ಕೋಲಾರ: ಸ್ಮಶಾನದಲ್ಲಿ ಪಿತೃಪಕ್ಷದ ಪೂಜೆ ಮಾಡುತ್ತಿದ್ದಂತ ವೇಳೆಯಲ್ಲಿ ಸಮೀಪದಲ್ಲೇ ಇಟ್ಟಿದ್ದಂತ ಹೆಜ್ಜೇನುಗಳು ಪೂಜೆ ಮಾಡುವ ವೇಳೆಯಲ್ಲಿ ಸಾಂಬ್ರಾಣಿ ಹೊಗೆಯಿಂದ ಉಂಟಾಗಂತ ಹೊಗೆಯಿಂದಾಗಿ ಎದ್ದು ಜನರ ಮೇಲೆ ದಾಳಿ ನಡೆಸಿದ್ದಾವೆ. ಈ ದಾಳಿಯಲ್ಲಿ ಓರ್ವ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವಂತ ಘಟನೆ ನಡೆದಿದೆ.
ಕೋಲಾರ ತಾಲ್ಲೂಕಿನ ಜಂಗಾಲಹಳ್ಳಿಯಲ್ಲಿ ಇಂದು ಪಿತೃಪಕ್ಷದ ನಿಮಿತ್ತ ಸ್ಮಶಾನಕ್ಕೆ ಪೂಜೆ ಮಾಡೋದಕ್ಕೆ ಒಂದೇ ಕುಟುಂಬದ ಆರು ಮಂದಿ ತೆರಳಿದ್ದರು. ಈ ವೇಳೆಯಲ್ಲಿ ಪೂಜೆಗಾಗಿ ಸಾಂಬ್ರಾಣಿ ಹೊಗೆ ಹಾಕಲಾಗಿದೆ. ಈ ಹೊಗೆ ತಗುಲಿ ಪಕ್ಕದಲ್ಲೇ ಇದ್ದಂತ ಹೆಜ್ಜೇನುಗಳು ದಾಳಿ ನಡೆಸಿದ್ದಾವೆ.
ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಂತ ವೆಂಕಟಸ್ವಾಮಿ(60) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಂತ ವೇಳೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನೂ ಶಾಮಣ್ಣ, ಸುಂದರ್ ರಾಜ್, ಕಾರ್ತಿಕ್ ಹಾಗೂ ಶ್ರೀನಿವಾಸ್ ಎಂಬುವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
BREAKING : ಬೆಳಗಾವಿಯಲ್ಲಿ ಹೃದಯ ವಿದ್ರಾವಕ ಘಟನೆ : 17 ತಿಂಗಳ ಮಗುವಿನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ!