ಹಾಸನ: ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಹಲವರು ಅವರ ಆಯ್ಕೆಯನ್ನು ವಿರೋಧಿಸಿದ್ದರು. ಇಂತಹವರಿಗೆ ನನ್ನಷ್ಟು ಕನ್ನಡ ಬಳಸಿ ಸಾಧನೆ ಮಾಡಿದವರು ಮಾತ್ರ ನನ್ನ ಟೀಕಿಸಬಹುದು ಎಂಬುದಾಗಿ ಹೇಳುವ ಮೂಲಕ ತಿರುಗೇಟನ್ನು ಬಾನು ಮುಷ್ತಾಕ್ ನೀಡಿದ್ದಾರೆ.
ಇಂದು ಹಾಸನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದಂತ ಅವರು, ಕನ್ನಡವನ್ನು ಕೇವಲ ಭಾಷೆಯನ್ನಾಗಿ ಪರಿಗಣಿಸಿದಾಗ ಮಾತ್ರವೇ ಅದನ್ನು ಎಲ್ಲರೂ ಓದಲು ಸಾಧ್ಯವಾಗುತ್ತದೆ ಎಂಬುದಾಗಿ ತಿಳಿಸಿದರು.
ಗೋಕಾಕ್ ಸಮಿತಿ ವರದಿ ಜಾರಿಗೆ ಬಂದಾಗ ಹಾಸನದಲ್ಲಿ ಒಂದು ದೊಡ್ಡ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಆಹ್ವಾನ ಪಡೆಯುವ ಅರ್ಹತೆ ನನಗೆ ಇರಲಿಲ್ಲ. ಅನೇಕ ಗಣ್ಯರು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದರು.
ಅಂದು ವೇದಿಕೆಯಲ್ಲಿ ಮಾತನಾಡುವವರಿಗೆ ಒಂದು ನಿಬಂಧನೆ ವಿಧಿಸಲಾಗಿತ್ತು. ಅದೇ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಿರುವವರು ಮಾತ್ರವೇ ಮಾತನಾಡಲು ಅರ್ಹರು ಎಂಬುದಾಗಿತ್ತು. ಆ ದಿನ ಅಲ್ಲಿ ಮಾತನಾಡಿದ್ದು ತಾನು ಮಾತ್ರ. ಯಾಕೆಂದರೇ ತನ್ನ ಮೂವರು ಹೆಣ್ಣು ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಲ್ಲಿಯೇ ಓದುತ್ತಿದ್ದರು ಎಂಬುದಾಗಿ ತಿಳಿಸಿದರು.
ಕನ್ನಡವನ್ನು ನಂಬಿದವರಿಗೆ ಯಾವತ್ತೂ ಕೈಬಿಡುವುದಲ್ಲ ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಮೈಸೂರು ದಸರಾ ಮಹೋತ್ಸವ ಉದ್ಘಾಟಿಸಲು ಆಯ್ಕೆ ಮಾಡಿದ್ದು ಹರ್ಷ ತಂದಿದೆ ಎಂಬುದಾಗಿ ಹೇಳಿದರು.
ಚಾಮುಂಡೇಶ್ವರಿ ಕೇವಲ ಹಿಂದೂಗಳ ಆಸ್ತಿ ಅಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
‘QR ಕೋಡ್’ ಸ್ಕ್ಯಾನ್ ಮಾಡಿ, ‘ಆಸ್ತಿ ಮಾಹಿತಿ, ನೋಂದಣಿ ಮತ್ತು ಬಾಡಿಗೆ ಒಪ್ಪಂದ’ ಪಡೆಯಿರಿ, ಸರ್ಕಾರದ ಹೊಸ ಯೋಜನೆ