ಮಂಡ್ಯ: ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಿರುನಾಲೆಗೆ ಕಾರೊಂದು ಉರುಳಿ ಬಿದ್ದಿದೆ. ಈ ಪರಿಣಾಮ ಓರ್ವ ನೀರಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದರೇ, ಮೂವರು ಗಾಯಗೊಂಡಿದ್ದಾರೆ.
ಮಂಡ್ಯ-ಮೇಲುಕೋಟೆ ಮುಖ್ಯರಸ್ತೆಯ ಮಾಡಲ ಗೇಟ್ ಬಳಿಯಲ್ಲಿ ಈ ಘಟನೆ ನಡೆದಿದೆ. ಮೇಲುಕೋಟೆಯಿಂದ ಮಂಡ್ಯ ಕಡೆಗೆ ಸ್ವಿಫ್ಟ್ ಕಾರು ಹೊರಟಿತ್ತು. ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಉರುಳಿಬಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ಶಿವಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಪತ್ತೆಯಾಗಿರುವಂತ ವ್ಯಕ್ತಿಯ ಪತ್ತೆಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SHOCKING: ವಿಶ್ವದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ 9 ವಿದ್ಯಾರ್ಥಿಗಳಲ್ಲಿ ಭಾರತದಲ್ಲಿ ಒಬ್ಬರು ಸೇರಿದ್ದಾರೆ: ಅಧ್ಯಯನ
BREAKING: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರದ ತಡೆ: ಪರಿಸರವಾದಿಗಳ ಹೋರಾಟಕ್ಕೆ ಗೆಲುವು








