ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿ ಖ್ಯಾತ ಉದ್ಯಮಿ ಡಾ.ಪ್ರಕಾಶ್ ಶೆಟ್ಟಿ ಜನ್ಮ ದಿನದ ಪ್ರಯುಕ್ತ ಅವರ ಅಭಿಮಾನಿ ಬಳಗ ಆಯೋಜಿಸಿದ್ದಂತ ರಕ್ತದಾನ ಶಿಬಿರವು ಯಶಸ್ವಿಯಾಗಿ ನಡೆಯಿತು.
ಈ ವೇಳೆ ಸಾಗರ ಬಂಟರ ಸಂಘದ ತಾಲ್ಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಮಾತನಾಡಿ, ಡಾ.ಪ್ರಕಾಶ್ ಶೆಟ್ಟಿ ಅವರ ಅಭಿಮಾನಿ ಬಳಗದಿಂದ ಈ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಖ್ಯಾತ ಉದ್ಯಮಿ ಡಾ.ಪ್ರಕಾಶ್ ಶೆಟ್ಟಿ ಆಗಿದ್ದಾರೆ. ಅವರು ಬಂಟರ ಸಮುದಾಯದ ಹೆಮ್ಮೆಯಾಗಿದ್ದಾರೆ ಎಂದರು.
ಡಾ.ಪ್ರಕಾಶ್ ಶೆಟ್ಟಿ ಸಾಮಾಜಿಕ ಕಳಕಳಿ ಉಳ್ಳವರಾಗಿದ್ದಾರೆ. ಅವರು ತಮಗಾಗಿ ಈವರೆಗೆ ಬದುಕಿಲ್ಲ. ತಾವು ಗಳಿಸಿದ ಹಣದಲ್ಲಿ ದೊಡ್ಡ ಪಾಲನ್ನೇ ಈ ಸಮಾಜದ ಏಳಿಗೆಗಾಗಿ ನೀಡುತ್ತಾ ಬಂದಿದ್ದಾರೆ. ಸಾಗರದ ಬಂಟರ ಸಂಘದ ಸಭಾ ಭವನಕ್ಕೆ 50 ಲಕ್ಷ ಕೊಡುಗೆ ನೀಡಿದ್ದಾರೆ. 3.50 ಕೋಟಿ ವೆಚ್ಚದಲ್ಲಿ ಈ ಕಟ್ಟಡ ನಿರ್ಮಿಸಲಾಗಿದ್ದು, ನವೆಂಬರ್ ನಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಹೇಳಿದರು.
ಕೇವಲ ಡಾ.ಪ್ರಕಾಶ್ ಶೆಟ್ಟಿ ಅವರು ಸಾಗರಕ್ಕೆ ಮಾತ್ರ ತಮ್ಮ ಸಾಮಾಜಿಕ ಸೇವೆಗೈಯ್ಯದೇ, ರಾಜ್ಯದ ವಿವಿಧೆಡೆ ಸಮುದಾಯ ಭವನ ಸೇರಿದಂತೆ ಇತರೆ ಸಾಮಾಜಿಕ ಕಾರ್ಯಗಳಿಗೆ ಕೊಡುಗೆ ನೀಡಿದ್ದಾರೆ. ಅವರ ಸೇವೆಯ ಸ್ಮರಣೀಯವಾದದ್ದು. ಅವರಿಂದ ಅನುಕೂಲ ಪಡೆದವರು ಸಾವಿರಾರು ಮಂದಿಯಾಗಿದ್ದಾರೆ ಎಂಬುದಾಗಿ ಕೊಂಡಾಡಿದರು.
ರೋಟರಿ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ.ಬಿ.ಜಿ ಸಂಗಮ್ ಅವರು, ಸಾಗರದಲ್ಲಿ ರೋಟರಿ ಬ್ಲಡ್ ಬ್ಯಾಂಕ್ ಆರಂಭಗೊಂಡಿದ್ದರಿಂದ ಸಾಕಷ್ಟು ಜನರ ಜೀವ ಉಳಿಸಲು ಸಾಧ್ಯವಾಯಿತು. ತುರ್ತಾಗಿ ಬೇಕಾಗುವ ರಕ್ತವನ್ನು ಇಲ್ಲೇ ಪಡೆಯಲು ಅವಕಾಶವಾಯಿತು. ಇದರಿಂದ ಬಹಳಷ್ಟು ಜನರ ಜೀವ ಉಳಿದಿದೆ ಎಂದರು.
ಇದೇ ಸಂದರ್ಭದಲ್ಲಿ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಡಾ.ಪ್ರಕಾಶ್ ಶೆಟ್ಟಿ ಅವರ ಜನ್ಮ ದಿನದ ಪ್ರಯುಕ್ತ ರೋಗಿಗಳಿಗೆ ಹಣ್ಣು-ಹಂಪಲನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮ.ಸ ನಂಜುಂಡಸ್ವಾಮಿ, ವೈದ್ಯ ಡಾ.ಸಚಿನ್, ರೋಟರಿ ಬ್ಲಡ್ ಬ್ಯಾಂಕ್ ಅಧ್ಯಕ್ಷ ಹೆಚ್.ಎಂ ಶಿವಕುಮಾರ್, ಅಶ್ವತ್ಥನಾರಾಯಣ, ಬಂಟರ ಸಮಾಜದ ಪ್ರಮುಖರಾದಂತ ನಿತ್ಯಾನಂದ ಶೆಟ್ಟಿ, ಗೋಪಾಲ ಶೆಟ್ರು, ಅಣ್ಣಪ್ಪ ಶೆಟ್ಟಿ, ಸತ್ಯನಾರಾಯಣ ಶೆಟ್ಟಿ, ಪ್ರಕಾಶ್ ಶೆಟ್ಟಿ, ಸಾಗರ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಸಮಿತಿ ಸದಸ್ಯ ಜಯರಾಮ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಕೇಸ್: ನಾಳೆಯಿಂದ ‘SIT ತನಿಖೆ’ ಆರಂಭ, ಧರ್ಮಸ್ಥಳಕ್ಕೂ ಭೇಟಿ
ರಾಜ್ಯದಲ್ಲಿ ‘ಅನಧಿಕೃತ ಐಪಿ ಸೆಟ್’ ಹೊಂದಿರುವ ರೈತರಿಗೆ ‘ಸಿಎಂ ಸಿದ್ಧರಾಮಯ್ಯ’ ಗುಡ್ ನ್ಯೂಸ್