ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಭೂಮಿಯನ್ನು ಕಬಳಿಸಿದಂತ ಕೇಸ್ ಕೇಳಿದ್ದೀರಿ. ಆದರೇ ಇದಕ್ಕಿಂತ ಬೇರೆಯದ್ದೇ ಎನ್ನುವಂತೆ ರಾಜ್ಯಪಾಲರ ಹೆಸರಿನಲ್ಲಿದ್ದಂತ ಐದೂವರೆ ಎಕರೆಯನ್ನೇ ಭೂಗಳ್ಳರು ತಮ್ಮ ಪಾಲು ಮಾಡಿಕೊಂಡಿರುವಂತ ಬಹುದೊಡ್ಡ ಹಗರಣ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಮಲ್ಲಮ್ಮನ ಬೆಳವಡಿಯ ಸರ್ವೆ ನಂಬರ್ 221/1 ನಲ್ಲಿ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನಲ್ಲಿ 6 ಎಕರೆಯನ್ನು 2002ರಲ್ಲಿ ಖರೀದಿಸಿ, ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡಲಾಗಿತ್ತು. ಈ ಜಮೀನನ್ನು ಬಡವರಿಗೆ ಹಂಚುವ ಉದ್ದೇಶವನ್ನು ಹೊಂದಲಾಗಿತ್ತು.
ಆದರೇ ಈ ಜಮೀನನ್ನು ಕೆಲ ವರ್ಷಗಳ ಹಿಂದೆ ಪಹಣಿ ಪತ್ರ ಸರಿಪಡಿಯೋ ನೆಪದಲ್ಲಿ ಭೂಗಳ್ಳರು ಗೋಲ್ಮಾಲ್ ನಡೆಸಿದ್ದಾರೆ. ಯಾವುದೇ ಅನುಮತಿ ಇಲ್ಲದೇ ಖಾಸಗಿ ವ್ಯಕ್ತಿಗಳ ಹೆಸರನ್ನು ರಾಜ್ಯಪಾಲರ ಹೆಸರಿನಲ್ಲಿದ್ದಂತ ಜಮೀನಿಗೆ ಸೇರ್ಪಡೆ ಮಾಡಲಾಗಿದೆ ಅಂತ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಆರೋಪಿಸಿದ್ದಾರೆ.
ರಾಜ್ಯಪಾಲರ ಹೆಸರಿನಲ್ಲಿದ್ದಂತ ಐದೂವರೆ ಎಕರೆ ಜಮೀನು ಭೂಗಳ್ಳರ ಪಾಲಾಗಿದೆ. ಇದರಲ್ಲಿ ಈ ಹಿಂದಿನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಎಸ್ಪಿ ಪ್ರಭಾವತಿ ಶಾಮೀಲಾಗಿಯೇ ತಿದ್ದುಪಡಿಯಾಗಿದೆ. ಈ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಶಾಸಕ ಶಿವರಾಜ ಪಾಟೀಲ್ ಲೊಕೇಶನ್ ಟ್ರ್ಯಾಕ್ ಆರೋಪ: ಮಾಹಿತಿ ಪಡೆದು ಕ್ರಮ- ಗೃಹ ಸಚಿವ ಡಾ.ಜಿ ಪರಮೇಶ್ವರ್
BIG NEWS : ಡೀಸೆಲ್ ಏರಿಕೆಗೆ ಲಾರಿ ಮಾಲೀಕರು ಆಕ್ರೋಶ : ನಾಳೆ ಮುಷ್ಕರ ದಿನಾಂಕ ಘೋಷಣೆ ಸಾಧ್ಯತೆ