ಬೆಳಗಾವಿ: ಜಿಲ್ಲೆಯಲ್ಲಿ ಚಾಲುಕ್ಯ ಎಕ್ಸ್ ಪ್ರೆಸ್ ರೈಲಿನಲ್ಲಿ ಟಿಕೆಟ್ ತೋರಿಸಿ ಅಂತ ಕೇಳಿದ್ದಕ್ಕೆ ಮುಸುಕುಧಾರಿಯೊಬ್ಬ ಚಾಕುವಿನಿಂದ ಐವರಿಗೆ ಇರಿದು ಪರಾರಿಯಾಗಿದ್ದಾನೆ. ಈ ಘಟನೆಯಲ್ಲಿ ಓರ್ವ ಸಾನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಳಗಾವಿಯ ಖಾನಾಪುರ ತಾಲೂಕಿನ ಲೊಂಡ ಬಳಿಯಲ್ಲಿ ಪಾಂಡಿಚೇರಿ-ಮುಂಬೈ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಟಿಕೆಟ್ ಕೇಳಿದಂತ ಟಿಸಿ ಮೇಲೆ ಚಾಕುವಿನಿಂದ ಹಲ್ಲೆಗೆ ಮುಸುಕುಧಾರಿಯೊಬ್ಬ ಮುಂದಾದನು. ಇದನ್ನು ತಡೆಯೋದಕ್ಕೆ ಟ್ರೇನ್ ಅಟೆಂಡರ್ ದೇವಋಷಿ ವರ್ಮಾ ಮುಂದಾಗಿದ್ದಾನೆ. ಈ ವೇಳೆ ಮುಸುಕುಧಾರಿಯೊಬ್ಬ ಆತನ ಮೇಲೆ ಚಾಕುವಿನಿಂದ ಇರಿದಿದ್ದಾನೆ.
ಇದಲ್ಲದೇ ರೈಲಿನಲ್ಲಿದ್ದಂತ ನಾಲ್ವರು ಪ್ರಯಾಣಿಕರು ಈ ಘಟನೆಯಿಂದ ಮುಸುಕುಧಾರಿಯನ್ನು ಹಿಡಿಯೋದಕ್ಕೆ ಹೋದಾಗ ಅವರ ಮೇಲೂ ಚಾಕುವಿನಿಂದ ದಾಳಿ ನಡೆಸಿ, ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದಂತ ಟ್ರೈನ್ ಅಟೆಂಡರ್ ದೇವಋಷಿ ವರ್ಮಾ(23) ತೀವ್ರ ರಕ್ತ ಸ್ತ್ರಾವದಿಂದ ಸಾವನ್ನಪ್ಪಿದ್ದಾನೆ. ಈ ಘಟನೆಯಲ್ಲಿ ಗಾಯಗೊಂಡಿದ್ದಂತ ನಾಲ್ವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚಾಲುಕ್ಯ ರೈಲು ಧಾರವಾಡದಿಂದ ಬೆಳಗಾವಿಯತ್ತ ಬರುತ್ತಿದ್ದ ವೇಳೆ ಘಟನೆ ನಡೆದಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ನಾಲ್ವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Lightning Strikes: ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಸಿಡಿಲು ಬಡಿದು 11 ಮಂದಿ ಸಾವು
‘ಆಧಾರ್ ಕಾರ್ಡ್’ ನವೀಕರಿಸಲು ಈ ದಿನವೇ ಲಾಸ್ಟ್ ಡೇಟ್ : ಈ ಸರಳ ರೀತಿಯಲ್ಲಿ ‘ಅಪ್ ಡೇಟ್’ ಮಾಡಿಸಿಕೊಳ್ಳಿ