ಶಿವಮೊಗ್ಗ: ಶಿವಮೊಗ್ಗ ಟೌನ್ ಮತ್ತು ಕುಂಸಿ ನಿಲ್ದಾಣಗಳ ಮಧ್ಯೆ ಇರುವ ಕೋಟೆಗಂಗೂರು ನಿಲ್ದಾಣದಲ್ಲಿ ಮುಖ್ಯ ಮಾರ್ಗದ ಪುನರ್ ನಿರ್ಮಾಣ ಕೆಲಸದ ನಿಮಿತ್ತ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕೈಗೊಳ್ಳಲಾಗಿರುವುದು ಇದರಿಂದಾಗಿ ಕೆಳಕಂಡ ರೈಲು ಸೇವೆಗಳನ್ನು ಒಂದು ದಿನ ರದ್ದುಪಡಿಸಲಾಗಿದೆ, ವಿವರಗಳು ಈ ಕೆಳಗಿನಂತಿವೆ.
ರೈಲು ಸಂಖ್ಯೆ 56217 ತಾಳಗುಪ್ಪ–ಶಿವಮೊಗ್ಗ ಟೌನ್ ಪ್ಯಾಸೆಂಜರ್ ಹಾಗೂ ರೈಲು ಸಂಖ್ಯೆ 56218 ಶಿವಮೊಗ್ಗ ಟೌನ್–ತಾಳಗುಪ್ಪ ಪ್ಯಾಸೆಂಜರ್ ರೈಲುಗಳು ನಾಳೆ ಒಂದು ದಿನ ರದ್ದುಗೊಳಿಸಲಾಗಿದೆ.








