ಬೆಂಗಳೂರು: ಕರ್ನಾಟಕದಲ್ಲಿರುವಂತ ಸಾವಿರಾರು ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಕೆಲವೇ ಕೆಲವು ಮಾತ್ರವೇ ಫೈರ್ ಸೇಫ್ಟಿ ಪರ್ಮಿಷನ್ ಗೆ ಇರುವಂತ ಮಾನದಂಡವನ್ನು ಪೂರ್ಣಗೊಳಿಸಿದ್ದಾವೆ ಎಂಬುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ ಅವರು ಕೇಳಿದಂತ ಪ್ರಶ್ನೆಗೆ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಉತ್ತಿರಿಸಿದ್ದಾರೆ.
ರಾಜ್ಯದಲ್ಲಿ 2161 ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 356 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು 205 ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ 147 ತಾಲ್ಲೂಕು ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 12 ಜಿಲ್ಲಾಸ್ಪತ್ರೆಗಳು ಹಾಗೂ ಬೆಂಗಳೂರು ನಗರದಲ್ಲಿ ಮೂರು ಪ್ರಮುಖ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ.
ರಾಜ್ಯದಲ್ಲಿ ಈವರೆಗೆ ಕೆಪಿಎಂಇ ಕಾಯ್ದೆಯಡಿ ಆನ್ ಲೈನ್ ಮುಖಾಂತರ ನೋಂದಣಿಗೊಂಡಿರುವ ಖಾಸಗಿ ಆಸ್ಪತ್ರೆಗಳ ಸಂಖ್ಯ 5,850 ಆಗಿವೆ. ನ್ಯಾಷನಲ್ ಬಿಲ್ಡಿಂಗ್ ಕೋಡ್ ಪ್ರಕಾರ ಸರ್ಕಾರಿ ಆಸ್ಪತ್ರೆಗಳಿಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಒಂದೇ ಫೈರ್ ಸೇಫ್ಟಿ ನಿಯಮವಿರುತ್ತದೆ. ಯಾವುದೇ ಬೇರೆ ಬೇರೆ ಮಾನದಂಡ ಇರುವುದಿಲ್ಲ ಅಂತ ಹೇಳಿದ್ದಾರೆ.
ರಾಜ್ಯದಲ್ಲಿನ ಒಟ್ಟು 2,878 ಸರ್ಕಾರಿ ಆಸ್ಪತ್ರೆಗಳಲ್ಲಿ 14 ಸರ್ಕಾರಿ ಆಸ್ಪತ್ರೆಗಳು ಹಾಗೂ 5,850 ಖಾಸಗಿ ಆಸ್ಪತ್ರೆಗಳಲ್ಲಿ 315 ಖಾಸಗಿ ಆಸ್ಪತ್ರೆಗಳು ಫೈರ್ ಸೇಫ್ಟಿ ಪರ್ಮಿಷನ್ ಗೆ ಇರುವ ಮಾನದಂಡಗಳನ್ನು ಪೂರ್ಣಗೊಳಿಸಿವೆ ಎಂಬ ಶಾಕಿಂಗ್ ಮಾಹಿತಿ ಬಿಚ್ಚಿಟ್ಟಿದ್ದಾರೆ.
ನಿಮ್ಮ ಹೆಸರಿನಲ್ಲಿ ಎಷ್ಟು ‘ಸಿಮ್ ಕಾರ್ಡ್’ ಬಳಕೆಯಲ್ಲಿವೆ ಅಂತ ತಿಳಿಯಲು ಜಸ್ಟ್ ಹೀಗೆ ಮಾಡಿ | Mobile Connections