ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಲಾಗಿರುವ ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ (ನಗರ ಸಭೆ / ಪುರಸಭೆ ಮತ್ತು ಪಟ್ಟಣ ಪಂಚಾಯಿತಿ) ಕಿರಿಯ ಅಭಿಯಂತರರು (ಸಿವಿಲ್)-74+15(ಹೈ.ಕ) ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿನ ಸಹಾಯಕ ನಗರ ಯೋಜಕರು 50+10(ಹೈ.ಕ) ಹುದ್ದೆಗಳ ನೇಮಕಾತಿ ಸಂಬಂಧ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯಲ್ಲಿ ದಾಖಲಾಗಿರುವ ಅರ್ಜಿ ಸಂಖ್ಯೆ:2866-2870/2024ಕ್ಕೆ ಸಂಬಂಧಿಸಿದಂತೆ ದಿನಾಂಕ: 09-04-2025ರಂದು ಆದೇಶ ನೀಡಿದೆ.
“In view of above discussion, the applications are disposed of with a direction to the Respondent No.4 KPSC for preparing additional select / list of successful candidates based on merit after taking their willingness separately for Junior Engineer and Assistant Town Planner within period of one month from the date of issue of this order, provided such process is not barred by pending WP before Hon’ble High Court. (Correction carried out as per court order dated 23-04-2025).
ಈ ಆದೇಶದನ್ವಯ ಎರಡೂ ಹುದ್ದೆಗಳ ಹೆಚ್ಚುವರಿ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಒಂದನ್ನು ಆಯ್ಕೆ ಮಾಡಿಕೊಂಡು ಮತ್ತೊಂದು ಹುದ್ದೆಯ ಆಯ್ಕೆ ಪ್ರಕ್ರಿಯೆಯಿಂದ ಹೊರಗುಳಿಯಲು (ಅಥವಾ ಬೇರೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಸಹ) ಸ್ವ-ಇಚ್ಚಾ ಹೇಳಿಕೆಯನ್ನು ಸಲ್ಲಿಸಲು ಇಚ್ಚಿಸಿದ್ದಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದ ಅಂತರ್ಜಾಲದಲ್ಲಿ ಲಭ್ಯವಿರುವ ಸ್ವ-ಇಚ್ಛಾ ಹೇಳಿಕೆ ನಮೂನೆಯಲ್ಲಿ ಪ್ರಮಾಣ ಪತ್ರಗಳ (ಆಧಾರ ಕಾರ್ಡ್ / ಇಲಾಖೆಯ ಮೂಲ ಸೇವಾ ಗುರುತಿನ ಚೀಟಿ) ಸ್ವಯಂ ದೃಢೀಕೃತ ದಾಖಲೆಗಳೊಂದಿಗೆ ಖುದ್ದಾಗಿ ಆಯೋಗಕ್ಕೆ 2025 ರ ಜುಲೈ 30 ರೊಳಗಾಗಿ ಲಿಖಿತವಾಗಿ ಸ್ವ-ಇಚ್ಛಾ ಹೇಳಿಕೆಯನ್ನು ಸಲ್ಲಿಸುವುದು. ಈ ಸಂಬಂಧ ಮನವಿ / ಇ-ಮೇಲ್ ಮೂಲಕ ಸ್ವ-ಇಚ್ಛಾ ಹೇಳಿಕೆ ಸಲ್ಲಿಸಿದರೆ ಪರಿಗಣಿಸಲಾಗುವುದಿಲ್ಲವೆಂದು ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.