ಬೆಂಗಳೂರು: ನಗರದಲ್ಲಿ ಕನ್ನಡಪರ ಸಂಘಟನೆಯಿಂದ ಆನ್ ಲೈನ್ ಗೇಮಿಂಗ್ ಕಂಪನಿ ಮೇಲೆ ದಾಳಿ ನಡೆಸಲಾಗಿದೆ. ಕನ್ನಡ ಪರ ಸಂಘಟನೆಯ ಕಾರ್ಯಕರ್ತರಿಂದ ನಡೆಸಿದಂತ ದಾಳಿಯಲ್ಲಿ ಆನ್ ಲೈನ್ ಗೇಮಿಂಗ್ ಕಂಪನಿಯನ್ನು ಧ್ವಂಸಗೊಳಿಸಲಾಗಿದೆ.
ಬೆಂಗಳೂರಿನ ಕೋರಮಂಗಲದಲ್ಲಿ ಇರುವಂತ ಗೋಲ್ಡನ್ ಏಸಸ್ ಪೋಕರ್ ಆನ್ ಲೈನ್ ಗೇಮಿಂಗ್ ಕಂಪನಿಯ ಮೇಲೆ ನಮ್ಮ ಕರ್ನಾಟಕ ಸೇನೆಯಿಂದ ದಾಳಿಯನ್ನು ನಡೆಸಲಾಗಿದೆ. ಗ್ರಾಹಕರು ಆನ್ ಲೈನ್ ಬೆಟ್ಟಿಂಗ್ ಆಡುತ್ತಿದ್ದಾಗಲೇ ದಾಳಿ ನಡೆಸಿ ಕಂಪನಿಯನ್ನು ಧ್ವಂಸ ಮಾಡಲಾಗಿದೆ.
ಗೋಲ್ಡನ್ ಏಸಸ್ ಪೋಕರ್ ಕಂಪನಿಯಲ್ಲಿದ್ದಂತ ಪೀಠೋಪಕರಣಗಳನ್ನು ಧ್ವಂಸಗೊಳಿಸಲಾಗಿದೆ. ಪ್ರತಿ ಭಾನುವಾರ ಅಕ್ರಮವಾಗಿ ಆನ್ ಲೈನ್ ಗೇಮ್ ನಡೆಸುತ್ತಿದ್ದಂತ ಆರೋಪ ಕೇಳಿ ಬಂದಿದೆ. ಕನ್ನಡಪರ ಸಂಘಟನೆಗಳಿಂದ ದಾಳಿ ನಡೆಸುತ್ತಿದ್ದಂತೆ ಗ್ರಾಹಕರು ಓಡಿ ಹೋಗಿದ್ದಾರೆ.