ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ನಗರದ ಖಾಸಗಿ ಶಾಲೆಯೊಂದರಲ್ಲಿ ಶಾಲಾ ಕ್ರೀಡಾಕೂಟದ ವೇಳೆಯಲ್ಲಿ ವಿದ್ಯುತ್ ಶಾಕ್ ಅವಘಡ ಸಂಭವಿಸಿತ್ತು. ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದರೇ, 13 ಮಂದಿ ಗಾಯಗೊಂಡಿರೋದಾಗಿ ತಿಳಿದು ಬಂದಿದೆ.
ಈ ಕುರಿತಂತೆ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ದಿನಾಂಕ: 10.022024ರ ಇಂದು ಮಧ್ಯಾಹ್ನ ಸುಮಾರು 2.00 ಗಂಟೆ ಸಮಯದಲ್ಲಿ ಗೌರಿಬಿದನೂರು ನಗರದ ಶ್ರೀ ರಾಮಕೃಷ್ಣ ಶಾರದದೇವಿ ವಿದ್ಯಾಮಂದಿರ ಶಾಲೆಯಲ್ಲಿ ಈ ದಿನ ಶಾಲಾ ಮಕ್ಕಳ ಪೋಷಕರಿಗೆ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಮೈದಾನದಲ್ಲಿ ಪೆಂಡಾಲ್ ಹಾಕಿ ಚೇರ್ ಹಾಕಿದ್ದು ಮಧ್ಯಾಹ್ನ ಕ್ರೀಡೆಗಳು ನಡೆಯುತ್ತಿದ್ದಾಗ ಏಕಾ ಏಕಿ ಸುಂಟರ ಗಾಳಿ ಬೀಸಿದ್ದ ಕಾರಣ ಶಾಲೆಯ ಆವರಣದ ಮೇಲ್ಬಾಗದಲ್ಲಿ ಹಾದು ಹೋಗಿದ್ದು 66 ಕೆ.ವಿ ವಿದ್ಯುತ್ ಲೈನ್ ಗೆ ಪೆಂಡಾಲ್ ಟಚ್ ಆಗಿದೆ. ಹಾರಿಹೋಗುತ್ತಿದ್ದ ಪೆಂಡಾಲ್ ಹಿಡಿಯಲು ಹೋದ ಶಿಕ್ಷಕರು, ಮಕ್ಕಳು, ಪೋಷಕರು ಸೇರಿ 18 ಜನರಿಗೆ ವಿದ್ಯುತ್ ಶಾಕ್ ನಿಂದ ಗಾಯಗಳಾಗಿರುತ್ತದೆ ಎಂಬುದಾಗಿ ತಿಳಿದು ಬಂದಿದೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆ ಹಾಗೂ ಅರುಣಾ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. 18 ಜನರ ಗಾಯಾಳುಗಳ ಪೈಕಿ 2 ಮಕ್ಕಳು, 3 ಜನ ಪೋಷಕರು, 5 ಜನ ಶಿಕ್ಷಕರು ಅರುಣ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಪೋಷಕರಾದ ರಾಘವೇಂದ್ರ ಬಿನ್ ನಲ್ಲಪ್ಪರೆಡ್ಡಿ. 45 ವರ್ಷ, ಜಿರಾಯ್ತಿ, ವಕ್ಕಲಿಗರು, ನಾಗೇನಹಳ್ಳಿ ಗ್ರಾಮ, ಮಧುಗಿರಿ ತಾಲ್ಲೂಕುರವರು ಮೃತಪಟ್ಟಿರುತ್ತಾರೆ ಎಂದು ತಿಳಿದು ಬಂದಿದೆ.
ತಹಶೀನ್ D/O ಮೆಹಬೂಬ್, 25 ವರ್ಷ ಶಿಕ್ಷಕರು, ವಿರೂಪಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಐ.ಸಿ.ಯು ನಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ ಉಳಿದ 8 ಜನರು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಅರುಣಾ ಖಾಸಗಿ ಆಸ್ಪತ್ರೆಯವರು ತಿಳಿಸಿರುತ್ತಾರೆ.
ಜೊತೆಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ 4 ಮಕ್ಕಳು, 2 ಪೋಷಕರು, 2 ಶಿಕ್ಷಕರು ದಾಖಲಾಗಿದ್ದು, 8 ಜನರು ಪ್ರಾಣಾಪಾಯದಿಂದ ಪಾರಾಗಿರುವುದಿಂದ ಸರ್ಕಾರಿ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿರುತ್ತಾರೆ.
ಸರ್ಕಾರಿ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಮಾಡಿದ್ದು ಎಲ್ಲಾ ಸಹಕಾರ ನೀಡುತ್ತಿದ್ದಾರೆ. ಮಾನ್ಯ ಇಂಧನ ಸಚಿವರಾದ ಶ್ರೀ ಕೆ ಜೆ ಜಾರ್ಜ್ ಅವರ ನಿರ್ದೇಶನದ ಮೇರೆಗೆ ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ಖರ್ಚು ವೆಚ್ಚವನ್ನು ಸರಕಾರವೇ ಭರಿಸಲಿದೆ.
ಗೌರಿಬಿದನೂರು ನಗರದ ಅರುಣ ಖಾಸಗಿ ಆಸ್ಪತ್ರೆಯಲ್ಲಿ ಮತ್ತು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಪಡೆಯುತ್ತಿರುವವರ ವಿವರ
1. ರಾಘವೇಂದ್ರ ಬಿನ್ ನಲ್ಲಪ್ಪರೆಡ್ಡಿ. 45 ವರ್ಷ, ಜಿರಾಯ್ತಿ, ವಕ್ಕಲಿಗರು, ನಾಗೇನಹಳ್ಳಿ ಗ್ರಾಮ ಮಧುಗಿರಿ ತಾಲ್ಲೂಕು (ಮೃತಪಟ್ಟಿರುತ್ತಾರೆ)
2. ತಹಶೀನ್ D/O ಮೆಹಬೂಬ್, 25 ವರ್ಷ, ಶಿಕ್ಷಕರು, ವಿರೂಪಸಂದ್ರ ಗ್ರಾಮ, ಗೌರಿಬಿದನೂರ್ ತಾಲ್ಲೂಕು (ಕೈ ಮತ್ತು ಕಾಲಿಗೆ ಗಾಯ ಐ.ಸಿ.ಯು ನಲ್ಲಿ ಚಿಕಿತ್ಸೆ).
3. ಮನೀಶ್ ಬಿನ್ ಹರೀಶ್, 14 ವರ್ಷ, 8ನೇ ತರಗತಿ, ಗಂಗಾನಗರ, ಗೌರಿಬಿದನೂರು ನಗರ (ಗಾಯಗಳು).
4. ಚಂದ್ರಶೇಖರ್ ಬಿನ್ ಆದೆಪ್ಪ, 32 ವರ್ಷ, ನಾಯಕರು, ಪ್ಯಾಕ್ಟರಿಯಲ್ಲಿ ಕೆಲಸ, ಕುಡುಮಲಕುಂದಿ ಗ್ರಾಮ, ಗೌರಿಬಿದನೂರು ತಾಲ್ಲೂಕು (ಯು.ಕೆ.ಜಿ ನಿಹಾರಿಕಾಗೆ ಕಾಲು ಮತ್ತು ಕೈಗೆ ಗಾಯ)
5. ಉಮಾ ಕೋಂ ಪ್ರಕಾಶ್, 53 ವರ್ಷ, ಬ್ರಾಹ್ಮಣರು, ಶಿಕ್ಷಕ, ವಿನಾಯಕನಗರ, ಗೌರಿಬಿದನೂರ- ನಗರ (ಭುಜ ಮತ್ತು ಕೈಗೆ ಗಾಯ)
6. ನಿರ್ಮಲ ಕೋಂ ಶಿವಶಂಕರ್, 32 ವರ್ಷ. ಎಸ್.ಸಿ ಜನಾಂಗ, ಶಿಕ್ಷಕರು, ಇಡಗೂರು ಗ್ರಾಮಾ ಗೌರಿಬಿದನೂರು ತಾಲ್ಲೂಕು (ಬಲಗೈ ಗಾಯ)
7. ರೂಪ ಕೋಂ ರಾಘವೇಂದ್ರ, 38 ವರ್ಷ, ಜಿರಾಯ್ತಿ, ನಾಗೇನಹಳ್ಳಿ ಗ್ರಾಮ, (ಬಲತೊಡೆ ಮತ್ತು ಎರಡೂ ಕೈಗಳಿಗೆ ಗಾಯ)
8. ಚಂದ್ರಕಲಾ ಕೋಂ ಸತೀಶ್ ಬಾಬು, 33 ವರ್ಷ, ನಾಯಕರು, ಗೃಹಿಣಿ, ಕಲ್ಲೂಡಿ ಗ್ರಾಮ ಗೌರಿಬಿದನೂರು ತಾಲ್ಲೂಕು. (ಬಲಗಾಲು ಮತ್ತು ಎಡಗಾಲಿಗೆ ಗಾಯಗಳು)
9. ಕಿರಣ್ ಕುಮಾರ್ ಬಿನ್ ಅವಲಕೊಂಡಪ್ಪ, 13 ವರ್ಷ, 7ನೇ ತರಗತಿ, ಗ್ರೀನ್ ಸಿಟಿ ಲೇಔಟ್ ಗೌರಿಬಿದನೂರು ನಗರ. (ಬಲಗಾಲಿಗೆ ಗಾಯ)
10. ವಿಜಯಲಕ್ಷ್ಮೀ ಕೋಂ ನಾಗರಾಜ್, 26 ವರ್ಷ, ದಿನ್ನೆಹೊಸಹಳ್ಳಿ ಗ್ರಾಮ ನಗರಗೆರೆ ಹೋಬಳಿ ಗೌರಿಬಿದನೂರು ತಾಲ್ಲೂಕು.
11. ನಟರಾಜ ಬಿನ್ ರಾಜಗೋಪಾಲ್ (ಚಿಟ್ಟಿ) 59 ವರ್ಷ, ಗೌರಿಬಿದನೂರು
12. ಕಮಲ ಕೋಂ ನಟರಾಜ, 49 ವರ್ಷ, ಗೌರಿಬಿದನೂರು ನಗರ.
13. ಸುಕನ್ಯ ಬಿನ್ ಲಕ್ಷ್ಮೀನಾರಾಯಣಪ್ಪ, 26 ವರ್ಷ, ವಾಟದಹೊಸಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು.
ರಾಜ್ಯ ‘ಗುತ್ತಿಗೆ, ಹೊರಗುತ್ತಿಗೆ ನೌಕರ’ರಿಗೆ ಭರ್ಜರಿ ಸಿಹಿಸುದ್ದಿ: ಸಮಾನ ಕೆಲಸಕ್ಕೆ, ‘ಸಮಾನ ವೇತನ’ ಜಾರಿ
BREAKING: ‘ಸಾರಿಗೆ ಸಚಿವ ರಾಮಲಿಂಗಾರೆಡ್ಡಿ’ಗೆ ಜಾಮೀನು ರಹಿತ ‘ವಾರೆಂಟ್ ಜಾರಿ’