‘ಸಿಎಂ ಬದಲಾವಣೆ ವಿಷಯ’ ಮರೆಮಾಚಲು ‘RSS’ ವಿಷಯ ಪ್ರಸ್ತಾಪ: ಪ್ರತಿಪಕ್ಷ ನಾಯಕ ಆರ್‌.ಅಶೋಕ್

By ವಸಂತ ಬಿ ಈಶ್ವರಗೆರೆ

ಧಾರವಾಡ: ರಾಜ್ಯ ಸರ್ಕಾರದಲ್ಲಿ ಸಿಎಂ ಬದಲಾವಣೆಯಾಗಲಿದೆ. ಆ ವಿಷಯವನ್ನು ಬೇರೆಡೆ ತಿರುಗಿಸಲು ಆರ್‌ಎಸ್‌ಎಸ್‌ ವಿಷಯವನ್ನು ತರಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕೋಪಯೋಗಿ, ಶಿಕ್ಷಣ, ನೀರಾವರಿ ಸೇರಿದಂತೆ ಎಲ್ಲ ಇಲಾಖೆಗಳಲ್ಲೂ ಕಾಂಗ್ರೆಸ್‌ ಸರ್ಕಾರ ವಿಫಲವಾಗಿದ್ದು, ಖಾಲಿ ಡಬ್ಬ ಶಬ್ದ ಮಾಡುವಂತೆ ಮಾಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಹಣ ಬಿಡುಗಡೆ ಮಾಡಿ, ಟೆಂಡರ್‌ ಮಾಡಿದ ಕಾಮಗಾರಿಗಳನ್ನು ಕಾಂಗ್ರೆಸ್‌ ನಾಯಕರು ಉದ್ಘಾಟಿಸುತ್ತಿದ್ದಾರೆ. ಆರ್ಥಿಕ ಇಲಾಖೆಯಲ್ಲಿ ಯಾವ ಯೋಜನೆಗೂ ಹಣವಿಲ್ಲ. ಬಜೆಟ್‌ನಲ್ಲಿ ಒಟ್ಟು ಅನುದಾನ 80 ಸಾವಿರ ಕೋಟಿ ರೂ. ಇದ್ದರೆ, ಗ್ಯಾರಂಟಿಗಳಿಗೆ 60-70 ಸಾವಿರ ಕೋಟಿ ರೂ. ಆಗುತ್ತದೆ. ಉಳಿದ 10 ಸಾವಿರ ಕೋಟಿ ರೂ. ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಸಚಿವರ ಮನೆಯ ದುರಸ್ತಿ, ಕಾಂಗ್ರೆಸ್‌ ಸಮಾವೇಶಕ್ಕೆ, ಜಾತಿ ಗಣತಿಗೆ ಖರ್ಚು ಮಾಡುತ್ತಿದ್ದಾರೆ. ಈ ಸರ್ಕಾರ ಪಾಪರ್‌ ಆಗಿದೆ ಎಂದರು.

ಮಾಧ್ಯಮಗಳಲ್ಲಿ ರಸ್ತೆ ಗುಂಡಿಗಳ ಬಗ್ಗೆ ಸುದ್ದಿ ಬರುತ್ತಿದೆ. ಆ ವಿಚಾರವನ್ನು ಬೇರೆ ಕಡೆ ತಿರುಗಿಸಲು ಸಚಿವ ಪ್ರಿಯಾಂಕ್‌ ಖರ್ಗೆ ಆರ್‌ಎಸ್‌ಎಸ್‌ ಬಗ್ಗೆ ಮಾತಾಡುತ್ತಿದ್ದಾರೆ. ಆರ್‌ಎಸ್‌ಎಸ್‌ ನೋಂದಣಿ ಮಾಡಬೇಕೆಂದು ಎಲ್ಲೂ ನಿಯಮವಿಲ್ಲ. ಸಂವಿಧಾನದಲ್ಲಿ ಆ ರೀತಿಯ ನಿಯಮವಿಲ್ಲ. ಸಾಧನೆಗಳು ಇಲ್ಲದೆ ಅಭಿವೃದ್ಧಿ ಮೂಲೆಗುಂಪಾಗಿದೆ. ಆರ್‌ಎಸ್‌ಎಸ್‌ ವಿರುದ್ಧ ಇವರ ತಾತ ಮುತ್ತಾತನ ಕಾಲದಿಂದಲೂ ಏನೂ ಮಾಡಿಲ್ಲ. ನೌಕರರಿಗೆ, ಅಂಗನವಾಡಿ ಕಾರ್ಯಕರ್ತರಿಗೆ ಸಂಬಳ ನೀಡಿಲ್ಲ. ಹಣದ ಬದಲು ಹೆಣಗಳು ಬೀಳುತ್ತಿದೆ, ಆತ್ಮಹತ್ಯೆಗಳು ನಡೆಯುತ್ತಿದೆ. ಈ ಸರ್ಕಾರ ಯಾವಾಗ ತೊಲಗುತ್ತದೆ ಎಂದು ಜನರು ಕೂಡ ಕಾಯುತ್ತಿದ್ದಾರೆ ಎಂದರು.

ನಾನು ನವೆಂಬರ್‌ ಕ್ರಾಂತಿ ಎಂದಾಗ ಬಿಜೆಪಿಯವರು ಬುರುಡೆ ಬಿಡುತ್ತಿದ್ದಾರೆ ಎಂದರು. ಈಗ ಯತೀಂದ್ರ ಸಿದ್ದರಾಮಯ್ಯ ಅದನ್ನೇ ಹೇಳುತ್ತಿದ್ದಾರೆ. ಕೆ.ಎನ್‌.ರಾಜಣ್ಣ ಹೇಳಿದಾಗ ಅವರನ್ನು ಸಚಿವ ಸ್ಥಾನದಿಂದ ಕಿತ್ತುಹಾಕಿದರು. ಡಿ.ಕೆ.ಶಿವಕುಮಾರ್‌ ನಾಮ ಹಾಕಿಕೊಂಡು ಟೆಂಪಲ್‌ ರನ್‌ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ನಾಮ ಹಾಕಲು ಎಲ್ಲರೂ ಸಿದ್ಧತೆ ಮಾಡುತ್ತಿದ್ದಾರೆ. ಯತೀಂದ್ರ ಅವರ ಹೇಳಿಕೆ ಬಂದಿರುವುದು ಸಿದ್ದರಾಮಯ್ಯನವರ ಕಡೆಯಿಂದಲೇ ಎಂದರು.

ಗುತ್ತಿಗೆದಾರರಿಗೆ ಸುಮಾರು 30 ಸಾವಿರ ಕೋಟಿ ರೂ. ಬಿಲ್‌ ನೀಡಿಲ್ಲ. ಗುತ್ತಿಗೆದಾರರ ಸಂಘ ಬಿಜೆಪಿ ಕಮಿಶನ್‌ ಬಗ್ಗೆ ಹೇಳಿದ್ದರು. ಈಗ ಕಾಂಗ್ರೆಸ್‌ ಅವಧಿಯಲ್ಲೇ 60 ಪರ್ಸೆಂಟ್‌ ಕಮಿಶನ್‌ ಇದೆ ಎಂದು ಹೇಳುತ್ತಿದ್ದಾರೆ. ಉದ್ಯಮಿ ಮೋಹನ್‌ದಾಸ್‌ ಪೈ ಕೂಡ ಇದನ್ನೇ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಕಲೆಕ್ಷನ್‌ ಸಭೆ ಮಾಡಿ, ಬಿಹಾರ ಚುನಾವಣೆಗಾಗಿ 300-400 ಕೋಟಿ ರೂ. ಸಂಗ್ರಹ ಮಾಡಬೇಕೆಂದು ಸೂಚನೆ ನೀಡಿದ್ದಾರೆ. ಸಚಿವ ಸ್ಥಾನ ಉಳಿಯಲು ಕಪ್ಪ ಕಾಣಿಕೆ ಕೊಡಿ ಎಂದು ಹೇಳಿ ಇಲಾಖಾವಾರು ಫಿಕ್ಸ್‌ ಮಾಡಿದ್ದಾರೆ. ಹಣ ನೀಡದಿದ್ದರೆ ಎಲ್ಲರನ್ನೂ ಕಳಿಸುತ್ತಾರೆ ಎಂದರು.

ಡಿ.ಕೆ.ಶಿವಕುಮಾರ್‌ ದಾರಿ ತಪ್ಪಿದ ಮಗ ಆಗಿದ್ದಾರೆ. ದೆಹಲಿಯಲ್ಲಿರುವ ಇಟಲಿ ದೇವಸ್ಥಾನವನ್ನು ಅವರು ಸುತ್ತಬೇಕಿದೆ. ಹಿಂದೂ ದೇವಸ್ಥಾನಗಳಿಗೆ ಹೋಗಿ ಪ್ರಯೋಜನವಿಲ್ಲ ಎಂದರು.

ವಿಧಾನಪರಿಷತ್‌ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಚರ್ಚೆ ನಡೆದಿದೆ. ಜೊತೆಗೆ ಸಂಘಟನೆ ಹೆಚ್ಚಿಸಲು ಹುಬ್ಬಳ್ಳಿಗೆ ಭೇಟಿ ನೀಡಿದ್ದೇನೆ. ಕಾರ್ಯಕರ್ತರ ಅಭಿಪ್ರಾಯ ಪಡೆದು, ವರಿಷ್ಠರ ಅಭಿಪ್ರಾಯ ಪಡೆದು ಅಭ್ಯರ್ಥಿಗಳನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು.

ನ.18ರಿಂದ 3 ದಿನ `ಬೆಂಗಳೂರು ಟೆಕ್ ಸಮ್ಮಿಟ್-2025’ ಆಯೋಜನೆ : CM ಸಿದ್ದರಾಮಯ್ಯ ಮಾಹಿತಿ

ಈ ರಾಜ್ಯಕ್ಕೆ ಕಾಂಗ್ರೆಸ್ ಸರ್ಕಾರ ಮಾರಕ: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ

Share. Facebook Twitter LinkedIn WhatsApp Email

Related Posts

GOOD NEWS: ರಾಜ್ಯದ ವಿದ್ಯಾರ್ಥಿಗಳಿಗೆ ಬಂಪರ್ ಗಿಫ್ಟ್: ಇನ್ನೆರಡು ದಿನದಲ್ಲಿ ‘ಉಚಿತ ಬಸ್ ಪಾಸ್’ ವಿತರಣೆ ಪ್ರಕ್ರಿಯೆ ಆರಂಭ

1 Min Read

ಪ್ರಧಾನಿ ಮೋದಿ ಭೇಟಿಯಾದ ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್: ಕರ್ನಾಟಕದ ಅಭಿವೃದ್ಧಿ ಕುರಿತು ಮಹತ್ವದ ಚರ್ಚೆ

1 Min Read

ದೆಹಲಿಯಲ್ಲಿ ತಿಪಟೂರು ಶಾಸಕ ಕೆ. ಷಡಕ್ಷರಿ ದಿಢೀರ್ ಅಸ್ವಸ್ಥ: ಆಸ್ಪತ್ರೆಗೆ ದಾಖಲಿಸಿ ಆರೋಗ್ಯ ವಿಚಾರಿಸಿದ ಡಿಸಿಎಂ ಜಿ. ಪರಮೇಶ್ವರ್

1 Min Read
Recent News

‘ಈ ದಾಳಿಗಳು ತಕ್ಷಣ ನಿಲ್ಲಬೇಕು!’: ಅಮೆರಿಕ ರಾಯಭಾರಿಗೆ ಭಾರತದ ‘ಸಮನ್ಸ್ : ಪಶ್ಚಿಮ ಏಷ್ಯಾ ಹಡಗು ದಾಳಿ ವಿರುದ್ಧ ತೀವ್ರ ಆಕ್ರೋಶ!

‘ವಾಣಿಜ್ಯ ಹಡಗುಗಳ ಮೇಲಿನ ನಿರಂತರ ದಾಳಿಗಳು ತೀವ್ರ ಕಳವಳಕಾರಿ’: ಒಮಾನ್ ಕರಾವಳಿ ಬಿಕ್ಕಟ್ಟಿನ ಬಗ್ಗೆ ಭಾರತ ಖಡಕ್ ಎಚ್ಚರಿಕೆ!

GOOD NEWS: ರಾಜ್ಯದ ವಿದ್ಯಾರ್ಥಿಗಳಿಗೆ ಬಂಪರ್ ಗಿಫ್ಟ್: ಇನ್ನೆರಡು ದಿನದಲ್ಲಿ ‘ಉಚಿತ ಬಸ್ ಪಾಸ್’ ವಿತರಣೆ ಪ್ರಕ್ರಿಯೆ ಆರಂಭ

BREAKING: : 2027ರ ಐಸಿಸಿ ಏಕದಿನ ವಿಶ್ವಕಪ್‌ ನ ತಾತ್ಕಾಲಿಕ ವೇಳಾಪಟ್ಟಿ ಮತ್ತು ಕ್ರೀಡಾಂಗಣಗಳು ಪ್ರಕಟ! ಇಲ್ಲಿದೆ ಸಂಪೂರ್ಣ ವಿವರ

State News
KARNATAKA

GOOD NEWS: ರಾಜ್ಯದ ವಿದ್ಯಾರ್ಥಿಗಳಿಗೆ ಬಂಪರ್ ಗಿಫ್ಟ್: ಇನ್ನೆರಡು ದಿನದಲ್ಲಿ ‘ಉಚಿತ ಬಸ್ ಪಾಸ್’ ವಿತರಣೆ ಪ್ರಕ್ರಿಯೆ ಆರಂಭ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡುವ ಐತಿಹಾಸಿಕ ಗ್ಯಾರಂಟಿ ಯೋಜನೆಗೆ ರಾಜ್ಯ…

ಪ್ರಧಾನಿ ಮೋದಿ ಭೇಟಿಯಾದ ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್: ಕರ್ನಾಟಕದ ಅಭಿವೃದ್ಧಿ ಕುರಿತು ಮಹತ್ವದ ಚರ್ಚೆ

ದೆಹಲಿಯಲ್ಲಿ ತಿಪಟೂರು ಶಾಸಕ ಕೆ. ಷಡಕ್ಷರಿ ದಿಢೀರ್ ಅಸ್ವಸ್ಥ: ಆಸ್ಪತ್ರೆಗೆ ದಾಖಲಿಸಿ ಆರೋಗ್ಯ ವಿಚಾರಿಸಿದ ಡಿಸಿಎಂ ಜಿ. ಪರಮೇಶ್ವರ್

ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆಯೇ ಹೊರತು ಸ್ಥಗಿತ ಇಲ್ಲ; ಮೃತ, ಅನರ್ಹರ ಪತ್ತೆಗಷ್ಟೇ ಕ್ರಮ: ದಿನೇಶ್ ಗೂಳಿಗೌಡ ಸ್ಪಷ್ಟನೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.