ಬೆಂಗಳೂರು: ಸೆಪ್ಟೆಂಬರ್ ಮಾಸಾಂತ್ಯದಿಂದ ಕರ್ನಾಟಕದಲ್ಲಿ ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿಗೆ ಹೊಸ ಹೈಟೆಕ್ ಸ್ಮಾರ್ಟ್ ಕಾರ್ಡ್ ಗಳ ವಿತರಣೆ ವ್ಯವಸ್ಥೆ ಜಾರಿಗೆ ಬರಲಿದೆ. ರಾಜ್ಯದಲ್ಲೂ ಒನ್ ನೇಷನ್ ಒನ್ ಕಾರ್ಡ್ ಜಾರಿಗೆ ಬರಲಿದ್ದು ಡಿಎಲ್, ಆರ್ ಸಿ ಕಾರ್ಡ್ ನಲ್ಲಿ ವಿಧಾನಸೌಧ ಮರೆಯಾಗಲಿದೆ. ಅಂದರೆ ಈಗ ವಿತರಿಸುವ ಸ್ಮಾರ್ಟ್ ಕಾರ್ಡ್ ಗಳಲ್ಲಿ ಇರುವಂತೆ ವಿಧಾನಸೌಧ, ಕರ್ನಾಟಕದ ಚಿಹ್ನೆ, ತ್ರಿವರ್ಣ ಧ್ವಜ ಇದ್ಯಾವುದು ಹೊಸದಾಗಿ ವಿತರಿಸುವ ಕಾರ್ಡ್ ನಲ್ಲಿ ಇರುವುದಿಲ್ಲ.
ಹೌದು. ಕರ್ನಾಟಕದಲ್ಲಿ ಒನ್ ನೇಷನ್ ಒನ್ ಕಾರ್ಡ್ ಜಾರಿಯಾದ ನಂತ್ರ ಕಾರ್ಡ್ ಮೇಲ್ಭಾಗದಲ್ಲಿ ರಾಷ್ಟ್ರೀಯ ಚಿಹ್ನೆಯಾದ ಅಶೋಕ ಸ್ತಂಭ ಮಾತ್ರವೇ ಇರಲಿದೆ. ವಿಧಾನಸೌಧ ಇರೋದಿಲ್ಲ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒನ್ ನೇಷನ್ ಒನ್ ಕಾರ್ಡ್ ಯೋಜನೆಯಡಿ ಸ್ಮಾರ್ಟ್ ಕಾರ್ಡ್ ಪೂರೈಕೆಯಾಗಲಿದೆ. ಈವರೆಗೆ ವಿತರಿಸುವ ಕಾರ್ಡ್ ಗಳಲ್ಲಿ ಆಯಾ ರಾಜ್ಯಗಳ ಚಿಹ್ನೆಗಳು, ಆಡಳಿತ ಸೌಧದ ಪೋಟೋ ಮತ್ತಿತರ ವಿಶೇಷಗಳನ್ನು ಮುದ್ರಿಸಲು ಅವಕಾಶವಿತ್ತು. ಆದರೆ ಇದೀಗ ಒನ್ ನೇಷನ್ ಒನ್ ಕಾರ್ಡ್ ಯೋಜನೆಯಲ್ಲಿ ಅಂತಹ ವಿಶೇಷಗಳ ಮುದ್ರಣಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡುವುದಿಲ್ಲ. ರಾಷ್ಟ್ರೀಯ ಚಿಹ್ನೆಯ ಜೊತೆಗೆ ಇಂಡಿಯನ್ ಯೂನಿಯನ್ ಡ್ರೈವಿಂಗ್ ಲೈಸೆನ್ಸ್, ಇಂಡಿಯನ್ ಯೂನಿಯನ್ ವೆಹಿಕಲ್ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಎಂದಷ್ಟೇ ಇರಲಿದೆ.
ಪ್ರಸ್ತುತ ನೀಡುತ್ತಿರೋ ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಕಾರ್ಡ್ ಗಳು ಪಾಲಿ ವಿನೈಲ್ ಕ್ಲೊರೈಡ್ ಅಂದರೆ ಪಿವಿಸಿ ಕಾರ್ಡ್ ಆಗಿದ್ದವು. ಹೊಸ ಯೋಜನೆಯಲ್ಲಿ ಪಾಲಿ ಕಾರ್ಬನೇಟ್ ಕಾರ್ಡ್ ಅಂದರೆ ಪಿಸಿಸಿ ಕಾರ್ಡ್ ಗಳನ್ನು ವಿತರಣೆ ಮಾಡಲಾಗುತ್ತದೆ. ಈ ಕಾರ್ಡ್ ಗಳು ಸೆಪ್ಟೆಂಬರ್ ಅಂತ್ಯಕ್ಕೆ ಸಿದ್ಧವಾಗಲಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಆಯಾ ಕಚೇರಿಗಳಿಗೆ ತಲುಪೋ ಸಾಧ್ಯತೆ ಇದೆ.
ಹೊಸ ಆರ್ ಸಿ ಕಾರ್ಡ್ ನಲ್ಲಿ ಏನಿರಲಿದೆ.?
- ವಾಹನದ ನೋಂದಣಿ ಸಂಖ್ಯೆ, ದಿನಾಂಕ, ಮುಕ್ತಾಯದ ಅವಧಿ
- ಚಾಸ್ಸಿ ನಂಬರ್, ಇಂಜಿನ್ ನಂಬರ್ ಇರಲಿದೆ
- ಮಾಲೀಕರ ಹೆಸರು, ವಿಳಾಸ, ಎಮಿಷನ್ ವಿವರ ಇರಲಿದೆ
- ಯಾವ ವಾಹನ, ತಯಾರಿಕಾ ಸಂಸ್ಥೆಯ ಮಾಹಿತಿ ಒಳಗೊಂಡಿರಲಿದೆ.
- ಮಾಡೆಲ್ ಯಾವುದು, ಬಣ್ಣ, ವಾಹನದ ವಿನ್ಯಾಸ ಇರಲಿದೆ.
- ಸೀಟಿಂಗ್ ಸಾಮರ್ಥ್ಯ, ವಾಹನ ಸಾಮರ್ಥ್ಯ, ಸಾಲ ಕೊಟ್ಟಿರುವ ಸಂಸ್ಥೆಯ ಹೆಸರು ಇರಲಿದೆ.
ಹೊಸ ಕಾರ್ಡ್ ನ ವಿಶೇಷತೆ ಏನು?
- ಕಾರ್ಡ್ ಗಳಲ್ಲಿರುವ ಅಕ್ಷರ ಅಳಿಸಿ ಹೋಗುವುದಿಲ್ಲ. ಕಾರ್ಡ್ ಮುರಿದು ಹೋಗುವ ಸಾಧ್ಯತೆ ಇಲ್ಲ.
- ಕೇಂದ್ರೀಕೃತ ವ್ಯವಸ್ಥೆಯಾಗಿ ಇರುವುದರಿಂದ ನಕಲಿ ಕಾರ್ಡ್ ಗಳ ತಯಾರಿಕೆಗೆ ಬ್ರೇಕ್ ಬೀಳಲಿದೆ.
- ಆರ್ ಟಿ ಒ ಅಧಿಕಾರಿಗಳು ಕಾರ್ಡ್ ಗಳಿಗೆ ಕಾಯುವುದು ತಪ್ಪಲಿದೆ
- ಅಪಘಾತ, ಕಳ್ಳತನ, ಸಂಚಾರ ನಿಯಮ ಉಲ್ಲಂಘನೆ ವೇಳೆ ಪರಿಶೀಲನೆಗೆ ಉಪಯೋಗವಾಗಲಿದೆ.
- ವಾಹನ ಹಾಗೂ ವಾಹನ ಮಾಲೀಕರ ಮಾಹಿತಿ ದೃಢೀಕರಣ ಸುಲಭವಾಗಲಿದೆ.
ಹೋಟೆಲ್, ಪಿಜಿಗಳಲ್ಲಿ ಮೊಬೈಲ್, ಲ್ಯಾಪ್ ಟಾಪ್ ಕದಿಯುತ್ತಿದ್ದ ಕಳ್ಳ ಅರೆಸ್ಟ್, 14 ಮೊಬೈಲ್, 4 ಲ್ಯಾಪ್ ಟಾಪ್
ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಸುದ್ದಿ : ಬ್ಯಾಂಕಿಂಗ್, ಹಣಕಾಸು ಕ್ಷೇತ್ರದಲ್ಲಿ 2.5 ಲಕ್ಷ ಹೊಸ ಉದ್ಯೋಗಗಳು ಲಭ್ಯ