ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ನಿರಂತರವಾಗಿ ಸರಣಿ ಹೃದಯಾಘಾತ ಪ್ರಕರಣಗಳು ಸಂಭವಿಸಿದ್ದವು. ಈ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ತಜ್ಞರ ಸಮಿತಿ ರಚಿಸಲಾಗಿತ್ತು. ಆ ಸಮಿತಿಯು ಇಂದು ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ಸರ್ಕಾರಕ್ಕೆ ಸಲ್ಲಿಸಿದಂತ ವರದಿಯಲ್ಲಿ ಒಟ್ಟು 24 ಸಾವುಗಳಲ್ಲಿ 20 ಜನರು ಮಾತ್ರವೇ ಹೃದಯಾಘಾತದಿಂದ ಸಾವನ್ನಪ್ಪಿರುವುದನ್ನು ತಜ್ಞರ ವರದಿಯು ಖಚಿತ ಪಡಿಸಿದೆ.
ಹಾಸನ ಹೃದಯಾಘಾತದ ಸರಣಿ ಸಾವಿನ ಸಂಬಂಧ ಸರ್ಕಾರ ರಚಿಸಿದ್ದಂತ ತಜ್ಞರ ಸಮಿತಿಯು, ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ತಮ್ಮ ವರದಿಯನ್ನು ಸಲ್ಲಿಸಿದೆ. ತಜ್ಞರು ಸಲ್ಲಿಸಿದಂತ ವರದಿಯನ್ನು ಅವರು ಸ್ವೀಕರಿಸಿದರು.
ಹಾಸನ ಜಿಲ್ಲೆಯಲ್ಲಿ ಮೇ-ಜೂನ್ ನಲ್ಲಿ ಒಟ್ಟು 24 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಹೀಗೆ ಸಾವನ್ನಪ್ಪಿದ 24 ಮಂದಿಯ ಪೈಕಿ 20 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಾಲ್ವರಿಗೆ ಹೃದಯಾಘಾತವೇ ಆಗಿಲ್ಲ. ನಾಲ್ವರಲ್ಲಿ ಒಬ್ಬನಿಗೆ ಕಿಡ್ನಿ ಸಮಸ್ಯೆ, ಮತ್ತೊಬ್ಬನಿಗೆ ಆಕ್ಸಿಡೆಂಟ್ ಆಗಿ ಸಾವನ್ನಪ್ಪಿದ್ದರೇ, ಇನ್ನೊಬ್ಬ ಸೀವಿಯರ್ ಗ್ಯಾಸ್ಟ್ರೋ ಸಮಸ್ಯೆಯ ಕಾರಣ ಬಿಪಿ ಹೆಚ್ಚಾಗಿ ಸಾವನ್ನಪ್ಪಿದ್ದಾರೆ. 20 ಹೃದಯಾಘಾತ ಪ್ರಕರಣಗಳಲ್ಲಿ ಮೂರು ನಾನ್ ಹಾರ್ಟ್ ಅಟ್ಯಾಕ್ ಡೆತ್ ಆಗಿದ್ದಾರೆ ಎಂದಿದೆ.
ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ತಜ್ಞರ ವರದಿಯನ್ನು ಸ್ವೀಕರಿಸಿದಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಹಾಸನದ ಹೃದಯಾಘಾತ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದರು.
ನಾಡಿನ ಮಹಿಳೆಯರ ಜೊತೆ ನಮ್ಮ ಸರ್ಕಾರ ದೃಢವಾಗಿ ನಿಂತಿದೆ, ನಿಮ್ಮ ಸುರಕ್ಷೆ, ಘನತೆ ನಮ್ಮ ಆಧ್ಯತೆ: ಸಿಎಂ ಸಿದ್ಧರಾಮಯ್ಯ