ಪಣಜಿ: ಗೋವಾದ ಕಲಂಗುಟ್ ಬೀಚ್ನಲ್ಲಿ ದೋಣಿ ಮಗುಚಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 13 ಜನರನ್ನು ರಕ್ಷಿಸಲಾಗಿದೆ. ಕಾರ್ಯಾಚರಣೆಯಲ್ಲಿ 13 ಜನರನ್ನು ರಕ್ಷಿಸಲಾಗಿದ್ದು, ಅವರಲ್ಲಿ ಆರು ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
“ಕಲಂಗುಟ್ ಬೀಚ್ನಲ್ಲಿ ದೋಣಿ ಮಗುಚಿ ಬಿದ್ದಿದೆ… ಘಟನೆಯಲ್ಲಿ ನಾವು 13 ಜನರನ್ನು ರಕ್ಷಿಸಿದ್ದೇವೆ. ನಿಖರವಾದ ಜನರ ಸಂಖ್ಯೆ ನಮಗೆ ತಿಳಿದಿಲ್ಲ. ಆದರೆ ದೋಣಿಯ ಅಡಿಯಲ್ಲಿ ಸಿಲುಕಿದ್ದ ಒಂದೇ ಕುಟುಂಬದ ಸುಮಾರು 6 ಜನರು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ… ಘಟನೆಗೆ ಕಾರಣವೇನೆಂದು ನಮಗೆ ತಿಳಿದಿಲ್ಲ. ಆ 6 ಜನರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ” ಎಂದು ಲೈಫ್ ಗಾರ್ಡ್ ಉಸ್ತುವಾರಿ ಸಂಜಯ್ ಯಾದವ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಗೋವಾದ ಬಾಗಾ ಬೀಚ್ನಲ್ಲಿ ನೋಂದಣಿಯಾಗದ ಜಾಯ್ರೈಡ್ ದೋಣಿ ಮಗುಚಿದ ಪರಿಣಾಮ 12 ಪ್ರವಾಸಿಗರನ್ನು ಜೀವರಕ್ಷಕರು ರಕ್ಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಬೆಂಗಳೂರು ಜನತೆಗೆ ಗುಡ್ ನ್ಯೂಸ್: ಈ ಮಾರ್ಗದಲ್ಲಿ ಹೊಸ ಮೆಟ್ರೋ ಫೀಡರ್ ‘BMTC ಬಸ್’ ಸಂಚಾರ ಆರಂಭ | BMTC Bus Service