ನವದೆಹಲಿ: ಆಪರೇಷನ್ ಸಿಂಧೂರ ವೇಳೆಯಲ್ಲಿ ಹನುಮಾನ್ ಜೀ ಸಂದೇಶವನ್ನು ಪಾಲಿಸಲಾಗಿದೆ. ಹನುಮಂತ ಅಶೋಕವನ ಧ್ವಂಸ ಮಾಡಿರೋ ರೀತಿಯಲ್ಲೇ ದಾಳಿಯನ್ನು ನಡೆಸಲಾಗಿದೆ ಎಂಬುದಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಇಂದು ಆಪರೇಷನ್ ಸಿಂಧೂರ ಬಗ್ಗೆ ಸುದ್ದಿಗೋಷ್ಠಿ ನಡೆಸಿ ದೆಹಲಿಯಲ್ಲಿ ಮಾತನಾಡಿದಂತ ಅವರು, ಸೇನೆಗೆ ಪರಮಾಧಿಕಾರ ಕೊಟ್ಟಿದ್ದಕ್ಕೆ ಪ್ರಧಾನಿ ಮೋದಿಗೆ ಧನ್ಯವಾದಗಳು. ಆಪರೇಷನ್ ಸಿಂಧೂರ ಯಶಸ್ವಿಯಾಗಿ ನಡೆಸಿದ್ದಕ್ಕೆ ಸೇನೆಗೆ ಧನ್ಯವಾದಗಳು. ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಓರ್ವ ನಾಗರೀಕ ಸಹ ಮೃತಪಟ್ಟಿಲ್ಲ ಎಂದರು.
ಅಶೋಕ್ ವಾಟಿಕಾಗೆ ಹೋಗುವಾಗ ಅವರು ಅನುಸರಿಸಿದ ಹನುಮಾನ್ ತತ್ವವನ್ನು ನಾವು ಅನುಸರಿಸಿದ್ದೇವೆ. ಜಿನ್ಹ್ ಮೋಹಿ ಮಾರಾ, ಟಿನ್ಹ್ ಮೋಹಿ ಮಾರೆ. ನಮ್ಮ ಮುಗ್ಧರನ್ನು ಕೊಂದವರನ್ನು ಮಾತ್ರ ನಾವು ಗುರಿಯಾಗಿಸಿಕೊಂಡಿದ್ದೇವೆ ಎಂದರು.
#WATCH | #OperationSindoor | Delhi: Defence Minister Rajnath Singh says, "We followed the principle of Lord Hanuman that he followed while going into Ashok Vatika. Jinh mohi maara, tinh mohi maare. We targetted only those who killed our innocent." pic.twitter.com/jeDnlsi9aj
— ANI (@ANI) May 7, 2025
ಕಳೆದ ರಾತ್ರಿ ಭಾರತ ಇತಿಹಾಸ ಸೃಷ್ಠಿಸಿದೆ. ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರವಾಗಿ ದಾಳಿ ಮಾಡಿ, ಸೇಡು ತೀರಿಸಿಕೊಳ್ಳಲಾಗಿದೆ. ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರಿಗೆ ನ್ಯಾಯಕೊಡಿಸಲಾಗಿದೆ. ಪಹಲ್ಗಾಮ್ ದಾಳಿಕೋರರಿಗೆ ತಕ್ಕ ಉತ್ತರ ನೀಡಲಾಗಿದೆ ಎಂಬುದಾಗಿ ಹೇಳಿದರು.
BREAKING: ತೆಲಂಗಾಣದಲ್ಲಿ ಭದ್ರತಾ ಪಡೆಗಳ ಬೃಹತ್ ಕಾರ್ಯಾಚರಣೆ: 26 ಮಾವೋವಾದಿಗಳ ಹತ್ಯೆ